ಮುಖ್ಯಸ್ಥರು 
ಉಮೇಶ್ ಕೋಟ್ಯಾನ್

ಅರ್ಚಕರು 
ಬಾಬನ್ನ ಪೂಜಾರಿ

ಕೇಂಜ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕ್ಷೇತ್ರ ಮಹಾತ್ಮೆ

ಕೋಟಿ ಚೆನ್ನಯರು ಈ ತುಳುನಾಡಿನ ಪಂಚವರ್ಣದ ಮಣ್ಣಿನಲ್ಲಿ ವೀರ ಪುರುಷರಾಗಿ, ಅಲೌಕಿಕ ವೀರರಾಗಿ ಸಂಸ್ಕೃತಿಯ ಪ್ರತಿರೂಪವಾಗಿ ತಮ್ಮ ಅತೀ ಮಾನವ ಶಕ್ತಿಗಳಿಂದಾಗಿ ದೈವತ್ವಕ್ಕೇರಿದವರು. ಇದೀಗ ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಎಲ್ಲಾ ವರ್ಗದ ಜನರಿಂದ ಪೂಜಿಸಲ್ಪಡುವ ಶ್ರೀ ಆದಿ ಬೈದೇರುಗಳಾಗಿ ಕೆಲವೆಡೆ ಶ್ರೀ ಬ್ರಹ್ಮ ಬೈದರ್ಕಳರುವಾಗಿ ಶ್ರೀ ಬ್ರಹ್ಮ ದೇವರನ್ನು ಮುಂದಿಟ್ಟುಕೊಂಡು ಪರಿಶುದ್ಧ ವಿದಿವಿಧಾನಗಳಿಂದ ಆರಾಧನೆಗೊಳ್ಳುತ್ತಿರುವ ಶಕ್ತಿಗಳಾಗಿದ್ದಾರೆ.
ತಮ್ಮ ಅವಸಾನ ನಂತರ ಕಾಯಬಿಟ್ಟು ಮಾಯ ಸೇರುವ ಮೊದಲು ಮೂವರು ಬಲ್ಲಾಳರನ್ನು ಒಟ್ಟು ಸೇರಿಸಿ ನೇತ್ರಾದಿ ಗರಡಿಯಲ್ಲಿ ತಮ್ಮ ಚಪ್ಪರ ಕೊಂಬು ಇಟ್ಟು ತಮ್ಮ ಜೀವಮಾನವಿಡಿನಿಮಗಾಗಿ ಮೀಸಲಿಟ್ಟಿದ್ದೇವೆ, ಮುಂದೆ ನಮಗೆ ಗರಡಿ ನಿಮರ್ಾಣ ಮಾಡಿ ನಮ್ಮ ‘ಪೊಲರ್ು ಪೊಲಿಕೆ’ ಯನ್ನು ನೋಡಿ ಆನಂದಿಸಿ ನಮಗೆ ಗಿಂಡೆ ನೀರು ಇಟ್ಟು ನಮ್ಮವರಿಂದ ಆರಾದಿಸಿ ಎಂದು ಎಣ್ಮೂರು ಗರಡಿಯನ್ನು ಬಲ್ಲಾಳರಿಂದ ಸ್ಥಾಪಿಸುತ್ತಾರೆ. ಅಲ್ಲಿ ಅವರ ಕುಲ ದೇವರಾದ ಬೆರ್ಮರು ನೀವು ಮಾನವ ಹತ್ಯೆ ಮಾಡಿದ ದೋಷವುಳ್ಳವರಾಗಿರುವುದರಿಂದ ಗಂಗೆ ಸ್ನಾನ ಮಾಡಿ ಪರಿಶುದ್ಧರಾಗಿ ನಿಮ್ಮ ಕಲೆ ಕಾನರ್ಿಕ ತೋರಿಸಲು ತುಳುನಾಡಿಗೆ ಇಳಿಯಿರಿ ಎಂದು ಅಪ್ಪಣೆ ಕೊಟ್ಟಾಗ ಅವರು ತಮ್ಮ ಕಲೆ-ಕಾನರ್ಿಕ ತೋರಿಸಲು ಹೊರಟ ಪ್ರಥಮ ಕ್ಷೇತ್ರವೇ ಕುತ್ಯಾರು ಕೇಂಜ ಮಲೆ (ಕಾಡು).

