ಮುಖ್ಯಸ್ಥರು 
ಎ. ಸಂಕಪ್ಪ ಪೂಜಾರಿ

ಅರ್ಚಕರು 
ನರಸಿಂಹ ಭಟ್

ಗುಡ್ಡ ಬೆಟ್ಟ, ಪಚ್ಚೆ ಪೈರುಗಳಿಂದ ಕೂಡಿದ ಊರು ಪೆರಾಬೆ ಗ್ರಾಮ, ಅಗತ್ತಾಡಿ. ಗ್ರಾಮ ಸೊಗಸನ್ನು ಉಳಿಸಿಕೊಂಡು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ಅಗತ್ತಾಡಿ ಪ್ರದೇಶ. ಪೆರಾಬೆ ಗ್ರಾಮಕ್ಕೆ ದೀಪದಂತೆ ಗೋಚರಿಸುತ್ತಿದೆ ಶ್ರೀ ಕಾರಣೀಕ ಕ್ಷೇತ್ರವಾದ ಅಗತ್ತಾಡಿ ಗರಡಿ. ಸನಾತನ ಹಿಂದೂ ಧರ್ಮ ಹಾಗೂ ಭಾರತೀಯ ಸಂಸ್ಕ್ರತಿಯ ಪ್ರತಿರೂಪವಾಗಿ ಮೈವೆತ್ತಿ ನಿಂತ ಅಗತ್ತಾಡಿಯ ಕಾರಣಿಕ ಕ್ಷೇತ್ರ. ಮಂಗಳೂರುನಿಂದ ಉಪ್ಪಿನಂಗಡಿ ಕಡೆಗೆ ಸುಮಾರು 56 ಕಿ.ಮೀ. ದೂರ ಸಾಗಿ ಅಲ್ಲಿಂದ ಸುಬ್ರಮಣ್ಯದ ಕಡೆಗೆ ಸುಮಾರು 18 ಕಿ.ಮೀ. ಸಾಗಿದರೆೆ ಕಾಣ ಸಿಗುವುದು ಪ್ರಕೃತಿ ದತ್ತ ಸೌಂದರ್ಯದೊಂದಿಗೆ ತಲೆಯೆತ್ತಿ ನಿಂತ ಅಗತ್ತಾಡಿ ಶ್ರೀ ಬ್ರಹ್ಮ ಬೈದರ್ಕಳ ನೇತ್ರಾವತಿ ಪೆಮರ್ುಡ ಗರಡಿ, ಕಾರಣೀಕದ ಈ ಪುಣ್ಯ ಕ್ಷೇತ್ರ. ಈ ಕ್ಷೇತ್ರದಲ್ಲಿ ಇರುವ ಆರಾಧ್ಯ ದೈವಗಳಾದ ಶ್ರೀ ಕುಂಭಕಂಠಿಣಿ (ಕೊಡಮಣಿತ್ತಾಯ), ಹಾಗೂ ಪರಿವಾರ ದೈವಗಳು.

ಇತಿಹಾಸ ಪುಟಗಳತ್ತ ನೋಡಿದರೆ, ಸುಮಾರು 500 ರಿಂದ 550 ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಸುಮಾರು 500 ವರ್ಷಗಳ ಹಿಂದೆ ಅಗತ್ತಾಡಿ ಪ್ರದೇಶದಲ್ಲಿ ಬಿಲ್ಲವ ಜನಾಂಗದವರು ವಾಸಿಸುತ್ತಿದ್ದು ಗುತ್ತು ಮನೆತನದ ಅಧಿಕಾರವನ್ನು ಪಡೆದಿದ್ದರು. ಪಡುಮಲೆಯಿಂದ ಹೊರಟುಬಂದ ಕೋಟಿ ಚೆನ್ನಯರು, ಇಲ್ಲಿನ ನೇತ್ರವತಿ ನದಿ ದಾಟಿ ಸಂಜೆಯ ಇಳಿಹೊತ್ತಿನಲ್ಲಿ ಬಂದು ಅಗತ್ತಾಡಿಯ ಗುತ್ತು ಮನೆತನದ ಮನೆಯವರಲ್ಲಿ ಬಂದು ಬಾಯಾರಿಕೆ ಕೇಳುತ್ತಾರೆ. ಆಗ ಅವರಲ್ಲಿ ನೀವ್ಯಾರೆಂದು ಗುತ್ತು ಮನೆಯವರು ಕೇಳಿದಾಗ, ನಾವಿಬ್ಬರು ಬಿಲ್ಲವ ಕುಟುಂಬದಲ್ಲಿ ಹುಟ್ಟಿದ ಅವಳಿ ಜವಳಿ ಮಕ್ಕಳು ನಾವೊಂದು ಮನೆಯವರಲ್ಲಿ ಹೋಗಿ ಬಾಯಾರಿಕೆ ಕೇಳಿದಾಗ ಜಾತಿಯ ಮನೆಯವರು ಅಗತ್ತಾಡಿಯಲ್ಲಿ ಇದ್ದಾರೆ ಅವರಲ್ಲಿ ಹೋಗಿ ಎಂದು ನಿಮ್ಮ ಬಗ್ಗೆ ಹೇಳಿರುತ್ತಾರೆ ಎಂದಾಗ, ಮನೆಯಾಕೆ ಜಗುಲಿಯ ಕಟ್ಟೆಯ (ಈಗಿನ ಪುರುಷರ ಕಟ್ಟೆ) ಮೇಲೆ ಕುಳ್ಳಿರಿಸಿ ನಿಮಗೆ ಕುಡಿಯಲು ಎನು ಬೇಕೆಂದು ಮನೆಯವರು ಕೇಳಿದಾಗ, ನಮಗೆ ಹಾಲು ಕೊಡಿ ಎಂದು ಹೇಳಿದರು. ಆಕೆ ನಮ್ಮಲ್ಲಿ ಹಾಲಿಲ್ಲ ಮಕ್ಕಳೆ ಎಂದಾಗ….. ಒಳಗೆ ಹೋಗಿ ನೋಡಿ ತಾಯೆ ಎಂದು ತರುಣರು ಹೇಳಿದಾಗ, ಮನೆಯೊಡತಿ ಹೋಗಿ ನೋಡಲು ಪ್ರತಿಯೊಂದು ಮಡಿಕೆಯಲ್ಲಿ ಹಾಲು ತುಂಬಿರಲು ರೋಮಾಂಚಿತಳಾಗಿ ಹಾಲು ತಂದು ಕುಡಿಯಲು ಕೊಟ್ಟು, ಕುಡಿದ ಪಾತ್ರೆ ಒಳಗಿಟ್ಟು ಬರಲು ಒಳಗೆ ಬಂದು ನೋಡಿದಾಗ ಎಲ್ಲಾ ಪಾತ್ರೆಯಲ್ಲೂ ಯಥಾಸ್ಥಿತಿ ನೀರಿರಲು ಕೌತುಕಪಟ್ಟು ಹೊರಗೆ ಬಂದು ನೋಡಲು ಇಬ್ಬರು ಯುವಕರು ನಾಪತ್ತೆಯಾಗಿ ಅವರು ಕೂತಿರುವ ಜಾಗದಲ್ಲಿ ಒಂದು ಸುರಿಯ ಮತ್ತು ಒಂದು ಚೊಂಬಿನ ಗಿಂಡೆಯಿರಲು ಅದನ್ನು ಆಕೆ ಮರದ ಕಲ್ಲೆಂಬಿಯಲ್ಲಿ ಇಡುತ್ತಾಳೆ. ಕಾಲಕ್ರಮೇಣ ಅವರ ಸಂತತಿ ಅಳಿದುಹೋಗಿ ಮನೆ ಬಿದ್ದು ಭೂಗರ್ಭದಲ್ಲಿ ಸೇರಿರುತ್ತದೆ. ಕ್ರಮೇಣ ಆ ಜಾಗ ಬ್ರಾಹ್ಮಣರಿಗೆ ಹೋಗಿ ಅವರಿಂದ ಗೌಡ ಮನೆತನಕ್ಕೆ ಹೋಗಿ ಅವರಿಂದ ಬಿಲ್ಲವ ಸಂತತಿಗೆ ಬಂದಿರುತ್ತದೆ. ಈ ಬಿಲ್ಲವರ ಕಾಲದಲ್ಲಿ ಈಗ ಗರಡಿ ಇರುವ ಜಾಗದಲ್ಲಿ ವ್ಯವಸಾಯ ನಿಮಿತ್ತವಾಗಿ ನೆಲ್ಲಿಕಾಯಿ ಮರ ಕಡಿದು ಬುಡ ಅಗೆಯಲು ಆ ಬುಡದಲ್ಲಿ ಸುರಿಯ ಮತ್ತು ಚೊಂಬಿನ ಗಿಂಡೆ ಸಿಗಲು ಅದನ್ನು ತಂದು ಮನೆ ದೇವರ ಕೋಣೆಯಲ್ಲಿ ಇಡುತ್ತಾರೆ. ಆ ರಾತ್ರಿ ಮನೆಯ ಯಜಮಾನನಿಗೆ ಕನಸಿನಲ್ಲಿ ಕೋಟಿ ಚೆನ್ನಯರು ಬಂದು ನಾವು ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನಮಗೆ ಗರಡಿ ಕಟ್ಟಿ, ನಾಗಬ್ರಹ್ಮರ ಗುಂಡ ಕಟ್ಟಿ ನಮ್ಮನ್ನು ಪಾಲಿಸಿಕೊಂಡು ಬನ್ನಿ ನಿಮ್ಮ ಕುಲವನ್ನು ಗ್ರಾಮಸ್ಥರನ್ನು ರಕ್ಷಿಸಿಕೊಂಡು ಬರುತ್ತೇವೆ ಎಂದು ಅಭಯ ನೀಡುತ್ತಾರೆ. ಅದೇ ಪ್ರಕಾರವಾಗಿ ಸಿಕ್ಕಿದಂತಹ ಸುರಿಯ ಮತ್ತು ಗಿಂಡೆಯನ್ನು ಮಣಿಮಂಚದಲ್ಲಿ ಇಟ್ಟು ಪೂಜಿಸಿಕೊಂಡು ಬರುತ್ತಾರೆ. ಕಾಲಕ್ರಮೇಣ ಇವರ ಕೈಯಿಂದ 150 ವರ್ಷಗಳ ಹಿಂದೆ ಈಗಿರುವ ಬಂಗೇರ ಬಿಲ್ಲವ ಸಂತತಿಯವರಾದ ಕುನ್ನಿ ಬಂಗೇತರ್ಿ ಜಾಗವನ್ನು