ಪಿಜಾವಿನ ಬಿಲ್ಲವನ ಮನೆಗೆ ಮುಟ್ಟಿದಾಗ ಮನೆಯ ಯಜಮಾನ ಮಿಂದು ಕುಳಿತ್ತಿದ್ದ. ಅಂಗಳದ ಬದಿಯ ತನಕ ಬಂದ ಸೂಟೆಯ ಬೆಳಕನ್ನು ಕಂಡು ಅಂಗಳಕ್ಕೆ ