ಗುಗ್ಗುರು ಮಾಳ್ಯದಿಂದ ತಪ್ಪಿಸಿ ಕೊಂಡ ಬಂಟರು ತುಪ್ಪೆ ಕಾಡಿನಲ್ಲಿ ಕೆಲವು ದಿನಗಳನ್ನು ಕಳೆಯ ಬೇಕಾಯಿತು. ಪಡುಮಲೆಯ ಸಮಾಚಾರವು ಇದಕ್ಕಿಂತ ಮೊದಲೆ ಎಣ್ಮೂರಿಗೆ ಬಂದಿತು. ಕೋಟಿ ಚೆನ್ನಯರು ಪಡುಮಲೆ ಬಲ್ಲಾಳನ ಗದ್ದಿಗೆ ಗಡು ಇಡುವುದಕ್ಕೆ ಮುಂಚಿತವಾಗಿಯೇ, ಅವರ ಸಾಕು ತಾಯಿ ಸಾಯನ ಬೈದೆತಿಯು ಪಡುಮಲೆಯಿಂದ ಹೊರಟು ಎಣ್ಣೂರಿಗೆ ಬಂದಿದ್ದಳು. ಎಣ್ಮೂರಿನ ಅಯ್ಯನೂರಿನಲ್ಲಿ ಅವಳ ತವರು ಮನೆ. ಕೋಟಿ ಚೆನ್ನಯರ ಪ್ರತಾಪವನ್ನು ಇವಳಿಂದ ಕೇಳಿದ ನೆಂಟ್ಟರಿಷ್ಟರೂ ಜಾತಿ ಬಾಂಧವರು ಬಹಳ ಹಿಗ್ಗಿದರು. ಕೋಟಿ ಚೆನ್ನಯರ ಬಂಧನ ವಾತರ್ೆ ಎಷ್ಟೆ ಗುಟ್ಟಿನಲ್ಲಿ ಚೆಂದುಗಿಡಿ ಇರಿಸಿದರೂ ಅದು ಪ್ರಚಾರವಾಗಿಯೆ ಹೋಯಿತು. ಎಣ್ಮೂರು ಮತ್ತು ಪಂಜದಲ್ಲಿ ಇದ್ದವರು ಹೆಚ್ಚಾಗಿ ಬಿಲ್ಲವರೆ. ಸೆರಗಿನಲ್ಲಿ ಕಟ್ಟಿದ ಬೆಂಕಿಯ ಹರಡಿದಂತೆ ಜಾತಿ ಪ್ರಸಂಗವಾಗಿ ಸುದ್ದಿ ಹರಡಲು ಕಾರಣವಾಯಿತು. ಕೋಟಿ ಚೆನ್ನಯರ ಸುದ್ದಿ ಬಿಲ್ಲವರು ಬಲ್ಲಾಳರಿಗೂ ತಿಳಿಸಿದರು. ಕೋಟಿ ಚೆನ್ನಯರನ್ನು ಬಿಡಿಸಿ ಕೊಂಡು ಬರಬೇಕೆಂದು ಕೇಳಿಕೊಂಡರು. ಬಿಲ್ಲವರ ಬಿನ್ನಹಗಳನ್ನು ಕಿವಿ ಕೊಟ್ಟು ಕೇಳಿ, ಮಧ್ಯಸ್ಥಿಕೆಯಿಂದ ಬಿಡಿಸಿ ಕೊಂಡು ಬರಲು ಕಿನ್ನಿ ಚೆನ್ನಯನಿಗೆ ಅಪ್ಪಣೆ ಕೊಟ್ಟರು.