ಸುಮಾರು 350 ರಿಂದ 400 ವರ್ಷದ ಹಿಂದೆ ಬೊಮ್ಮರಬೆಟ್ಟು ಗ್ರಾಮದ ಜನರು, ಕಾರ್ಕಳ ತಾಲೂಕಿನ ಮೂಜೂರು, ಪಾಡಿದಗರಡಿ ಎಂಬಲ್ಲಿಗೆ ಹೋಗಿದ್ದರು. ಆಗ ಅಲ್ಲಿ ಬೊಮ್ಮರಬೆಟ್ಟು ಗ್ರಾಮದ ಜನರಿಗೆ ಕೋಟಿ ಚೆನ್ನಯರ ಗಂಧ ಪ್ರಸಾದ (ಪಾಡಿದಗರಡಿಯ ನೇಮದ ದಿವಸ) ಸಿಗದೆ ಇದ್ದಾಗ ಗ್ರಾಮದ ಜನರು ಬೇಸರದಿಂದ ಗ್ರಾಮಕ್ಕೆ ಹಿಂತಿರುಗುತ್ತಾರೆ. ಕೆಲವು ದಿನಗಳು ಕಳೆದಾಗ ಬೊಮ್ಮಾರಬೆಟ್ಟು ಗ್ರಾಮದ ಒಂದು ಬಂಡೆಕಲ್ಲಿನ ಮೇಲೆ ಪಾದದ ಗುರುತು ಅದರ ಪಕ್ಕದಲ್ಲೆ ಒಂದು ಸಣ್ಣ ರಂದ್ರದಲ್ಲಿ ನೀರು ಹರಿಯಿತು. ಇದನ್ನು ಗಮನಿಸಿದ ಗ್ರಾಮಸ್ಥರು ಅಷ್ಟಮಂಗಳ ಪ್ರಶ್ನೆ ಇಟ್ಟಾಗ….. ಪಾಡಿದಗರೋಡಿಯ ನೇಮದ ದಿವಸ ನಿಮಗೆ ಪ್ರಸಾದ ಸಿಗದೆ ಹಿಂತಿರುಗಿ ಬಂದಾಗ ನಾವು (ಕೋಟಿ ಚೆನ್ನಯರು) ಇಲ್ಲಿ ನೆಲೆ ನಿಲ್ಲಲು ನಿಮ್ಮ ಹಿಂದೆ ಬಂದು ಪಾದೆ ಕಲ್ಲಿನ ಮೇಲೆ ಜಿಗಿದು ಸೂರಿಯವನ್ನು ಕಲ್ಲಿನ ಮೇಲೆ ಹಾಕಿದ್ದೇವೆ. ಇಲ್ಲಿಯೇ ನಮ್ಮ ಗರಡಿಯನ್ನು ಕಟ್ಟಿ ಎಂದು ಅಷ್ಟಮಂಗಳದಲ್ಲಿ ಬಂದಿರುತ್ತದೆ. ಆ ಪ್ರಕಾರ ಇಲ್ಲಿ ಗರಡಿಯನ್ನು ಕಟ್ಟಲಾಗಿತ್ತು. ಕೋಟಿ ಚೆನ್ನಯರು ಮುರತಗುಡ್ಡೆ, ಪಾದೆಕಲ್ಲಿನಿಂದ ಬೊಮ್ಮಾರಬೆಟ್ಟಿಗೆ ಬಂದಿದ್ದಾರೆ ಎಂಬುದು ಸ್ಥಳಿಯರ ಅಭಿಪ್ರಾಯ.