ತುಳು ರಾಜ್ಯದ ಅಂದಿನ ಅರಸು ಮನೆತನದಲ್ಲಿ ಏಳು ಗಂಗೆ ಸ್ನಾನ ಮಾಡಿ ಅತ್ಯಂತ ಪ್ರಸಿದ್ಧರಾದ ಕುತ್ಯರು ಕುಂದ ಹೆಗ್ಗಡೆಯವರ ವಿಷಯವನ್ನು ಕೇಳಿ ತಿಳಿದಿದ್ದರು. ಕಾಶೀ ವಿಶ್ವನಾಥ ದೇವರನ್ನು ಎಲ್ಲೂರಲ್ಲಿ ಪ್ರತಿಷ್ಠಾಪಿಸಿದ ಹೆಗ್ಗಡೆಯ ದೇವಸ್ಥಾನವನ್ನು ಹುಡುಕುತ್ತಾ ಬರಲು ಮೂಲ್ಕಿ ಸೀಮೆಯ ಮಧ್ಯ ಎಂಬ ಪ್ರದೇಶದಲ್ಲಿ ಕಾಂತ-ಬಾರೆ ಬೂದ ಬಾರೆ ಇವರನ್ನು ಅಡ್ಡಗಟ್ಟಿ ಇದು ನಮ್ಮ ಸೀಮೆ. ಇಲ್ಲಿ ನಿಮಗೆ ಪ್ರವೇಶವಿಲ್ಲ ಎಂದರು. ಆಗ ಈರ್ವರು ಅವಳಿ ಕುಮಾರರಿಗೆ ಕದನ ವೇರ್ಪಟ್ಟು ಅದು ಏಳು ರಾತ್ರಿ ಏಳು ಹಗಲು ಆದರೂ ಕೊನೆಗೊಳ್ಳದಾಗ ಬಪ್ಪನಾಡು ದುಗರ್ಾ ದೇವಿ ಪ್ರತ್ಯಕ್ಷಳಾಗಿ ಮಕ್ಕಳೇ ನೀವಿಬ್ಬರೂ ಒಂದೇ ಕುಲದವರು. ಈರ್ವರು ಸರಿ ಸಮಾನರು ನಿಮ್ಮಲ್ಲಿ ಭೇದಭಾವ ಸರಿಯಲ್ಲ ಎಂದು ಉಪದೇಶ ನೀಡಿ ಕಾಂತಬಾರೆ-ಬೂದ ಬಾರೆ ಸಹೋದರರಿಗೆ ಮೂಲ್ಕಿ ಗ್ರಾಮದ ಒಂಭತ್ತು ಗ್ರಾಮಗಳು ಹಾಗೂ ಉಳಿದ ತುಳುನಾಡಿನ ಭಾಗವನ್ನು ಕೋಟಿ ಚೆನ್ನಯರಿಗೆ ಹಂಚಿಕೊಟ್ಟರು. ಆದ್ದರಿಂದ ಮೂಲ್ಕಿ ಸೀಮೆಯಲ್ಲಿ ಕೋಟಿ ಚೆನ್ನಯರಿಗೆ ಆರಾಧನಾ ಕ್ರಮವಿಲ್ಲ.

ಅಲ್ಲಿಂದ ಹೊರಟ ವೀರ ಪುರುಷರು ಆಟಿ ಅಮಾವಾಸ್ಯೆ ದಿವಸ ತಮ್ಮ ಮಾನವ ಹತ್ಯಾ ದೋಷ ಪರಿಹಾರ್ಥವಾಗಿ ಅರಬ್ಬಿ ಕಡಲು ಸ್ನಾನ ಮಾಡಿ ಎಲ್ಲೂರು ಶ್ರೀ ವಿಶ್ವನಾಥ ದೇವರನ್ನು ಭೇಟಿಯಾಗಲು ದೇವಸ್ಥಾನಕ್ಕೆ ಬಂದಾಗ ಉಲ್ಲಾಯನಲ್ಲಿ ಮಾತನಾಡಲು ಕ್ಷೇತ್ರ ಕಾಯುವ ಬಬ್ಬು ತಡೆಯುತ್ತಾನೆ. ಬಬ್ಬುವಿಗೂ ಅವಳಿ ವೀರರಿಗೂ ಕದನ ಏರ್ಪಟ್ಟು ಕಡೆಗೆ ಬಬ್ಬು ಸ್ವಾಮಿಯು ಕೋಟಿ ಚೆನ್ನಯರಿಗೆ ಶರಣಾಗಿ ಎಲ್ಲೂರು ಉಲ್ಲಾಯನ ಬಳಿ ಸಂವಹನ ಮಾಡಲು ಬಿಡುತ್ತಾನೆ. ದೇವರಲ್ಲಿ ಅವಳಿ ವೀರರು ತಮ್ಮ ಆಲಯ ನಿಮರ್ಾಣದ ಉದ್ದೇಶದ ಬಗ್ಗೆ ಸ್ಥಳ ಬೇಡುತ್ತಾರೆ. ಆಗ ದೇವರು ಈ ರಾಜ್ಯವನ್ನು ಆಳುವ ಕುತ್ಯಾರು ಅರಸು ಹೆಗ್ಗಡೆಯ ಬಳಿ ಹೋಗಲು ಅಪ್ಪಣೆ ನೀಡುತ್ತಾರೆ.

ಕುತ್ಯಾರು ಅರಮನೆಗೆ ಬಂದು ಹೆಗ್ಗಡೆಯ ಬಳಿ ವಿಷಯ ಪ್ರಸ್ತಾಪಿಸಿದಾಗ ಇಂತಹ ಶಕ್ತಿಗಳು ಸಾವಿರಾರು ಬಂದು ಆಲಯ ಕೇಳುತ್ತಾರೆ. ಅಂತವರಿಗೆ ಜಾಗ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ನಿಮ್ಮ ಕಲೆ ಕಾನರ್ಿಕಗಳನ್ನು ತೋರಿಸಿ? ಆಮೇಲೆ ನೋಡುವ ಎಂದು ಹೆಗ್ಗಡೆ ತಿಳಿಸಿದಾಗ ಅಲ್ಲಿಂದ ಕೋಟಿ ಚೆನ್ನಯರು ನೇರವಾಗಿ ದಿಟ್ಟಿಸಿ ನೊಡಿದಾಗ ಕಾಣ ಸಿಗುವವನೇ ‘ಮೈಂದ ಪೂಜಾರಿ’ (ಇಂದಿನ ಬಗ್ಗ ತೋಟ ಮನೆತನದ ಮೂಲ ಪುರುಷ)

