ಶ್ರೀ ಬ್ರಹ್ಮಬೈದರ್ಕಳ ಪ್ರಸನ್ನ

ಉಡುಪಿಯಿಂದ 15km, ಕಾರ್ಕಳದಿಂದ 25km ಸಾಗಿದರೆ ಕಾಣಸಿಗುವುದು ಹಿರಿಯಡಕ ಎಂಬ ಊರು. ಇಲ್ಲಿಂದ 1km ಪಶ್ಚಿಮಕ್ಕೆ ಸಾಗಿದರೆ ಒಂದು ಚಿಕ್ಕ ಅಂಜಾರು ಗ್ರಾಮ. ಈ ಗ್ರಾಮದಲ್ಲಿ ನೆಲೆ ನಿಂತ ಸುಂದರವಾದ ಹಾಗೂ ಕಾರಣಿಕದ ಶ್ರೀ ಬ್ರಹ್ಮಬೈದರ್ಕಳ ಗರೋಡಿ. ಈ ಕಾರಣಿಕದ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರಕ್ಕೆ ಸುಮಾರು 400 ರಿಂದ 450 ವರ್ಷಗಳ ಇತಿಹಾಸ ಹೊಂದಿದ್ದು. ಅತೀ ಕಾರಣಿಕದಿಂದ ಕೂಡಿದೆ. ಮೊದಲಿಗೆ ಮುಳಿ ಹುಲ್ಲಿನಿಂದ ನಿಮರ್ಾಣಗೊಂಡಿದ್ದ ಈ ಗರೋಡಿ ತದನಂತರ ಅಂಜಾರು, ಓಂತಿಬೆಟ್ಟು, ಮಾಂಬೆಟ್ಟು ಬೀಡಿನವರ ಉಸ್ತುವಾರಿನಲ್ಲಿ ಎಲ್ಲಾ ಗ್ರಾಮಸ್ಥರು ಸೇರಿ ಸುಸಜ್ಜಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ದೇವಿಯ ಗುಡಿ, ಶಿವರಾಯ ಸ್ಥಾನ, ಜುಮಾದಿ ಸ್ಥಾನ, ಸುತ್ತುಪೌಳಿ, ಆವರಣಗೋಡೆಯನ್ನು ನಿಮರ್ಿಸಲಾಯುತು.

ತದನಂತರ 1988ರಲ್ಲಿ ಪುನರ್ ಪ್ರತಿಷ್ಟಾಪನೆಗೊಂಡು ನಿಯಮಾನುಸಾರ ಡಿಸೆಂಬರ್ ತಿಂಗಳಲ್ಲಿ ಹೊಸ ಅಕ್ಕಿಯ ಅಗಲು ಸೇವೆ, ಗಣೇಶ ಚತುಥರ್ಿಯ ದಿನ ಚೌತಿ ಪೂಜೆ, ಹರಕೆಯ ಅಗಲು ಪನಿಯಾರ ಸೇವೆ, ಸೋಣ ತಿಂಗಳಲ್ಲಿ ಪ್ರತಿ ದಿನ ಹೂವಿನ ಪೂಜೆ ಹಾಗೂ ಮಂಗಳವಾರ ಮತ್ತು ಸಂಕ್ರಮಣ ದಿನದಂದು ಭಕ್ತರು ಪೂಜೆ ಸಲ್ಲಿಸುತ್ತಾರೆ.

25 ವರ್ಷಗಳಿಂದ ದರ್ಶನ ಪಾತ್ರಿ ಪಡ್ಡಮ ಸುಂದರ ಪೂಜಾರಿ ಯವರು ಶ್ರೀ ಕ್ಷೇತಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಹೀಗೆ ಮದುವೆಯ ಭಾಗ್ಯ ಕೂಡಿಬರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉದ್ಯೊಗ, ವ್ಯವಹಾರ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ, ಕಾಣುತಿದ್ದಾರೆ.

ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿಯ ವಿಳಾಸ

ಅಂಜಾರು ಗ್ರಾಮ
ಹಿರಿಯಡಕ ಪೋಸ್ಟ್
ಉಡುಪಿ ತಾಲೂಕು-ಜಿಲ್ಲೆ 576113

 

ಮುಖ್ಯಸ್ಥರು 
ಎ. ಸುಭಾಶ್ಚಂದ್ರ ಹೆಗ್ಡೆ

 

 

ಅರ್ಚಕರು 
ಸುಂದರ ಪೂಜಾರಿ ಗರಡಿ ಮನೆ

 

Photo Gallery