ಕೂಟಾಜೆಯಲ್ಲಿದ್ದ ಕೋಟಿ ಚೆನ್ನಯರು ದನ ಕೂಗಿದ ಕಡೆ ಸಾಗಿದರು. ಮನೆಯ ಎದುರಿನ ಗದ್ದೆಗಿಳಿಯ ಬೇಕಾದರೆ ತಡಮೆ ದಾಟಬೇಕಿತ್ತು. ತಡಮೆ ದಾಡಿದವರು ಮನೆಯ ಅಂಗಳಕ್ಕೆ ಬಂದು ನಿಂತು ಪಯ್ಯ…..ಪಯ್ಯ….. ಎಂದು ಕರೆದರು. ಪಯ್ಯ ಬೈದ್ಯ ಇಲ್ಲವೇ ಎಂದು ಗಟ್ಟಿಯಾಗಿ ಕೂಗಿ ಕರೆದರು. ಬಾಗಿಲು ಹಾಕಿದ್ದ ಮನೆಯಿಂದ ಯಾವ ಸುದ್ದಿಯೂ ಬರಲಿಲ್ಲ. ಚೆನ್ನಯ ಪಯ್ಯ ಇಲ್ಲವೇ ಎಂದು ಮತ್ತೂ ಗಟ್ಟಿಯಾಗಿ ಕೂಗಿ ಕರೆದನು. ಯಾರದು ಕರೆಯುವುದು? ಒಂದು ಹೆಣ್ಣಿನ ಸ್ವರ ಕೇಳಿಸಿತು.

ಕಿನ್ನಿದಾರು ಮನೆ ಎದುರುಗಡೆ ಇರುವ ಕೋಟಿ ಚೆನ್ನಯರ ಪ್ರತೀವೆಂದು ಹೇಳಲಾಗುವ ತಾಳೆ ಮರಗಳು

ಈ ಮನೆಯ ಒಡೆಯ ತನ್ನ ಕುಟುಂಬದೊಂದಿಗೆ ಮಡಿಕೇರಿಯ ಸೋಮವಾರ ಪೇಟೆಯಲ್ಲಿ ವಾಸ ವಾಗಿರುವನು ವಿಶೇಷ ಸಂದರ್ಭಗಳಲ್ಲಿ ಇಲ್ಲಿಗೆ ಬಂದು ನಂಬಿಕೆಯು ಆರಾಧನೆ ಮುಗಿಸಿ ಹೋಗುವರಂತೆ! ಮನೆಯಲ್ಲಿ ಇತರರು ವಾಸವಾಗಿದ್ದು ಮನೆಗೆ ಸಂಬಂಧ ಪಟ್ಟ ಕೃಷಿ ಕಾರ್ಯವನ್ನು ಮುಂದುವರಿಸಿ ಕೊಂಡು ಹೋಗುತ್ತಾರೆ. ಆಗಾಗ ಈ ವ್ಯವಸ್ಥೆಯಲ್ಲಿ ಕುಟುಂಬಗಳು ಬದಲಾವಣೆಯಾಗುವುದೂ ಇದೆಯಂತೆ.

ಬೈಲಬದಿಯ ತಡಮೆಯನ್ನು ದಾಟಿ ಗದ್ದೆ ಹುಣಿಗೆ ಕಾಲಿಡುವಾಗ ನಮ್ಮನ್ನು ಸ್ವಾಗತಿಸುವಂತೆ ಕಂಡು ಬರುವ ಎರಡು ತಾಳೆಮರಗಳು ವಿಸ್ಮಯವನ್ನು ಉಂಡು ಮಾಡುತ್ತದೆ. ಭಾರಿ ಗಾತ್ರದ ಈ ಮರಗಳಲ್ಲಿ ಹಲವು ವ್ಯತ್ಯಾಸಗಳು ಕಂಡು ಬರುತ್ತಾವೆ ಒಂದು ಸ್ವಲ್ಪ ತಗ್ಗಾಗಿದ್ದು, ಎತ್ತರವಾಗಿ ಬೆಳೆದ ಇನ್ನೊಂದರಿಂದ ಕೊಬ್ಬಿ ಬೆಳೆದಂತೆ ಕಂಡು ಬರುತ್ತದೆ. ಈ ಮರಗಳಲ್ಲಿ ಒಂದು ಸತ್ತರೆ ಇನ್ನೊಂದು ಉಳಿಯುವುದಿಲ್ಲ. ಅದೂ ಸತ್ತು ಹೋಗುತ್ತದೆ. ಅದೇ ಸ್ಥಳದಲ್ಲಿ ಅವಳಿ ಮಕ್ಕಳಂತೆ ಇನ್ನೆರಡು ಹುಟ್ಟಿ ಬೆಳೆಯುತ್ತವೆ. ಇದು ಅಂದಿನಿಂದ ಬೆಳೆದು ಬಂದ ಒಂದು ರೂಢಿಯಂತೆ ಕಂಡುಬರುವುದು. ಇಲ್ಲಿ ಕಿನ್ನಿದಾರು ನೇಮ ತಂಬಿಲ ನಡೆಯುತ್ತಿದ್ದು ಬೈದೇರ್ಕಳ ನೇಮ ಮಾತ್ರ ಇಲ್ಲಿ ನಡೆಯುವ ಪದ್ಧತಿಯಿಲ್ಲ.