ಪಾಡಿದ ಗರಡಿಯಿಂದ ಕೋಟಿ ಚೆನ್ನಯರು ಮಾತ್ರವಲ್ಲದೆ ಅಲ್ಲಿ ಇದ್ದ ಎಲ್ಲಾ ಪರಿವಾರ ದೈವಗಳು ಇಲ್ಲಿ ಬಂದು ನೆಲೆ ನಿಂತವು. ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಎದುರುಗಡೆ ಪುರಾತನವಾದ ಒಂದು ಹಲಸಿನ ಮರದ ಕಟ್ಟೆ ಇದೆ. ಈ ಮರವು ಕೋಟಿ ಚೆನ್ನಯರು ಬರುವ ಮೊದಲೇ ಇತ್ತೆಂದು ಜನರ ಅಭಿಪ್ರಾಯ. ಈ ಮರಕ್ಕೆ ಎನಾದರೂ ದೋಷ ಕಂಡುಬಂದಲ್ಲಿ, ಮರದಲ್ಲಿ ನಾಗರಹಾವು ಪ್ರತ್ಯಕ್ಷವಾಗುತ್ತದೆ. ಈ ಗರಡಿಗೆ 350 ರಿಂದ 400 ವರ್ಷದ ಇತಿಹಾಸವಿದೆ ಎಂಬುದು ಸ್ಥಳಿಯರ ಅಭಿಪ್ರಾಯ. ಇಲ್ಲಿ ಪ್ರತೀ ವರ್ಷ ಮಾಚರ್್ ತಿಂಗಳಲ್ಲಿ ಶ್ರೀ ಬ್ರಹ್ಮ ಬೈದೆರ್ಕಳ ನೇಮ ನಡೆಯುತ್ತದೆ, ಎರಡು ವರ್ಷಕ್ಕೊಮ್ಮೆ ಗರಡಿಯ ಬೂಡು ಮನೆ ಕುಟುಂಬದವರಿಂದ ಶ್ರೀ ಬ್ರಹ್ಮ ಬೈದೆರ್ಕಳ ನೇಮ ನಡೆಯುತ್ತದೆ. ಮಾತ್ರವಲ್ಲದೆ ಹರೆಕೆಯ ಕೋಲವು ಇಲ್ಲಿ ನಡೆಯುತ್ತದೆ. ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಹೊಸ ಅಕ್ಕಿ ನೈವ್ಯೆದ್ಯ, ಶ್ರೀ ಕೊಡಮಣಿತ್ತಾಯ ಕೋಲ, ಶ್ರೀ ಬ್ರಹ್ಮಬೈದೆರ್ಕಳ ದರ್ಶನ ಮತ್ತು ಕೋಟಿ ಚೆನ್ನಯ ಕಂಬಳ ಕೂಡ ನಡೆಯುತ್ತದೆ. ಹಾಗೂ ಸೋಣ ತಿಂಗಳಲ್ಲಿ ಹೂವಿನ ಪೂಜೆ ನೆರವೇರುತ್ತದೆ. ಪ್ರತೀ ಮಂಗಳವಾರ ಮತ್ತು ಸಂಕ್ರಮಣದಂದು ಗರಡಿಯ ಬಾಗಿಲು ತೆರೆದು ಪೂಜೆ ನಡೆಯುತ್ತದೆ. ದೇವರಿಗೆ ಭಕ್ತರು ಅಗಲು ಸೇವೆ, ನೈವ್ಯೆದ್ಯ, (ಇದು ರಾತ್ರಿ ಮಾತ್ರ ಮಾಡುವಂತಹ ಪೊಜೆ) ಹೂ, ನೀರನ್ನು ಪ್ರತೀ ಮಂಗಳವಾರ ಮತ್ತು ತಿಂಗಳ ಸಂಕ್ರಮಣದಂದು ಸಮಪರ್ಿಸುತ್ತಾರೆ. ಇಲ್ಲಿ ಕೋಟಿ ಚೆನ್ನಯರು ಅಲ್ಲದೆ, ಶ್ರೀ ಕೊಡಮಣಿತ್ತಾಯ, ಮಾಣಿ ಬಾಲೆ, ಜೋಗಿ ಪುರುಷ, ಹಾಗೂ ಪರಿವಾರ ದೈವಗಳೂ ಕೂಡ ಇವೆೆ.

ಶ್ರೀ ಬ್ರಹ್ಮ ಬೈದೆರ್ಕಳ ಗರಡಿ ಯ ವಿಳಾಸ

ಶ್ರೀ ಕೊಡಮಣಿತ್ತಾಯ
ಶ್ರೀ ಕುಕ್ಕಿನಂತಾಯ ದೈವಸ್ಥಾನ ಬೊಮ್ಮರಬೆಟ್ಟು,
ಬೊಮ್ಮರಬೆಟ್ಟು ಗ್ರಾಮ, ಅಂಚೆ ಹಿರಿಯಡಕ
ಉಡುಪಿ ತಾಲೂಕು, ಉಡುಪಿ ಜಿಲ್ಲೆ – 576113

ಶ್ರೀ ಬಿ. ಎಂ. ಶೇಖರ್
ಮುಖ್ಯಸ್ಥರು
ಶ್ರೀ ಬ್ರಹ್ಮಬೈದೆರ್ಕಳ ಗರಡಿ ಬೊಮ್ಮಾರಬೆಟ್ಟು, ಹಿರಿಯಡಕ

 

Photo Gallery