ಕೋಟಿ ಚೆನ್ನಯರು ಎಣ್ಮೂರುನಲ್ಲಿರುವಾಗ ಅನೇಕ ಕಡೆ ಸಂಚರಿಸಿದಂತೆ ಕಂಡುಬರುತ್ತದೆ. ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದ ಏರಿಕೆ, ಬೆಳಂದೂರು ಗ್ರಾಮದ ಅಂಕದಡ್ಕ, ಸವಣೂರು ಗ್ರಾಮದ ಅಗರಿ, ಚಾರ್ವಕ ಗ್ರಾಮದ ಎಣ್ಮೂರು, ಈ ಕಡೆ ಅನೇಕ ಕುರುಹುಗಲೊಂದಿಗೆ ಹಳಬರ ಕಥೆಗಳಿವೆ. ಪಡುಮಲೆಯಲ್ಲಿ ಏರಾಜೆ ಬಾರಿಕೆ ಎಂಬ ಸ್ಥಳವಿದ್ದರೆ ಕಾಣಿಯೂರು ಗ್ರಾಮದಲ್ಲಿಯೂ ಏರಾಜೆ ಬಾರಿಕೆ ಎಂಬ ಸ್ಥಳವಿರಿವುದು ಗಮನ ಸೆಳೆಯುತ್ತದೆ. ಈ ಪ್ರದೇಶದ ಹಲವರನ್ನು ಬೇಟಿ ಮಾಡಿಸಿದಾಗ ಹಲವು ಹೊಸ ವಿಚಾರಗಳು ತಿಳಿದು ಬರುವುದು. ಈ ಏರಾಜೆ ಬಾರಿಕೆಯಲಲ್ಲಿ ಪ್ರಸಿದ್ಧ ಬಿಲ್ಲವ ಮೆನೆಯಿತದತ್ತಂತೆ. ಈ ಬಿಲ್ಲವ ಎಣ್ಮೂರಿಗೆ ಬಂದು ಸೇರಿದ ಕೋಟಿ ಚೆನ್ನಯರ ಪ್ರತಾಪ ಕೇಳಿ ಎಣ್ಮೂರಿಗೆ ಬಂದು ತನ್ನ ಮನೆಗೆ ಕರೆಸಿ ಆದರೋಪಚಾರಗಳೊಂದಿಗೆ ಸನ್ಮಾನಿಸಿದನೆಂದು ತಿಳಿದು ಬರುವುದು. ಕೋಟಿ ಚೆನ್ನಯರ ಕಾಲಾನಂತರ ಎಣ್ಮೂರಿನಲ್ಲಿ ಗರಡಿ ಸ್ಥಾಪನೆಯಾದ ಸುದ್ದಿಯನ್ನು ಕೇಳಿ ಇಲ್ಲಿಯೂ ಗರಡಿ ಸ್ಥಾಪಿಸಿ ಇಲ್ಲಿಯ ಪಕ್ಕದ ಏಳಡ್ಕದಲ್ಲಿ ನೇಮ ನಡೆಯುತ್ತೆಂದು ತಿಳಿದು ಬರುವುದು. ಕ್ರಮೇಣ ಇಲ್ಲಿಯ ಬಿಲ್ಲವ ಕುಟುಂಬ ನಾಶವಾಗಿ ನೇಮ ತಂಬಿಲ ನಿಂತಿತು. ಗರಡಿ ಬಿದ್ದು ಹೋಯಿತು.