ಮುಖ್ಯಸ್ಥರು
ಪಟೇಲ್ ರಾಮದಾಸ ಶಟ್ಟಿ

ಗರೋಡಿ ಅರ್ಚಕರು 
ಹರೀಶ್

ಈ ಕಾರಣಿಕ ಕ್ಷೇತ್ರವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಮಲ್ಲಿಗೆ ಎಂಬ ಗ್ರಾಮದಲ್ಲಿದೆ. ಬೋಳ ಎಂಬಲ್ಲಿ ಶ್ರೀ ಕೋಟಿ ಚೆನ್ನಯರು ಬಹಳ ಕಾರಣಿಕ ಪುರುಷರಾಗಿ ನೆಲೆಯಾದ ವಿವರವನ್ನು ಇತಿಹಾಸ ತಿಳಿಸುತ್ತದೆ. ಸುಮಾರು 400 ರಿಂದ 500 ವರ್ಷ ಇತಿಹಾಸ ಇರುವ ಈ ಪುಣ್ಯ ಕ್ಷೇತ್ರಕ್ಕೆ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ಎಂಬ ಪುರಾತನ ದೇವಸ್ಥಾನವಿದೆ. ಹಾಗೂ ಸಿರಿ ಅಬ್ಬಗದಾರಗ ನೆಲೆವೀಡಾದ ದಾರುವಿನ ಗುಡಿಯಿದೆ. ಹಾಗೂ ಇನ್ನಿತರ ಸಾನಿದ್ಯಗಳಿವೆ. ಬೋಳ ಗ್ರಾಮದಲ್ಲಿ ಕೋಟಿ ಚೆನ್ನಯರು ಸುಮಾರು 460 ವರುಷಗಳ ಹಿಂದೆ ಬೆಳ್ಮಣ್ ಗ್ರಾಮದ ಕೋಡಿಮಾರ್ನ ಪುಂಚಡ್ಕದ ಹತ್ತಿರ ಕುದುರೆಮಾರ್ ಮತ್ತು ನೆಲಮಾರ್ ಎಂಬ ಗದ್ದೆಯಲ್ಲಿ ಸುರಿಯ ಊರಿ ನೀರು ತೆಗೆದ ನಿದರ್ಶನವಿದೆ. ಅಲ್ಲಿ ಶ್ರೀ ದುಗನರ್ಾಪರಮೇಶ್ವರಿಯು ಪ್ರತ್ಯಕ್ಷಳಾಗಿ,” ಅವಳಿ ವೀರರೇ ಇದು ಪುಟ್ಟ ಗ್ರಾಮ, ನೀವು ಇಲ್ಲಿಂದ ಮೂಡುದಿಕ್ಕಿಗೆ ಹೋದರೆ ಅಲ್ಲಿ ನಿಮಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಇಲ್ಲಿಯ ಬಕ್ತರ ಹರಕೆಯನ್ನು ನಿಮ್ಮ ಸನ್ನಿಧಾನಕ್ಕೆ ಸಂದಾಯವಾಗುವಂತೆ ಮಾಡಿತ್ತೇನೆ” ಎಂದು ಅಭಯ ನೀಡುತ್ತಾರೆ.

ಕೋಟಿ ಚೆನ್ನಯರು ಕೋಡಿಮಾರ್ ಗ್ರಾಮ ಬಿಟ್ಟು ಮೂಡುದಿಕ್ಕಿಗೆ ಬಂದು ಜಲಪಾದೆ ನರಸಿಂಹ ದೇವರನ್ನು ಬೆಟಿ ಮಾಡಿ, ದೇವರ ಅನುಮತಿಯಂತೆ ಬೋಳ ಗ್ರಾಮದ ಬೆಳ್ತಿಶಾಂತಿ ಮರದ ಕೆಳಗೆ ವಿಶ್ರಾಂತಿ ಪಡೆಯಿತ್ತಾರೆ.