ಪಡೆದುಕೊಂಡು ತಮ್ಮನಾದ ತ್ಯಾಂಪಣ್ಣ ಪೂಜಾರಿಯನ್ನು ಗುತ್ತಿನ ಯಜಮಾನನಾಗಿ ಮಾಡಿಸಿಕೊಂಡು ಬೈದೇರುಗಳನ್ನು ನಂಬಿಕೊಂಡು ಬರುತ್ತಾರೆ. ಅವರ ನಂತರ ನರಸಿಂಗ ಪೂಜಾರಿ, ಮುಂಡಪ್ಪ ಪೂಜಾರಿ, ಸಂಜೀವ ಪೂಜಾರಿ ಇವರ ಯಜಮಾನಿಕೆಯಲ್ಲಿ ಕುಟುಂಬ ನಡೆಯುತ್ತಿದ್ದು ಪ್ರಸ್ಥುತ ಸಂಕಪ್ಪ ಪೂಜಾರಿಯವರ ಯಜಮಾನಿಕೆಯಲ್ಲಿ ದೈವದೇವರುಗಳ ಸೇವೆ ನಡೆಯಿತ್ತಿದೆ. ದೈವದೇವರುಗಳ ಸೇವೆಗಳು ಸುಗಮವಾಗಿ ನಡೆಯಲು ಕುಟುಂಬದೊಳಗೆ ಕಮಿಟಿಯನ್ನು ಮಾಡಿಕೊಂಡು ಬಿ.ಎಸ್ ರಮೇಶ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಸೇವೆಗಳು ಯಶ್ಚಸಿಯಾಗಿ ನಡೆಯುತ್ತಿದೆ. ಕೋಟಿ ಚೆನ್ನಯರು ಜೀವಂತವಾಗಿ ಇರುವಾಗಲೆೇ ಅವರು ಪಡುಮಲೆ ಬೀಡು ಬಿಟ್ಟು ಅಗತ್ತಾಡಿಗೆ ಬಂದು ತದನಂತರ ಎಣ್ಮೂರುವಿನಲ್ಲಿ ಹೋಗಿ ನೆಲೆಸಿದ್ದಾರೆ ಎಂಬುದು ಇಲ್ಲಿ ಸ್ಪಷ್ಠವಾಗುತ್ತದೆ. ಆದುದರಿಂದ ಎಣ್ಮೂರು ಗರಡಿಗೆ ಹೇಳಿದ ಹರಕೆ ಇಲ್ಲಿ ಸಂದಾಯವಾಗುತ್ತದೆ ಅದೇ ರೀತಿ ಅಗತ್ತಾಡಿ ಗರಡಿಗೆ ಹೇಳಿದ ಹರಕೆ ಇಲ್ಲಿಯೇ ಸಂದಾಯವಾಗಬೇಕೆಂದು ದೈವದ ನುಡಿ. ಜೀವಂತವಾಗಿ ಹೋಗಿ ಅವರು ಸಿದ್ದಿ ಮಾಡಿದ ನಿದರ್ಶನಗಳು ಎಲ್ಲಿಯೂ ಕಂಡುಬರದೆ ಅಗತ್ತಾಡಿಯಲ್ಲಿ ಮಾತ್ರ ಅದು ಕಂಡುಬರುತ್ತದೆ. ಸ್ಥಳದ ಪ್ರಶ್ನೆಯಂತೆ ಅವರು ಅಗತ್ತಾಡಿ ಜಾಗದಲ್ಲಿ ನಾಗಬ್ರಹ್ಮರ ಮುಖಾಂತರ ಸಿದ್ದಿ ಮಾಡಿರುವುದು ತಿಳಿದುಬಂದಿದ್ದು ಇಲ್ಲಿ ನಾಗಬ್ರಹ್ಮರ ಕಾರಣಿಕ ಅತೀ ಹೆಚ್ಚಿನದೆಂದು ತಿಳಿದುಬರುತ್ತದೆ.

