ಸ್ಥಳ ಇತಿಹಾಸದ ಪ್ರಕಾರ ಕುದಿಗ್ರಾಮ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರ್ಕಳ ಗರಡಿ ಸುಮಾರು 200 ವರ್ಷಗಳ ಇತಿಹಾಸ ಇರಬಹುದೆಂದು ಸ್ಥಳೀಯರ ಅಭಿಪ್ರಾಯ. ಈ ಕ್ಷೇತ್ರದಲ್ಲಿ ಹಿಂದೆ ಗರಡಿಯ ಅವಶೇಷಗಳು ಮಾತ್ರ ಇದ್ದು ಯಾವುದೇ ಪೂಜೆ, ನೇಮಗಳು ನಡೆಯುತಿರಲಿಲ್ಲ. ಸುಮಾರು ನೂರು ವರ್ಷಗಳ ಹಿಂದೆ ಶ್ರೀ ಬ್ರಹ್ಮಬೈದೆರ್ಕಳ ಗರಡಿಯನ್ನು ಸ್ಥಪಿಸಲಾಯುತು. ಆ ದಿನಗಳಿಂದ ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಪೂಜೆ, ನೇಮಗಳು ವಿಜ್ರಂಭಣೆಯಿಂದ ನಡೆದುಕೊಂಡು ಬಂದಿದೆ. ಹಿಂದೆ ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಬಂಡಾರ ವವರ್ಾಡಿಯ ದೊಡ್ಡಮನೆಯಲ್ಲಿ ಇತ್ತು. ಪ್ರತೀ ವರ್ಷವೂ ಇಲ್ಲಿ ಶ್ರೀ ಕೊಡಮಣಿತ್ತಾಯ ಕಂಬಳ ನಡೆಯಿತ್ತದೆ.