ಈ ಮೈಂದ ಪೂಜಾರಿ ಅತೀ ಎತ್ತರದ ತೆಂಗಿನ ಮರವೇರಿ ಮೂತರ್ೆ ಮೂರುತ್ತಿರುವ ಸಂದರ್ಭ ಅಲ್ಲಿಗೆ ಬಂದ ಅವಳಿ ವೀರರು ಆ ತೆಂಗಿನ ಮರವನ್ನು ಮೂರು ಸಲ ನೆಲಕ್ಕೆ ಸರಿಯಾಗಿ ಬಗ್ಗಿಸುತ್ತಾರೆ. ಮೂರನೇ ಸಲ ಆತ ತುತ್ತ ತುದಿ ಇರುವಂತೆಯೆ ಅಷ್ಟೇ ಎತ್ತರದ ವ್ಯಕ್ತಿಗಳಾಗಿ ಆತನ ಕಿವಿಯಲ್ಲಿ ತಾವು ಬಂದಿರುವ ಉದ್ದೇಶವನ್ನು ಹೇಳುತ್ತಾರೆ. ಈ ಉದ್ದೇಶವನ್ನು ಮೈಂದ ಪೂಜಾರಿ ಅರಸರಲ್ಲಿ ಅರುಹಲು ಹಿಂದೇಟು ಹಾಕಿದಾಗ ನಿನಗೇನಾದರೂ ಹೆಚ್ಚುಕಡಿಮೆ ಆದಲ್ಲಿ ನಮ್ಮ ಇಬ್ಬರಲ್ಲಿ ನಿನ್ನನ್ನು ಒಬ್ಬನನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸುತ್ತಾರೆ.

ಇತ್ತ ಮನೆಗೆ ಬಂದ ಮೈಂದ ಪೂಜಾರಿ ನಡೆದ ಘಟನೆಯಿಂದ ಬವಳಿ ಜ್ವರದಿಂದ ಮನೆಯಲ್ಲಿ ಮಲಗಿರಲು ಪುಣ್ಯ ಪುರುಷರು ರಾತ್ರಿ ಕನಸಲ್ಲಿ ಬಂದು ಪುನಃ ಧೈರ್ಯ ನೀಡಿ ಮನೆಯ ಹೊರಗಿನ ಕಲ್ಲು ಬೆಂಚಲ್ಲಿ ಕುಳಿತು ಆತನಿಗೆ ಅಭಯ ನೀಡುತ್ತಾರೆ. ಇತ್ತ ಕುತ್ಯಾರು ಅರಮನೆಗೆ ಬಂದ ಮೈಂದ ಪೂಜಾರಿ ಅರಸರಲ್ಲಿ ವಿಷಯ ತಿಳಿಸಿದಾಗ ಅರಸರು ಏಳು ರಾತ್ರಿ ಏಳು ಹಗಲು ಹುಣಸೆ ಮರದ ಕಾಂಡದಿಂದ ಉರಿಯುವ ಏಳು ಕೈಯ ಕೊಪ್ಪರಿಗೆಯ ಎಣ್ಣೆಯಲ್ಲಿ ನೀನು ಮೂರು ಸಲ ಮಿಂದು ಬರಬೇಕು ಎಂದು ಅಪ್ಪಣೆ ಕೊಡುತ್ತಾರೆ.

ಕೋಟಿ ಚೆನ್ನಯರು ಮೈಂದ ಪೂಜಾರಿಗೆ ಅಭಯ ಹಸ್ತ ನೀಡಿ ಮೂರು ಎಲೆ ಗಂಧವನ್ನು ಕುಂಟಲಾ (ನೇರಳೆ) ಮರದ ಎಲೆಯಲ್ಲಿ ಪ್ರಸಾದಿಸಿ ಕೊಡುತ್ತಾರೆ. ಕೊಪ್ಪರಿಗೆಯಲ್ಲಿ ಎಣ್ಣೆ ಕೊತಕೊತನೆ ಕುದಿಯುವುದನ್ನು ಎಲ್ಲರೂ ಕಾಣುತ್ತಾರೆ. ನೀನು ಮಾತ್ರ ಎಲೆ ಗಂಧ ಪ್ರಸಾದವನ್ನು ಹಣೆಗೆ ಹಚ್ಚಿಕೋ ಎರಡನೆ ಎಲೆ ಗಂಧ ಪ್ರಸಾದವನ್ನು ಸೊಂಟದಲ್ಲಿ ಸಿಕ್ಕಿಸಿಕೋ, ಮೂರನೇ ಎಲೆ ಗಂಧ ಪ್ರಸಾದವನ್ನು ಕುದಿಯುವ ಎಣ್ಣೆಗೆ ಭಕ್ತಿಯಿಂದ ಹಾಕಿ ನಿನ್ನ ಕಿರಿಯ ಬೆರಳಿನಿಂದ ಎಣ್ಣೆಯನ್ನು ಪರೀಕ್ಷಿಸುವಾಗ ನಿನಗೆ ತಣ್ಣಗೆ ಕಾಣುತ್ತದೆ ಎಂದು ಅಭಯ ನೀಡುತ್ತಾರೆ.