ಸ್ಥಳದಲ್ಲಿ ನಡೆದ ಕರಾಣೀಕಗಳು

** ಸುಮಾರು 150 ವರ್ಷಗಳ ಹಿಂದೆ ಕುಟುಂಬದ ಯಜಮಾನರಾದ ತ್ಯಾಂಪಣ್ಣ ಪೂಜಾರಿಯವರಿಗೆ ಮಕ್ಕಳಿಲ್ಲದೆ ಅಳಿಯ ಸಂತನಾದ ಪ್ರಕಾರ ಹೆಣ್ಣು ಮಕ್ಕಳ ಮಕ್ಕಳಿಗೆ ಜಾಗದ ಯಜಮಾನಿಕೆ ಬರಲು ಇದಕ್ಕೆ ಒಪ್ಪದ ಯಜಮಾನ ಕುಟುಂಬದವರ ಜೊತೆ ಜಗಳ ಮಾಡಿಕೊಂಡು ಹೆಂಡತಿ ಕಡೆಯವರಾದ ಕೈಪಳ್ಳ ಕುಟುಂಬಸ್ಥರಿಗೆ ಬರೆಯಲು ಪುತ್ತೂರಿಗೆ ತೆರೆಯಲು ಮಾರ್ಗ ಮಧ್ಯೆ ಕತ್ತಲಾಗಲು ಉಪ್ಪಿನಂಗಡಿಯಲ್ಲಿ ತಂಗಿದ್ದು ರಾತ್ರಿ ಮಲಗಿರಲು 3 ಮಂದಿ ಗಡ್ಡಧಾರಿಗಳು ಕಾಲಬುಡದಲ್ಲಿ ಕೂತಿರುವುದು ಕಾಣಿಸಿದ್ದು ಆ ರಾತ್ರಿಯಲ್ಲೇ ತಮ್ಮ ತಪ್ಪಿನ ಅರಿವಾಗಿ ಅಗತ್ತಾಡಿಗೆ ಬಂದು ಅಲ್ಲೇ ಪಕ್ಕದಲ್ಲಿರುವ ಬ್ರಿಟಿಷರ ಬಂಗ್ಲೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡು 4 ದಿವಸಗಳ ನಂತರ ಕುಟುಂಬಸ್ಥರಿಗೆ ಗೊತ್ತಾಗಲು ಬಾಗಿಲು ಹೊಡೆದು ನೋಡಲು ಹೆಣವಾಗಿರುತ್ತಾರೆ.
ಅದೇ ರೀತಿಯಲ್ಲಿ ಸುಮಾರು 100 ವರ್ಷಗಳ ಹಿಂದೆ ಯಾವುದೇ ಪರ್ವಗಳು ನಡೆಯದೇ ಕುಟುಂಬ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಆ ಸಮಯದಲ್ಲಿ ಬೈದೇರುಗಳ ಆಭರಣವನ್ನು ಕುಟುಂಬದ ಯಜಮಾನನಾದ ಮುಂಡಪ್ಪ ಪೂಜಾರಿಯವರು ರೂ 1000 ಕ್ಕೆ ಶಿಶಿಲದಲ್ಲಿರುವ ಬ್ರಾಹ್ಮಣರ ಮನೆಯಲ್ಲಿ ಅಡಮಾನ ಇಟ್ಟಿದ್ದು ಪ್ರತಿ ವರುಷ ಜಾತ್ರೆ ಆಗುತ್ತಿದ್ದ ಹುಣ್ಣೆಮೆ ಸಮಯದಲ್ಲಿ ಇಡೀ ರಾತ್ರಿ ಆಭರಣವು ಕುಣಿಯುತ್ತಿದ್ದು ಬ್ರಾಹ್ಮಣರ ಮನೆಯವರಿಗೆ ತನ್ನ ಕೋಟಿ ಚೆನ್ನಯರ ಶಕ್ತಿಯನ್ನು ತೋರಿಸಿಕೊಟ್ಟಿದೆ.

** ಸುಮಾರು 75 ವರ್ಷಗಳ ಹಿಂದೆ ನೇಮ ನಡೆಯುತ್ತಿದ್ದ ಸಮಯದಲ್ಲಿ ಜಾಗದ ವೈಶ್ಯಮದ ಪರಿಣಾಮವಾಗಿ ಪುತ್ತೂರು ಬೆಳ್ಳಿಪ್ಪಾಡಿ ಕಡೆಯ ಜನರು ಕುಟುಂಬದ ಯಜಮಾನನಿಗೆ ಹೊಡೆಯಲು ಬಂದಿದ್ದು ಕೋಟಿ ಚೆನ್ನಯರ ಸೇಟು ನಡೆಯುತ್ತಿದ್ದ ಸಮಯದಲ್ಲಿ ಬಂದವರು ಅವರವರೆ ಹೊಡೆದುಕೊಂಡು ತರುವಾಯ ತಮ್ಮ ತಪ್ಪಿನ ಅರಿವಾಗಿ ದೈವದ ಮುಂದೆ ತಪ್ಪು ಒಪ್ಪಿಕೊಂಡಿರುತ್ತಾರೆ.
ಕೋಟಿ ಚೆನ್ನಯರ ಆಭರಣವನ್ನು ಸುಮಾರು 7 ವರ್ಷಗಳ ಹಿಂದೆ ಮೂಡುಬಿದ್ರೆ ಕಡೆಯ ಅಕ್ಕಸಾಲಿಗರೊಬ್ಬರಿಗೆ ಪುನರ್ತಯಾರಿಗಾಗಿ ಕೊಟ್ಟಿದ್ದು ಅವರು ಆಭರಣದ ಪೆಟ್ಟಗೆಯನ್ನು ಬೈಕಿನಲ್ಲಿ ಇಟ್ಟುಕೊಂಡು ಹೋಗಲು ಮಾರ್ಗ ಮಧ್ಯದಲ್ಲಿ ಬಿದ್ದಿರಲು ಅವರು ಸುಮಾರು 10 ಕಿ.ಮೀ ದೂರ ಬಂದು ನೋಡಲು ಪೆಟ್ಟಿಗೆಯು ಕಾಣದಾಗಲು ಅದೇ ದಾರಿಯಲ್ಲಿ ಪುನಃ ಬಂದು ನೋಡಲು ಮಾರ್ಗ ಮದ್ಯದಲ್ಲಿ ಪೆಟ್ಟಿಗೆ ಬಿದ್ದು ಸಿಕ್ಕಿರುತ್ತದೆ. ಆ ದಾರಿಯು ರಾಜ್ಯ ಹೆದ್ದಾರಿಯು ಆಗಿದ್ದು ನೂರಾರು ವಾಹಗಳು ಆ ದಾರಿಯಲ್ಲೇ ಹೋತುತ್ತಿದ್ದು ಅವರಿಗೆ ಕಾಣ ಸಿಗದೇ ಬಿದ್ದ ಜಾಗದಲ್ಲೆ ಸಿಕ್ಕಿ ತನ್ನ ಶಕ್ತಿಯನ್ನು ತೋರಿಸಿಕೊಟ್ಟಿದೆ.

** ಇದೇ ಆಭರಣವನ್ನು 5 ವರ್ಷಗಳ ಹಿಂದೆ ಕಂಕನಾಡಿ ಗರಡಿಯ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಮಂಗಳೂರು ಇವರ ದೈವದೇವರುಗಳ ಆಭರಣವನ್ನು ಹೊಸದಾಗಿ ಮಾಡಿಕೊಂಡು ಬರಲು ಮಂಗಳೂರಿಗೆ ತಗೊಂಡು ಹೋಗಿ ಕ್ಷೇತ್ರದ ಅರ್ಚಕರ ಮನೆಯಲ್ಲಿ ಇಟ್ಟಿದ್ದು ಅದನ್ನು ಅಕ್ಕಸಾಲಿಗರಿಗೆ ಕೊಡಲು ಕೆಲಸದ ಒತ್ತಡದಿಂದ ಮರೆತುಹೋಗಿದ್ದರು. ಅಗತ್ತಾಡಿಯಲ್ಲಿ ಗರಡಿ ಜಾತ್ರೆಯು ಹತ್ತಿರ ಬರಲು ಅರ್ಚಕರ ಮನೆಯಲ್ಲಿ ದೇವರ ಮನೆಯಲ್ಲಿದ್ದ ಆಭರಣದ ಪೆಟ್ಟಿಗೆಯ ಮೇಲೆ ಹಾವು ಕಂಡುಬಂದಿದ್ದು ತದನಂತರ ಶ್ರೀ ಚಿತ್ತರಂಜನ್ರವರು ಬಂದು ಹಾವಿನ ಮುಂದೆ ನಿವೇದಿಸಿ ತಕ್ಷಣವೇ ಕೆಲಸಕ್ಕೆ ಶುರು ಹಚ್ಚುಕೊಳ್ಳುತ್ತಾರೆ. ಸುಮಾರು 40 ದಿವಸಗಳ ಕಾಲ ಆ ಹಾವು ಆ ಅಕ್ಕಸಾಲಿಗರ ಮನೆಯಲ್ಲಿ ಆಭರಣದ ಕೆಲಸ ಮುಗಿಯುವವರೆಗೂ ಇದ್ದು ತದನಂತರ ಅದೃಸ್ಯವಾಗಿರುತ್ತದೆ.

** ಅದೇ ರೀತಿ 2012 ರಲ್ಲಿ ಆದ ಜಾತ್ರೆಯ (ನೇಮ) ಸಮಯದಂದು ವೀಡಿಯೊ ಚಿತ್ರೀಕರಣದ ಸಮಯದಲ್ಲಿ ನಾಗಬ್ರಹ್ಮರ ಮಹಾಪೂಜೆಗಿಂತ ಸ್ವಲ್ಪ ಸಮಯದ ಮೊದಲು ಚಿತ್ರೀಕರನ ಮಾಡುವವರಿಗೆ ಮಾತ್ರ ಹಾವು ಕಾಣಿಸಿಕೊಂಡು ತನ್ನ ಇರುವಿಕೆಯನ್ನು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದೆ. ಇದು ವಿಡೀಯೋ ಚಿತ್ರೀಕರಣಗೊಂಡಿದೆ. ಈ ರೀತಿಯಾಗಿ ಹತ್ತು ಹಲವು ಪವಾಡಗಳನ್ನು ಮಾಡಿ ಕಲಿಯುಗದಲ್ಲಿ ಕೂಡ ತಾನಿದ್ದೇನೆ ಎನ್ನುವ ಭರವಸೆಯ ಛಾಪನ್ನು ಮೂಡಿಸಿ ದೂರದೂರದ ಭಕ್ತರನ್ನು ಸೆಳೆಯುತ್ತಾ ನೆನೆದವರ ಮನದ ಆಸೆಯನ್ನು ನೆರವೇರಿಸುತ್ತಾ ಬಂದಿರುತ್ತದೆ. ಅದೇ ರೀತಿಯಲ್ಲಿ ಅನ್ಯಾಯ ಮಾಡಿದವರಿಗೆ ಸರಿಯಾದ ಶಿಕ್ಷೆಯನ್ನು ವಿಧಿಸಿದೆ.

** ಸುಂದರಿರಾಮಣ್ಣ ಈ ಗರೋಡಿಯನ್ನು ಕಟ್ಟಿದವರು. ಎಷ್ಟೋ ವರ್ಷಗಳು ಕಳೆದರು ಇವರ ಜಾಗ ಮಾರಟವಾಗದಿದ್ದಾಗ ಇವರು ಶ್ರೀ ಕ್ಷೇತ್ರದ ಕೋಟಿ ಚೆನ್ನಯರಿಗೆ ಹರಕೆ ಹೇಳುತ್ತಾರೆ. ಅದರಂತೆ ಒಂದು ವರ್ಷದೊಳಗೆ ಇವರ ಜಾಗ ಮಾರಟವಾಗುತ್ತದೆ. ಇದು ನಡೆದದ್ದು ಸುಮಾರು 4 ವರ್ಷಗಳ ಹಿಂದೆ.