ಬೋಳ ಪತರ್ಿಮಾರುಗುತ್ತು ಮನೆತನದಲ್ಲಿ ದುಗ್ಗಪ್ಪ ಶೆಟ್ಟಿ ದಂಪತಿಗಳು ವಾಸಿಸುತ್ತಿರುತ್ತಾರೆ. ಆ ದಿನ ದುಗ್ಗಪ್ಪ ಶೆಟ್ಟಿ ದಂಪತಿಗಳ ಮನೆಗೆ ನೆಂಟರು ಬಂದಾಗ ಅವರ ಮನೆಯಲ್ಲಿ ಒಂದು ಮುಷ್ಠಿ ಅಕ್ಕಿಯೂ ಇರುವುದಿಲ್ಲ. ಅದನ್ನು ಕಂಡ ದುಗ್ಗಪ್ಪ ಶೆಟ್ಟಿ ಅಕ್ಕಿ ತರಲು ಹೋಗುತ್ತಿದ್ದಾಗ, ಬೆಳ್ತಿಶಾಂತಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ತರುಣರ ಜೊತೆ ಮಾತುಕತೆ ಆಡಿ ತನ್ನ ನೋವನ್ನು ನಿವೇದಿಸುತ್ತಾರೆ. ಆಗ ಅವಳಿ ವಿರರು ಗುತ್ತಿನವರೆ….. ನೀವು ಮನೆಗೆ ಹೋಗಿ ಮಾಳಿಗೆಯಲ್ಲಿ ನೋಡಿ ಅಲ್ಲಿ ಒಂದು ಮುಡಿ ಅಕ್ಕಿ ಇದೆ ಎಂದು ಹೇಳುತ್ತಾರೆ. ಆದರಂತೆ ದುಗ್ಗಪ್ಪ ಶೆಟ್ಟಿ ಮನೆಗೆ ಬಂದು ನೋಡುವಾಗ ಅವಳಿ ವೀರರು ಹೇಳಿದ ಮಾತು ನಿಜವಾಗಿರುತ್ತದೆ. ಒಂದು ಮುಡಿ ಹಕ್ಕಿ ಕೆಳಗಿಳಿಸಿದ ದುಗ್ಗಪ್ಪ ಶೆಟ್ಟಿ ಪುನಃ ಬೆಳ್ತಿಶಾಂತಿ ಮರದ ಹತ್ತಿರ ಬರಬೇಕಾದರೆ ಅವಳಿ ವೀರರು ಅಲ್ಲಿರುವುದಿಲ್ಲ. ಅವಳಿ ವೀರರು ಬೆಳ್ತಿಶಾಂತಿ ಮರದ ಬುಡದಲ್ಲಿ ಒಂದು ಸುರಿಯ ಮತ್ತು ವೀಳ್ಯದೆಲೆ ಇಟ್ಟು ಹೋಗಿರುತ್ತಾರೆ. ಇದನ್ನು ಕಂಡ ದುಗ್ಗಪ್ಪ ಶೆಟ್ಟಿಯವರು ಜಲಪಾದೆ ತಂತ್ರಿಯವರ ಮನೆಗೆ ಬಂದು ವಿಷಯ ತಳಿಸಿದ್ದಾಗ ಅವಳಿ ಪುರುಷರಾದ ಕೋಟಿ ಚೆನ್ನಯರಿಗೆ ಬೆಳ್ತಿಶಾಂತಿ ಮರದ ಹತ್ತಿರ ಗರಡಿ ಕಟ್ಟಬೇಕೆಂದು ಜೋತಿಷ್ಯ ಪ್ರಶ್ನೆಯಲ್ಲಿ ತಿಳಿದುಬರುತ್ತದೆ. ಅದರಂತೆ ದುಗ್ಗಪ್ಪ ಶೆಟ್ಟಿಯವರು ಶ್ರೀ ಕೋಟಿ ಚೆನ್ನಯರ ಗರೋಡಿಯನ್ನು ಕಟ್ಟಿ ಪ್ರತಿ ವರ್ಷ ನೇಮವನ್ನು ಕೊಡುತ್ತಾ ಬಂದಿದ್ದಾರೆ. ಅದೇ ಈವತ್ತು ಬೋಳ ಮಲ್ಲಿಗೆ ಗರಡಿಯೆಂದು ಖ್ಯಾತಿಯಾಗಿದೆ.

ಪ್ರತೀ ವರ್ಷ ತಿಂಗಳಲ್ಲಿ ಶ್ರೀ ಬಹ್ಮ ಬೈದೆರ್ಕಳ ನೇಮೊತ್ಸವು ಜರಗುತ್ತಿವೆ. ಹಾಗೂ ಹರಕೆಯ ನೇಮೊತ್ಸವು ಜರಗುತ್ತದೆ. ಮತ್ತು ಸಂಕ್ರಮಣದಂದು ಹೂ ನೀರು, ಪೊಜೆಯನ್ನು ನೀಡುತ್ತಾರೆ. ಕೋಟಿ ಚೆನ್ನಯರು ಮಾತ್ರವಲ್ಲದೆ ಪರಿವಾರ ದೈವಗಳೂ ಕೂಡ ಇವೆ.

ಹೀಗೆ ಮದುವೆಯ ಭಾಗ್ಯ ಕೂಡಿ ಬರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉದ್ಯೊಗ, ವ್ಯವಹಾರ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ.

ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿ ಯ ವಿಳಾಸ

ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿ, ಬೋಳ
ಅಂಚೆ ಬೋಳ
ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ – 574110

 

Photo Gallery