ಕೋಟಿ ಚೆನ್ನಯರು ಗತಿಸಿದ ಮೇಲೆ ಎಣ್ಮೂರು ಮೌನವೇ ಆವರಿಸಿದಂತೆ ಕಂಡರೂ, ಎಣ್ಮೂರಿನ ಸುದ್ದಿ ಮಾತ್ರ ತುಳುನಾಡಿನಾದ್ಯಂತ ಪಸರಿಸುತ್ತಿತ್ತು. ದೇವ ಬಲ್ಲಾಳರ ಜನಪ್ರಿಯತೆ, ಕೋಟಿ ಚೆನ್ನಯರ ಧೆರ್ಯ ಸಾಹಸ ನಿತ್ಯ ಕತೆಯಾಗಿ ಹರಡುತ್ತಲೇ ಇತ್ತು. ಈ ಮೇಳೆ ವಿಟ್ಲದ ಅರಸರ ಗರಡಿ ಸಾಧನೆಯ ಗುರುವಾಗಿ ದೇರಣ್ಣ ಗೌಡನೆಂಬಾತ ಗರಡಿ ಶಾಲೆಗೆ ಸೇರಿಕೊಂಡಿದ್ದ. ಈ ಶಾಲೆಗೆ ಕುರಿಯ ಏಳ್ನಾಡು ಗುತ್ತಿನ ಮಮ್ಮಾಲಿ / ಮಮ್ಮದೆ ಎಂಬ ಪ್ರಸಿದ್ಧ ತರುಣ ಗರಡಿ ಶಾಲೆಗೆ ಸೇರಿ ಗರಡಿ ವಿದ್ಯೆ ಕಲಿತು ದೇರಣ್ಣ ಗೌಡನ ಪಟ್ಟದ ಶಿಷ್ಯನಾದನು. ಮಮ್ಮದೆಯ ಆದರ್ಶ ಗುಣಗಳು, ಬಹುಮುಖಿ ಪ್ರತಿಭೆ, ದೇರಣ್ಣ ಗೌಡನ ಮನ ತುಂಬಿದವು.