** ಒಂದು ವರ್ಷದ ಹಿಂದೆ ಶ್ರೀಮತಿ ವಿಜಯ ಎನ್ನುವವರು ಮುಂಬಯಿಯಲ್ಲಿದ್ದ ಮನೆಯನ್ನು ಮಾರಟಮಾಡಲು ಸುಮಾರು 4 ವéರ್ಷದಿಂದ ಪ್ರಯತ್ನ ಪಡುತ್ತಿದ್ದರು. 2012 ರಂದು ಶ್ರೀ ಕ್ಷೇತ್ರದಲ್ಲಿ ನಡೆದ ನೇಮೊತ್ಸವದಲ್ಲಿ ಕೋಟಿ ಚೆನ್ನಯರ ಮೊರೆ ಹೋಗಲು, 3 ತಿಂಗಳ ಒಳಗೆ ಮಾರಟವಾಗುತ್ತದೆ ಎಂದು ಅಭಯ ನೀಡುತ್ತಾರೆ. ಅವರು ಕೊಟ್ಟ ಅವಧಿಯ ಮೊದಲೆ ಅಂದರೆೆ ಒಂದು ತಿಂಗಳ ಒಳಗೆ ವಿಜಯರ ಮನೆ ಮಾರಾಟವಾಗುತ್ತದೆ. ಅದರಂತೆ ವಿಜಯರವರು ಮಾಣಿ ಬಾಲೆಗೆ ಬೆಳ್ಳಿಯ ಕಿರೀಟವನ್ನು ಹರೆಕೆಯ ರೂಪದಲ್ಲಿ ಕೊಟ್ಟಿರುತ್ತಾರೆ.

** ಅದೇ ರೀತಿಯಾಗಿ ಹೇಮಲತಾ ಎನ್ನುವ ಹೆಣ್ಣಿಗೆ ಮದುವೆಯಾಗದೆ ಹೋಗಲು ದೈವದ ಮೊರೆ ಹೋಗಲು ಅವರ ಅಭಯದಂತೆ ಮದುವೆಯಾಗಲು ಅವರು ಮಾಣಿಬಾಲೆಗೆ ಬೆಳ್ಳಿಯ ಗೆಜ್ಜೆ ಕತ್ತಿಯನ್ನು ನೀಡಿರುತ್ತಾರೆ.

ಹೀಗೆ ಮದುವೆಯ ಭಾಗ್ಯ ಕೂಡಿಬರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉದ್ಯೊಗ, ವ್ಯವಹಾರ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ, ಕಾಣುತಿದ್ದಾರೆ.

ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿಯ ವಿಳಾಸ

ಶ್ರೀ ಬ್ರಹ್ಮ ಬೈದರ್ಕಳ ನೇತ್ರವತಿ
ಪೆಮರ್ುಡ ಗರಡಿ ಅಗತ್ತಾಡಿ
ಪೆರಾಬೆ ಗ್ರಾಮ, ಅಂಚೆ ಪೆರಾಬೆ
ಪುತ್ತೂರು ತಾಲೂಕು
ದಕ್ಷಿಣ ಕನ್ನಡ, ಪಿನ್ – 574285

ಪೋನ್:-
ಶೃಲೇಶ್ – 9741631784
ತೇಜಸ್ಸ್ – 9980801631

 

 

 

 

 

ಕಮೀಟಿ
ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿ ಅಗತ್ತಾಡಿ


ವಿ. ಸೂ :- ಶ್ರೀ ಬ್ರಹ್ಮ ಬೈದರ್ಕಳ ನೇತ್ರಾವತಿ ಪೇರಮುಂಡ ಗರಡಿ, ಅಗತ್ತಾಡಿಯ ಕೆಲಸ ಕಾರ್ಯಗಳು ಇನ್ನೂ ಬಾಕಿ ಇರುವುದರಿಂದ ಶ್ರೀ ಭಗವಧ್ಬಕ್ತರು ತನುಮನ ಧನಗಳಿಂದ ಸಹಕರಿಸಬೇಕಾಗಿ ಪ್ರಾರ್ಥಿಸುತ್ತೇವೆ.

ಶ್ರೀ ಕ್ಷೇತ್ರಕ್ಕೆ ದೇಣಿಗೆ ನೀಡಬಯಸುವವರು ಸಿಂಡಿಕೇಟ್ ಬ್ಯಾಕ್ ಅಲನಕರ್ (Alankar Branch) ಶಾಖೆಯಲ್ಲಿರುವ A/C No – 02042200062730 – IFSC Code SYNB0000204 “President and secretary Sri Brahmabaidarkala Nethravathi Peramunda Garadi Agathady” ಈ ವಿಳಾಸಕ್ಕೆ ಕಳುಹಿಸಬಹುದು.

 

Photo Gallery