ಊರಸಭೆಗೆ ಎಣ್ಣೆ ಕೊತಕೊತ ಕುದಿಯುವ ಹಾಗೆ ಕಾಣುತ್ತದೆ. ಆದರೆ ನೀನು ಮೊದಲ ಸಲ ಕೊಪ್ಪರಿಗೆಗೆ ಇಳಿದು ಬಂದು ತಲೆ ಕೊಡವಬೇಕು. ಆಗ ಅರಸರಿಗೆ ಹುರುಳಿ ಗಾತ್ರಕ್ಕೆ ದೊಡ್ಡದಾದ ಉರಿಬೊಕ್ಕೆ ಬೀಳುತ್ತದೆ. ಎರಡನೇ ಸಲ ಕೊಪ್ಪರಿಗೆಯಲ್ಲಿ ಇಳಿದು ಸ್ವಲ್ಪ ಹೊತ್ತು ತಡೆದು ಕೊಪ್ಪರಿಗೆಯಲ್ಲಿ ಮಲಗಿಕೊಳ್ಳು ಆಗ ನೀನು ಸತ್ತೆ ಎಂದು ಊರ ಜನ ತಿಳಿಯುತ್ತಾರೆ. ಆದರೆ ನೀನು ಮೇಲೆದ್ದು ಬಂದು ತಲೆ ಕೊಡಬೇಕು. ಅಂತಹ ಪುರದಲ್ಲಿ ರಾಣಿಗೆ ಮುಖದಲ್ಲಿ ಎಣ್ಣೆಯ ಬೊಕ್ಕೆ ಬಿದ್ದು ಚಿರಾಡುತ್ತಾ ಬರುತ್ತಾರೆ. ಮೂರನೇ ಸಲ ಕೊಪ್ಪರಿಗೆಯಿಂದ ಇಳಿದು ತಲೆ ಕೂದಲನ್ನು ಜೋರಾಗಿ ಕೊಡವಬೇಕು. ಆಗ ಅರಸರಾದಿ ಇಡೀ ಸಭೆಯು ಬಿಸಿ ಎಣ್ಣೆಯ ರಭಸಕ್ಕೆ ತತ್ತರಿಸಿ ಕಂಗಲಾಗಿ ಬೊಬ್ಬೆಡುತ್ತಾರೆ. ಆ ಸಂಧರ್ಭದಲ್ಲಿ ಎಣ್ಣೆಯಲ್ಲಿ ಮಿಂದು ಬಂದ ಮೈಂದ ಪೂಜಾರಿಗೆ ಕೋಟಿ ಚೆನ್ನಯರು ಇಬ್ಬರು ಓರ್ವನ ಮೈಯಲ್ಲಿ ಶ್ರೀ ಬ್ರಹ್ಮ ಬೈದೇರುಗಳಾಗಿ ಆವೇಶ ಬಂದು ಅರಸರಿಗೆ ಅಪ್ಪಣೆ ಕೊಡುತ್ತಾರೆ. ಅರಸರು ಭಕ್ತಿಯಿಂದ ಅವರ ನಿವೇದನೆಯನ್ನು ಆಲಿಸುತ್ತಾರೆ. ಇಲ್ಲಿಂದ ಬ್ರಹ್ಮ ಬೈದೇರುಗಳ ದರ್ಶನ ಆವೇಶದ ಪರಂಪರೆ ಕುತ್ಯಾರಿನ ಕೇಂಜ ಗರೋಡಿಯಲ್ಲಿ ಪ್ರಾರಂಬವಾಗುತ್ತದೆ.

