ಎಣ್ಮೂರಿನ ಬಾರಕೂರುರಾಜ್ಯದ ಹಿನ್ನಲೆಯಇತಿಹಾಸ : ಬಾರಕೂರು ತುಳು ರಾಜ್ಯವನ್ನುಕಂಚಿಯ ಪಲ್ಲವರುಕ್ರಿ. ಶ ಪೂರ್ವದಿಂದಲೇ ಸಾರ್ವ ಭೌಮರಾಗಿ ಆಳಲು ಪ್ರಾರಂಭಿಸಿದವರು ಕ್ರಿ. ಶ 350 ರತನಕ ಆಳಿದರು. ಆಗ ತುಳು ರಾಜ್ಯದ ಪಯಸ್ಪಿನಿ ನೇತ್ರಾವತಿ ಮತ್ತು ಗಂಗೊಳ್ಳಿ ನದಿಗಳ ಮೂರುತಗ್ಗು ಪ್ರದೇಶಗಳನ್ನು ತ್ರಿಗರ್ತ ಪ್ರದೇಶವೆಂದು ಹೆಸರಿಸಿ ಆಳಿದರು. ಕ್ರಿ. ಶ 78 ರಲ್ಲಿ ಭೂತಾಳ ಪಾಂಡ್ಯರನ್ನು ಮಾಂಡಲಿಕರಾಗಿ ನಿಯಮಿಸಿದರು. ಭೂತಾಳ ಪಾಂಡ್ಯರು ತುಳು ರಾಜ್ಯವನ್ನು 14 ರ ಮಾಗಣೆಗಳಾಗಿ ವಿಂಗಡಿಸಿದರು. ಕ್ರಿ. ಶ 345 ರಲ್ಲಿ ಭೂತಾಳ ಪಾಂಡ್ಯರಕೊನೆಯ ಹಳ್ಳಿ ದೇವಿಯಕಾಲದಲ್ಲಿ ಭೂತಾಳ ಪಾಂಡ್ಯರ ಆಳ್ವಿಕೆ ಕೊನೆಗೊಂಡಿತು. ಮುಂದೆ ಶತಮಾನಗಳೇ ಕಳೆದಾಗ ಆಳುವರು ಪ್ರಸಿದ್ದಿಗೆ ಬಂದು ಮಾಂಡಲಿಕರಾಗಿಕ್ರಿ. ಶ 567 – 1399 ರ ವರೆಗೆಅತೀ ಧೀರ್ಘ ಸಮಯ ಆಳಿದ ಇತಿಹಾಸದೊರಕುತ್ತದೆ.