ಈ ಕ್ಷೇತ್ರವು ಸುಳ್ಳ ತಾಲೂಕಿನ ಅಮರಪಡ್ನೂರು ಗ್ರಾಮದ (ಕುಳ್ಳಾಜೆ) ಶೇಣಿ ಎಂಬಲ್ಲಿ ಶ್ರೀ ಕೋಟಿ ಚೆನ್ನಯರು ಬಹಳ ಕಾರಣಿಕ ಪುರುಷರಾಗಿ ನೆಲೆಯಾದ ವಿವರವನ್ನು ಇತಿಹಾಸ ತಿಳಿಸುತ್ತದೆ. ಶ್ರೀ ಕೋಟಿ ಚೆನ್ನಯರು ಪಡುಮಲೆಯಲ್ಲಿ ಇದ್ದಾಗ ಮಲ್ಲಯ್ಯ ಬುದ್ಧಿವಂತನ ಕುತಂತ್ರದಿಂದಾಗಿ ಬಲ್ಲಾಳರು ತಮ್ಮನ್ನು ದಂಡಿಸಲು ಬಂದಾಗ ಮುಂದೆ ನಾವು ಮಾಡಬೇಕಾದ ಕಾರ್ಯಗಳು ಅನೇಕ ಇವೆ ಎಂದು ಪಡುಮಲೆಯಿಂದ ಹೊರಟು ಬಂದರು. ಕೋಟಿ ಚೆನ್ನಯರು ನೇರವಾಗಿ ಕಾನನ ಪ್ರದೇಶದ ಮೂಲಕ ಹಾದು ಬಂದು ಕೊಳ್ತಿಗೆ ಗ್ರಾಮದ ಒರ್ಕೊಂಬುನ ಸಮೀಪದಲ್ಲಿರು ವಿಶಾಲವಾದ ಮೈದಾನವನ್ನು ಕಂಡರು. ಅಲ್ಲಿ ಒಂದು ಹಾಸುಗಲ್ಲಿನ ಮೇಲೆ ಕುಳಿತು ಆಲೋಚನೆ ಮಾಡುತ್ತಿದ್ದಾಗ ಯಾರೋ ಪಕ್ಕದವರು ಬಂದು ಬಾಯಾರಿಕೆಯನ್ನು ನೀಡಿದರು. ಬಾಯಾರಿಕೆ ಕೊಟ್ಟವರ ಯೋಗ ಕ್ಷೆಮವನ್ನು ವಿಚಾರಿಸಿ ನಾವು ಪೂರ್ವ ದಿಕ್ಕಿಗೆ ಹೋಗುತ್ತೇವೆ. ಎಂದು ಹೇಳಿ ಹೊರಟರು. ಹಾಗೆಯೇ ಬಂದ ಕೋಟಿ ಚೆನ್ನಯರು ನೇರವಾಗಿ ಕಾಲಿಟ್ಟದ್ದೇ ಚೊಕ್ಕಾಡಿ ಮುನ್ನೂರು ಒಕ್ಕಲಲ್ಲಿ ಇರುವ ಶ್ರೀ ಉಲ್ಲಾಕುಲು ಕ್ಷೇತ್ರಕ್ಕೆ ಅಲ್ಲಿಂದ ಕುಳ್ಳಾಜೆಯ ಶೇಣಿ ಮನೆಯ ಪೂರ್ವ ಸಂಬಂಧೀಕರಾದ ಕುಬಲಾಡಿ ಮನೆಯಲ್ಲಿ ವಾಸಿಸುತ್ತಿದ್ದ ಗಂಗಜ್ಜಿಯ ಮನೆಗೆ ಬಂದರು. ಅಜ್ಜಿಯ ಮಕ್ಕಳು ಬಂಟಮಲೆಗೆ ಬೇಟೆಗೆ ಹೊಗಿದ್ದರು. ಅಜ್ಜಿಯು ಮಕ್ಕಳನ್ನು ಕಾಯುತ್ತಿರುವ ಸಮಯದಲ್ಲಿ ಕೋಟಿ-ಚೆನ್ನಯರನ್ನು ಕಂಡು ತನ್ನ ಮಕ್ಕಳೇ ಬಂದಿರಬಹುದೆಂದು ಊಹಿಸಿ ಬಾಗಿಲು ತೆರೆದು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಹೊರಬಂದು. ಮಕ್ಕಳನ್ನು ಒಳ ಬರಮಾಡಿಕೊಂಡು. ಪ್ರೀತಿಯಿಂದ ಹರಸಿದಳು. ಕೋಟಿ-ಚೆನ್ನಯರು ತಮ್ಮ ತಾಯಿ ಮತ್ತೆ ಸಿಕ್ಕಿದ್ದಾಳೆಂದು ಭಾವಿಸಿ ಅಜ್ಜಿಯ ಬಳಿಯಲ್ಲೇ ಕುಳಿತು ಮಾತನಾಡಿ ಕಾಲ ಕಳೆದರು. ಚೊಕ್ಕಾಡಿಯ ಶ್ರೀ ಉಳ್ಳಾಕುಲು ಮಾಳಿಗೆಗೆ ಬಂದು ಭಯ ಭಕ್ಕಿಯಿಂದ ಕಾಣಿಕೆಯನ್ನು ಅಪರ್ಿಸಿ ಕೈ ಮುಗಿದು ಅಡ್ಡಬಿದ್ದು, ಪೂರ್ವ ಜನ್ಮದ ಮೈತ್ರಿ, ಸಹಬಾಳ್ವೆ, ಪ್ರೇರಣೆಯಿಂದ ಉಳ್ಳಾಕುಲು ಕೋಟಿ-ಚೆನ್ನಯರಿಗೆ ಶಕ್ತಿ ನೀಡಿ ಅವರನ್ನು ಹರಸಿದರು. ಅಲ್ಲದೇ ರಾತ್ರ ಹೊತ್ತು ಉಳ್ಳಾಕುಲು ಬ್ರಾಹ್ಮಣ ರೂಪದಲ್ಲಿ ಸಾಗುತ್ತಿದ್ದಾಗ ಬೇಸಾಯದ ಗದ್ದೆಯ ಬಳಿಯಲ್ಲಿ ಮೂತರ್ೆ ಕೆಲಸ ಮುಗಿಸಿ ಬರುತ್ತಿದ್ದ ಬಿಲ್ಲವನೊಬ್ಬನು ಸೂಟೆಯ ಬೆಳಕಿನಲ್ಲಿ ಮಾಳಿಗೆಗೆ ಕರೆತಂದನು. ಅದರಂತೆ ಶ್ರೀ ಉಳ್ಳಾಕುಲು ಭಂಡಾರ ಹೊರಡಲು ಈಗಲೂ ಬಿಲ್ಲವರು ಸಂಪ್ರದಾಯದಂತೆ ಸೂಟೆ ಹಿಡಿಯಬೇಕು. ಅಲ್ಲದೇ ಶೇಣಿಯಲ್ಲಿ ಬೈದರ್ಕಳ ನೇಮ ನಡೆಯುವ ದಿನ ಮಧ್ಯಾಹ್ನ ಮಾಳಿಗೆಯಲ್ಲಿ ಸಂಕ್ರಮಣ ಪೂಜೆ ಪುರುಷರ ಪೂಜೆ ನಡೆಯುತ್ತದೆ. ರಾತ್ರಿ ಗರಡಿ ಇಳಿದು ಚೊಕ್ಕಾಡಿಯ ಮಾಳಿಗೆಗೆ ಹೋಗಿ ಭಯ ಭಕ್ತಿಯಿಂದ ಕಾಣಿಕೆ ಅಪರ್ಿಸುವ ಸಂಪ್ರದಾಯ ಈಗಲೂ ನಡೆದು ಬರುತ್ತಿದೆ. ಗಂಗಜ್ಜಿಯ ಮನೆಯಲ್ಲಿದ್ದ ಕೋಟಿ-ಚೆನ್ನಯರು ಕುಳ್ಳಾಜೆಯ ಶೇಣಿಯವರ ಮತ್ತು ಬಿಲ್ಲವರ ಮನೆಯ ಹಿರಿಯರಾದ ಮದನ ಪೂಜಾರಿಯವರೂ ವಿದ್ವಾಂಸರು, ಜ್ಯೋತಿಷ್ಯರೂ, ನಾಟಿ ವೈದ್ಯರೂ ಆಗಿದ್ದು ಬಹಳ ಬುದ್ದಿವಂತರಾಗಿದ್ದರು. ಇವರ ತಿಳುವಳಿಕೆಯನ್ನು ಮನಗಂಡ ಕೋಟಿ-ಚೆನ್ನಯರು ಬಹಳ ಪ್ರೀತಿಯಿಂದ ಕಂಡು ಹರಸಿ ಮನಸ್ಸಿಲ್ಲದ ಮನಸ್ಸಿನಿಂದ ನಾವು ಎಲ್ಲಿದ್ದರು ಮತ್ತೆ ಶೇಣಿಗೆ ಬರುತ್ತೇವೆ. ಎಂದು ಹೇಳಿ ಎಣ್ಮೂರಿನ ಕಡೆಗೆ ಹೊರಟರು. ಅಲ್ಲಿ ಅನೇಕ ಕಾರ್ಯಗಳನ್ನು ಮುಗಿಸಿ ವೀರ ಮರಣವನ್ನು ಅಪ್ಪಿದರು ಎಂದು ಇತಿಹಾಸ ಹೇಳುತ್ತದೆ. ಕುಳ್ಳಾಜೆಯ ಶೇಣಿಯ ಹಿರಿಯರಾದ ಮದನ ಪೂಜಾರಿಯವರು ಮಣ್ಣಿನ ಗೋಡೆಯ ಮುಳಿ ಛಾವಣಿ ಹೊದಿರುವ ಗರಡಿಯನ್ನು ಕಟ್ಟಿಸಿ ನೇಮ ತಂಬಿಲ ಹರಕೆಗಳನ್ನು ಕೊಡುತ್ತಾ ಬಂದರು. ಅವರ ಮರಣಾನಂತರ ಇಬ್ಬರು ಮಹಿಳೆಯರು ಸಂಪ್ರದಾಯದಂತೆ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದರು ನಂತರ ಅದೇ ಮನೆತನದ ದರ್ಶನ ಪಾತ್ರಿ ಹಾಗೂ ನಾಟಿ ವೈದ್ಯರು ಆದ ಆಂತಪ್ಪ ಪೂಜಾರಿಯವರು 1963ನೇ ಇಸವಿಯಲ್ಲಿ ಶಿಥಿಲಗೊಂಡಿರುವ ಹಳೆಯ ಗರಡಿಯನ್ನು ಬಿಟ್ಟು ಹಂಚಿನ ಛಾವಣಿಯಿರುವ ನೂತನ ಗರಡಿಯನ್ನು ಕಟ್ಟಿಸಿ ಹಿಂದಿನ ಸಂಪ್ರದಾಯವನ್ನು ಈಗಲೂ ಉಳಿಸಿಕೊಂಡು ಬಂದಿರುತ್ತಾರೆ ಅಲ್ಲದೇ ಈ ಭೂಮಿಯಲ್ಲಿರುವ ಬಲಿಷ್ಠ ಭೂಮಿ ಹಾಗೂ ಧರ್ಮ ದೈವಗಳಿಗೆ ತಂಬಿಲಗಳನ್ನು ಕೊಡಿತ್ತಾ ಬಂದಿದ್ದಾರೆ. ಅವರ ಮರಣಾನಂತರ ಅವರ ಮಗನಾದ ಧರ್ಮಪಾಲ ಶೇಣಿಯವರು ಹಿಂದಿನ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುತ್ತಾರೆ. ಅಲ್ಲದೇ ಈ ಭೂಮಿಯಲ್ಲಿ ಕೋಟಿ-ಚೆನ್ನಯರ ಜೊತೆ ಅನೇಕ ಭೂಮಿ ದೈವಗಳು ಕೂಡ ನೆಲೆಯಾಗಿವೆ. ಈ ದೈವಗಳ ಪೈಕಿ ಚಾಮುಂಡಿ, ಧೂಮಾವತಿ, ರಕ್ತೇಶ್ವರಿ, ಪಂಜುಲರ್ಿ, ಶಿರಾಡಿ, ಗುಳಿಗ, ಭೈರವಾದಿ ದೈವಗಳು ಬಹಳ ಕಾರಣಿಕ ಪುರುಷರಾಗಿ ಬೆಳೆದಿರುತ್ತದೆ. ಈ ದೈವಗಳಿಗೆ ವಷರ್ಾವಧಿ ತಂಬಿಲಗಳು ಕಾಲಕಾಲಕ್ಕೆ ನಡೆದು ಬಂದರೂ ಕೂಡ ಇದರ ಮೂಲಸ್ಥಾನವಿಲ್ಲದೆ. ಬಹಳ ತೊಂದರೆಗೆ ಈಡಾಗಿದೆ. ನಂಬಿದವರಿಗೆ ಇಂಬು ಕೊಡುವ ದೈವಗಳು ಆದರೂ ದುಷ್ಟರಿಗೆ ಆಗಿಂದಾಗ ಶಿಕ್ಷೆ ಕೊಟ್ಟ ದೈವಗಳು ಇದಾಗಿದೆ. ಇದರ ಭಂಡಾರಗಳು ಸ್ವಲ್ಪ ಛಾವಡಿಯಲ್ಲಿದ್ದು ಇನ್ನು ಕೆಲವು ಒಂದು ಕಾಡಿನ ಮಧ್ಯೆ ಮರದ ಬುಡದಲ್ಲಿ ಬಿದ್ದುಕೊಂಡಿವೆ. ಇದರಿಂದಾಗಿ ಕೋಪಗೊಂಡ ದೈವಗಳು ಇಡೀ ಪರಿಸರವನ್ನು ನಾಶ ಮಾಡಲು ಹೊರಟಿದೆ. ಇಲ್ಲಿ ಸುತ್ತಮುತ್ತ ಜನರು ನೋಡಲು ಸಂತೋಷವಾಗಿದ್ದರೂ ಕೂಡ ಎಲ್ಲಾತರದಲ್ಲಿ ತೊಂದರೆಗಳು ಕಾಣಿಸಿಕೊಂಡು ಕಷ್ಟವನ್ನು ಜನರು ಸಹಿಸಿಕೊಂಡು ಬಂದಿರುತ್ತಾರೆ. ಯಾರಿಗೂ ನೆಮ್ಮದಿಯ ಉಸಿರು ಬಿಡಲು ಸಾಧ್ಯವಿಲ್ಲ. ಅದರಂತೆ ಇತ್ತೀಚೆಗೆ ಗರಡಿಯ ಬಳಿ ಇಟ್ಟ ಪ್ರಶ್ನೆಯ ಪ್ರಕಾರ ದೈವಗಳ ಕುರುಹುಗಳು ಪತ್ತೆಯಾಗಿದ್ದು ಮುಂದೆ ದೈವಗಳ ಅಭಿವೃದ್ದಿಯನ್ನು ಮಾಡದಿದ್ದಲ್ಲಿ ಯಾರನ್ನು ಸುಮ್ಮನೆ ಬಿಡದು ಎಂದು ಕಂಡುಬಂದಿದೆ. ಅಲ್ಲದೇ ಹಿಂದೆ ಈ ಭೂಮಿಯಲ್ಲಿ ನಾಗಸಾನಿದ್ಯವಿದ್ದು ಅದನ್ನು ನಾಸ್ತಿಕರು ನಾಶಮಾಡಿರುತ್ತಾರೆ. ತದ ನಂತರ ಇಡೀ ಭೂಮಿಗೆ ನಾಗನ ದೋಷವಿದ್ದು ಮುಂದೆ ನಾಗನ ನೆಲೆ ಮಾಡಿದ್ದಲ್ಲಿ ಮಾತ್ರ ಈ ಭೂಮಿಗೆ ರಕ್ಷೆಯಾಗಬಹುದು. ಅಲ್ಲದೇ ನಾಗನನ್ನು ಕೊಂದಂತಹ ಸಂದರ್ಭದಲ್ಲಿ ಇಡೀ ಭೂಮಿಯಲ್ಲಿ ಹಾವುಗಳು ಎದ್ದು ನಿಂತು ಎಲ್ಲರ ಎದುರು ಸಾವಿರಾರು ಹಾವುಗಳು ಹಲವು ಜಾತಿಯಲ್ಲಿ ಒಂದೇ ಗಳಿಗೆಯಲ್ಲಿ ಕಂಡುಬಂದುದು. ಬಹಳ ವಿಶೇಷ ಘಟನೆ ಇದನ್ನು ಅನೇಕ ಹಿರಿಯರು ಕಂಡವರಿದ್ದಾರೆ. ಕುಳ್ಳಾಜೆಯಲ್ಲಿ ಹಿಂದಿನ ಕಾಲದ ಮುಳಿ ಛಾವಣಿ ಒಂದಿತ್ತು. ಅದೇ ಭಂಡಾರದ ಮನೆ. ಇದು ಸುಮಾರು 225 ವರ್ಷ ಬಾಳಿಕೆ ಬಂದ ಮನೆ ಮಣ್ಣಿನ ಗೋಡೆಯ ಬಹಳ ಸಂಪ್ರದಾಯದ ತಗ್ಗಿನ ಮನೆ ಇದಾಗಿತ್ತು. ಮುಳಿ ಛಾವಣಿ ಇರುವ ಸಂದರ್ಭದಲ್ಲಿ ಛಾವಣಿಯ ಮೇಲೆ ಒಮ್ಮೆಲೆ ಬೆಂಕಿ ಕಾಣಿಸಿಕೊಂಡು ಒಮ್ಮೆಗೆ ಮಾಯಾವಾದ ಘಟನೆಯೂ ಇದೆ.ಇದೀಗ ಈ ಗರಡಿಯ ಜೀಣರ್ೋದ್ಧಾರದ ಅಗತ್ಯತೆಯನ್ನು ಮನಗಂಡಿರುವ ನಾವು ಈ ಸಂಬಂಧ ಸಮಿತಿಯೊಂದನ್ನು ರಚಿಸಿ ಪುಣ್ಯ ಕಾರ್ಯಕ್ಕೆ ಹೊಟಿರುತ್ತೇವೆ. ಸಂಪ್ರದಾಯಬದ್ದವಾದ ವಿನೂತನ ಶೈಲಿಯ ಗರಡಿಯ ನಿಮರ್ಾಣವಾಗಬೇಕಿದೆ. ಇತ್ತೀಚೆಗೆ ನಡೆದ ಜ್ಯೋತಿಷ್ಯರಪ್ರಶ್ನೆಯಲ್ಲಿ ವಿಶೇಷ ರೀತಿಯ ಕುರುಹುಗಳು ದೊರಕಿವೆ. ಈ ಗರಡಿಯ ವಿಶೇಷವೆನೆಂದರೆ ಕಂಕಣ ಭಾಗ್ಯ, ಸಂತಾನ ಭಾಗ್ಯ, ಕೋಟರ್ು ವ್ಯಾಜ್ಯಗಳು ಹಾಗೂ ತಕರಾರುಗಳು ಕಾಗೂ ಬೇರೆ ಬೇರೆ ರೀತಿಯ ಕಾಯಿಲೆಗಳ ಸಂಬಂಧವಾಗಿ ಪ್ರಾಥರ್ಿಸಿದವರಿಗೆ ಶೀಘ್ರ ಪರಿಹಾರ ದೊರಕುತ್ತದೆ. ಈಗಾಗಲೇ ಅನೇಕರಿಗೆ ಪರಿಹಾರ ದೊರಕಿದೆ ಹಾಗೂ ಇಲ್ಲಿ ಭೂಮಿ ದೈವಗಳಿಗೆ ದೈವಸ್ಥಾನ ಹಾಗೂ ಕೋಟಿ-ಚೆನ್ನಯರಿಗೆ ನೂತನ ಗರಡಿಯ ಪ್ರಸಿದ್ದವಾಗಿ ಹೊರಹೊಮ್ಮಲಿದೆ.