ಹೀಗೆ ಕೋಟಿ ಚೆನ್ನಯರ ಕಲೆ ಕಾನರ್ಿಕವನ್ನು ಕಣ್ಣಾರೆ ಕಂಡ ಕುತ್ಯಾರು ಅರಸರು ಸಂತುಷ್ಟರಾಗಿ ನೀವು ಕೇಳಿದಹಾಗೆ ಉಂಗುಷ್ಠೆ ಜಾಗವಲ್ಲ. ನಿಮಗೆ ಎಲ್ಲಿ ಬೇಕೋ ಅಲ್ಲಿ ಆಲಯ ನಿಮರ್ಾಣ ಮಾಡಿರಿ ಎಂದಾಗ ಶ್ರೀ ಬೈದೇರುಗಳ ಅರಮನೆಯಿಂದ ಎಸೆದ ತೆಂಗಿನ ಫಲ ನಂದನ ಬಿತ್ತಿಲು ಎಂಬಲ್ಲಿ ಬಿದ್ದಾಗ ಅಲ್ಲಿ ಆಲಯ ನಿಮರ್ಾಣಕ್ಕೆ ಪ್ರಶಸ್ತ ಜಾಗವಲ್ಲದ ಕಾರಣ ಪುನಃ ಎಸೆದ ತೆಂಗಿನ ಫಲ ದಟ್ಟವಾದ ಕಾಡು ಮೃಗಗಳು ವಾಸ ಮಾಡುತ್ತಿದ್ದ ಜನರು ಹೆದರುತ್ತಿದ್ದ ಕೇಂಜ ಮಲೆಯ ಮಧ್ಯದಲ್ಲಿ ತೆಂಗಿನಕಾಯಿ ಬೀಳುತ್ತದೆ. ಮುಂದೆ ಅಲ್ಲಿ ಗರಡಿ ಆಲಯ ನಿಮರ್ಾಣ ಗೊಂಡು ಮುಂದೆ ಎಲ್ಲಾ ವರ್ಗದ ಶ್ರದ್ಧಾ ಕೇಂದ್ರವಾಗುತ್ತದೆ.

ಮುಂದೆ ಕುಂದ ಹೆಗ್ಡೆಯವರು ಬಿಲ್ಲವ ಜನಾಂಗದ ಜೇಷ್ಠನಾದ ಮೈಂದ ಪೂಜಾರಿಗೆ ನೂರಾರು ಎಕರೆ ಭೂಮಿಯುಳ್ಳ ಕಂಗು, ತೆಂಗು, ಬಾಳೆಗಳಿಂದ ಆವೃತವಾದ ಗುಡ್ಡ ಬೆಟ್ಟಗಳಿಂದ ಕೂಡಿದ ಪ್ರದೇಶವನ್ನು ಉಂಬಳಿಯಾಗಿ ಕೊಟ್ಟು ತನ್ನ ಆಸ್ಥಾನದಲ್ಲಿ ಪ್ರಮುಖ ಸ್ಥಾನ ಮಾನ ನೀಡಿ ಗೌರವಿಸುತ್ತಾರೆ. ಮುಂದೆ ಎಲ್ಲೂರು ಸೀಮೆಯ ಆರು ಮಾಗಣೆಯ ಕುತ್ಯಾರು, ಎಲ್ಲೂರು, ಕಳತ್ತೂರು, ಕೊಳಚ್ಚೂರು, ಕಣಿಯೂರು, ನಂದಿಕೂರು ಬಿಲ್ಲವ ಜಾತಿಯ ಮುಖ್ಯಸ್ಥನಾಗಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬಿಲ್ಲವ ಪ್ರಮುಖರಾಗಿ ನೇಮೋತ್ಸವ ಹಾಗೂ ಇತರ ಉತ್ಸವ ಸನಾರಂಭದಲ್ಲಿ ಈ ಮೈಂದ ಪೂಜಾರಿ ಮಧುಮಗನಂತೆ ಪೇಟಧರಿಸಿ ಕಚ್ಚೆ ಹಾಕಿ ಶೃಂಗಾರಿಸಿಕೊಂಡು ಮೂರುಕಾಲಿನ ಪೀಠದಲ್ಲಿ ಬಗ್ಗ ತೋಟ ಬಗ್ಗ ಪೂಜಾರಿ ಎಂಬ ನಾಮಾಂಕಿತದಲ್ಲಿ ಬಗ್ಗ ಪೀಠದಲ್ಲಿ ಪಟ್ಟಾಭಿಶಕ್ತನಾಗಿ ಮೆರೆಯುತ್ತಾನೆ.

