ಬೊಳ್ಳೆ ಮತ್ತು ದೇಯಿ ಒಂದೇ ಊರಿನವರು. ಅವರಿಬ್ಬರೂ ವಿಕಟ ಗೆಳತಿಯರು. ಬೊಳ್ಳೆಯ ತಾಯಿ ಬೊಮ್ಮಿ ಸೊಪ್ಪು ಹರೆಯುವಾಗ ಒಂದು ಹೆಣ್ಣು ಮಗು ಸಿಗುವುದು. ಅವಳು ತನ್ನ ಕೆಲಸದ ಮನೆಯ ಗುತ್ತಿನ ಒಡೆಯನಿಗೆ ತಿಳಿಸುತ್ತಾಳೆ. ಮದುವೆಯಾಗದ ಆ ಒಡೆಯ ಮಗುವನ್ನು ಅವಳಿಂದಲೇ ಸಾಕುವ ವ್ಯವಸ್ಥೆ ಮಾಡುತ್ತಾನೆ ಅವಳೇ ಬೊಳ್ಳೆ. ಮುಂದೆ ಬೊಳ್ಳೆಯನ್ನು ಮದುವೆ ಮಾಡಿ ಕೊಡುತ್ತಾರೆ. ದೇಯಿಯನ್ನು ಕಂಗುಹಿತ್ತಲು ಕಾಂತಣ್ಣ ಬೈದ್ಯನಿಗೆ ಮದುವೆ ಮಾಡಿ ಕೊಡುವರು. ದೇಯಿ ಮತ್ತು ಬೊಳ್ಳೆ ಒಂದೇ ದಿನ ಮುಟ್ಟಾಗುವರು. ಕೆರೆಗೆ ಹೋಗಿ ಸ್ನಾನ ಮಾಡುವರು. ಅಲ್ಲಿ ಪೆರುವೋಳು ಮೀನುಗಳಿಗೆ ಬೆಳ್ತಿಗೆ ಅಕ್ಕಿ ಹಾಕುತ್ತಾರೆ. ಇದರಿಂದಾಗಿ ಇಬ್ಬರೂ ಗಭರ್ಿಣಿಯಾಗುವರು. ದೇಯಿ ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ. ಆಕೆಯೇ ಕಿನ್ನಿದಾರು. ಬೊಳ್ಳೆ ಅವಳಿ ಮಕ್ಕಳನ್ನು ಹೆರುತ್ತಾಳೆ. ಕಾನದ ಕಟದರು. ಈ ಅವಳಿ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಊರು ತಿರುಗಲು ಹೋಗುತ್ತಾರೆ. ಎಣ್ಮೂರಿನಲ್ಲಿ ಕಾನದ ಕಟದೆಯರು ಮೊಗೇಲರ್ು – ಕೊಟಿ ಚೆನ್ನಯರನ್ನು ಭೇಟಿಯಾಗುತ್ತಾರೆ. ಒಟ್ಟಿಗೆ ಕೆಮ್ಮಲೆ ನಾಗಬ್ರಹ್ಮರ ಸ್ಥಾನಕ್ಕೆ ಹೋಗುವರು. ಕೆಮ್ಮಲೆ ನಾಗಬ್ರಹ್ಮನ ದರ್ಶನ ಮಾಡಿ ಹರಕೆ ಸಂದಾಯಿಸಿ ಒಟ್ಟಿಗೆ ಬರುತ್ತಾರೆ. ಕೆಮ್ಮಲೆ ಕಾಡು ಇಳಿಯುವಾಗ ಶಕ್ತಿ ಪ್ರದರ್ಶನ ಮಾಡಿಕೊಳ್ಳುತ್ತಾರೆ. ಮೊಗೇರ್ಲನ್ನು ಕೋಟಿ ಚೆನ್ನಯರು ಸೋಲಿಸುತ್ತಾರೆ. ಕೋಟಿ ಚೆನ್ನಯರನ್ನು ಕಾನದ ಕಟದ ಸೋಲಿಸುತ್ತಾರೆ. ಕೊನೆಗೆ ಪರಸ್ವರ ಬೆಂಬಲ ಸೂಚಿಸಿ ಮುಂದುವರಿಯುತ್ತಾರೆ. ಬಳಲಿದ ಅವರಿಗೆ ನೀರು ಬೇಕಾಗಿತ್ತು. ಅಲ್ಲಿ ನೀರಿರಲಿಲ್ಲ. ಕಾಡಿನ ತೊಟ್ಟಿಗೆ ಇಳಿದರು. ಕಲ್ಲಿನೆಡೆಯಲ್ಲಿ ನೀರು ಜಿನುಗುತ್ತಿತ್ತು. ಕುಡಿಯುವಷ್ಟು ನೀರು ಇರಲಿಲ್ಲ. ಮೊಗೇಲರ್ು ನೀರು ಚಿವ್ಮಿಸಲು ಬಾಣ ಪ್ರಯೋಗ ಮಾಡಿದರು. ಆದರೆ ಯಶಸ್ವಿಯಾಗಲಿಲ್ಲ. ಕೋಟಿ ಚೆನ್ನಯರು ಸುರಿಯ ಹಾಕಿ ಸೋತರು. ಕಾನದ ಕಾಟದ ಆಲುಂಬಡದ ಕೊಂಬೆಯಿಂದ ಪಾದೆಗೆ ಮೂರುಸತರ್ಿ ಮಾನಾಯಿಸಿದರು. ಕೂಡಲೇ ನೀರು ಚಿವ್ಮಿತು. ನೀರು ಎಲ್ಲರೂ ಕುಡಿದು ಅವರ ಅವರ ಪಾಡಿಗೆ ಹೋದರು. ಮುಂದೊಂದು ದಿನ ಕಾನದ ಕಟದ ಮೀನು ಹಿಡಿಯಲು ಹೋಗುತ್ತಾರೆ. ಕಟದ ನೀರಿಗಿಳಿದವನು ಮೇಲೆ ಬರಲಿಲ್ಲ. ಕಾನದನೂ ನೀರಿಗೆ ಹಾರಿದ. ಅವನೂ ಮೇಲೆ ಬರಲಿಲ್ಲ. ಮುಂದೆ ಈ ವೀರರು ಪಂಜುಲರ್ಿ ಭೂತದೊಂದಿಗೆ ಸೇರುತ್ತಾರೆ. ಇದೇ ರೀತಿ ಮೊಗೇಲರ್ು ಸಹ ಮೀನು ಹಿಡಿಯಲು ಹೋಗಿ ನೀರಲ್ಲಿ ಮಾಯಾವಾಗುತ್ತಾರೆ. ಈ ಸುದ್ದಿ ಕೇಳಿದ ಮೊಗೇರರ ತಂಗಿಯೂ ನೀರಿಗೆ ಹಾರುತ್ತಾಳೆ.