ನಿಂತಿಕಲ್ಲಿಗೆ ಬಂಟರು ಬಂದು ತಲುಪಿದಾಗ ಮಯ ಮಯ ಕತ್ತಲಾಗುತ್ತಿತ್ತು. ಗೌಡರು ದೀಪ ಬೆಳಗಿಸಿ ಕಲ್ಲಿಗೆ ಆರತಿ ಮಾಡುತ್ತಿದ್ದರು. ಆ ಹೊತ್ತಿಗೆ ಅಲ್ಲಿಗೆ ಬಂದ ಕೋಟಿ ಚೆನ್ನಯರು ಗೌಡರಿಗೆ ವಂದಿಸಿ ತಾವಿಬ್ಬರೂ ಕಲ್ಲಿಗೆ ಮೂರು ಸುತ್ತು ಬಂದು ಅಡ್ಡ ಬಿದ್ದು ಗಂಧಪ್ರಸಾದ ತೆಗೆದುಕೊಂಡರು. ಗೌಡರು ಪಿಜಾವಿನ ಬಿಲ್ಲಾವರ ಮನೆಗೆ ಸೂಟೆ ಬೆಳಕಿನಿಂದ ಕಳುಹಿಸಿದರೆಂಬ ಮಾಹಿತಿ ಇದೆ. ಪಿಜಾವುನಲ್ಲಿ ಈಗಲೂ ಅನೇಕ ಬಿಲ್ಲವರ ಮನೆಗಳೂ ಇವೆ, ಇವರು ಹೆಚ್ಚಿನ ತಾಕತ್ತು ಇದ್ದವರಾಗಿ ಹಲವು ವರ್ಷಗಳ ಹಿಂದೆ ಕಂಬಳ, ಕೋಳಿ ಅಂಕದಲ್ಲಿ ಭಾಗವಹಿಸುವ ಪ್ರಮುಖರಾಗಿದ್ದರು. ಈಗ ಕೊಟಿ ಚೆನ್ನಯರು ಭೇಟಿ ಮಾಡಿದ ಮನೆಯಲ್ಲಿ ಬಂಟರಿದ್ದು ಆ ಮನೆಗೆ ಊರು ಸಾಗು ಎಂದು ಹೆಸರು ಇದೆ. (ಊರು ಸಾಗು=ಊರು ಸಾಗಿ ಬಂದ ಕೋಟಿ ಚೆನ್ನಯರು ನಿಂತ ಮನೆಗೆ ಊರುಸಾಗು ಎಂಬ ಹೆಸರೇ ಶಾಶ್ವತವಾಯಿತು.)