ಅಲ್ಲದೇ ಎಲ್ಲೂರು ಸೀಮೆಯ 108 ಸ್ಥಳ ವಂದಿಗರೊಂದಿಗೆ ಎಲ್ಲೂರು ಗುತ್ತು, ಕುತ್ಯಾರು ಗುತ್ತು, ಕಳತ್ತೂರು ಗುತ್ತು, ಪಣಿಯೂರು ಗುತ್ತು, ಕೊಳಚೂರು ಗುತ್ತು, ನಂದಿಕೂರು ಗುತ್ತುಗಳ ಗುತ್ತು ಬರಿಕೆಯವರಿಗೆ ಅರಸರೊಂದಿಗೆ ಸುತ್ತುಗುತ್ತುಗಳಾಗಿ ಎಲ್ಲಾ ಧಾಮರ್ಿಕ ಕಾರ್ಯವನ್ನು ವಿದಿವತ್ತಾಗಿ ಊರ ಹತ್ತು ಸಮಸ್ತರೊಂದಿಗೆ ನೆರವೇರಿಸುವ ಅಧಿಕಾರ ಪಡೆಯುತ್ತಾನೆ.

66 ಗರಡಿಗೆ – 36 ತಾವುಗಳಿಗೆ 1ನೇ ಗರಡಿಯೆಂದು ಕೇಂಜ ಗರಡಿಯಲ್ಲದೇ 66ಗರಡಿ 36 ತಾವುಗಳಿಗೆ ಏಕೈಕ ಬಗ್ಗ ಪೂಜಾರಿ ಎಂದು ಶ್ರೀ ಬೈದೇರುಗಳು ತಮ್ಮ ಆವೇಶದಲ್ಲಿ ನುಡಿಯುತ್ತಾರೆ. ಇಂತಹ ನೇಮಕ ಬೇರೆ ಯಾವ ಗರಡಿಗಳಲ್ಲೂ ಇರುವುದಿಲ್ಲ. ಅಲ್ಲದೇ ಬೈದೇರುಗಳ ವಾಷರ್ಿಕ ನೇಮೋತ್ಸವದ ನಂತರ ಸೂಯರ್ೊದಯದ ಹೊತ್ತು ಬಗ್ಗ ಪೂಜಾರಿಯ ಮೂಲ ಪುರುಷ ಮೈಂದ ಪೂಜಾರಿಗೆ ಒಂದು ಕಟ್ಲೆ ನೇಮ ಜರಗುವುದು ಇಲ್ಲಿನ ವಿಶೇಷವಾಗಿದೆ.

ಆಟಿ ಅಮವಾಸ್ಯೆಯಂದು ಕೋಟಿ ಚೆನ್ನಯರು ಕೇಂಜ ಗರಡಿಗೆ ಬಂದಿದ್ದರಿಂದ ಆಟಿಯ ಅಗೆಲು ಎಲ್ಲೂರು ಸೀಮೆಯಲ್ಲಿ ಮಾತ್ರ ನಡೆಯುತ್ತದೆ. ಈ ಅಗೆಲು ಪ್ರಸಾದ 6 ಗ್ರಾಮಗಳಿಗೆ ತಲುಪುವಾಗ ಬೆಳಗಿನ ಹೊತ್ತು ಪ್ರಸಾದ ಹಾಳಾಗಿ ಹೋಗಿದ್ದರಿಂದ ಮುಂದೆ ಎಲ್ಲೂರೂ ಸೀಮೆಯ 6 ಇತರ ಗ್ರಾಮಗಳಲ್ಲೂ ಗರಡಿ ನಿಮರ್ಾಣವಾಗುತ್ತದೆ. ಈ ಎಲ್ಲಾ ಗರಡಿಗಳಿಗೆ ಕೇಂಜ ಗರಡಿ ಪ್ರಮುಖವಾಗಿದೆ. ಪ್ರಸ್ತುತ ‘ಕೇಂಜ ಗರಡಿ’ ವ್ಯಾಪ್ತಿಗೆ ಕುತ್ಯಾರು ಗ್ರಾಮ ಸೇರಿ ಎಲ್ಲೂರು ದೇವಸ್ಥಾನ ಅರಮನೆ ಕುತ್ಯಾರು ಗುತ್ತು ಬಗ್ಗ ಪೂಜಾರಿ ಸಹಿತ 16 ಸ್ಥಳ ವಂದಿಗರ ಹಾಗೂ ಗ್ರಾಮಸ್ಥರ ಕೂಡುವಿಕೆಯಿಂದ ವಿಜೃಂಭಣೆಯಿಂದ ಜರಗುತ್ತಿದೆ. ಕೇಂಜ ಗರಡಿಯ ಮಣ್ಣಿನ ಮಹಿಮೆ ತಿಳಿದವರು ಇಲ್ಲಿ ಭಕ್ತಿಯಿಂದ ಗಂಧ ಪ್ರಸಾದ ಸ್ವೀಕರಿಸಿದ ನಂತರ ಅಭೀಷ್ಟೆಯು ನೆರವೇರಿ ವರ್ಷ ವರ್ಷವೂ ಭಕ್ತಾದಿಗಳ ಸಂಖ್ಯೆ ಜಾಸ್ತಿಯಾಗುವುದು ಕೇಂಜ ಗರಡಿಯ ಗರಿಮೆಯಾಗಿದೆ.

ಅತ್ಯಂತ ಪುರಾತನ ಹಾಗೂ 66 ಮೂಲ ಗರಡಿಗಳ ಪೈಕಿ ಪ್ರಥಮ ಗರಡಿಯೆಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಕೇಂಜ ಗರಡಿಯು ಊರ ಪರವೂರ ಆಸ್ತಿಕ ಮಹನೀಯರ ಸಹಕಾರದಲ್ಲಿ ಇದೀಗ ಸಂಪೂರ್ಣ ಜಿಣರ್ೋದ್ಧಾರವಾಗಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ವಿತೀಯವಾಗಿ ನಿಮರ್ಾಣವಾಗಿ ಬ್ರಹ್ಮ ಕಲಶೋತ್ಸವವು ನಡೆದಿದೆ.

ಹೀಗೆ ಮದುವೆಯ ಭಾಗ್ಯ ಕೂಡಿಬರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉದ್ಯೊಗ, ವ್ಯವಹಾರ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ, ಕಾಣುತಿದ್ದಾರೆ.

ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿಯ ವಿಳಾಸ

ಕುತ್ಯಾರು ಕೇಂಜ ಶ್ರೀ ಬ್ರಹ್ಮ ಬೈದೆರ್ಕಳ ಗರಡಿ
ಅಂಚೆ: ಕುತ್ಯಾರು – 574116, ಉಡುಪಿ ಜಿಲ್ಲೆ

 

Photo Gallery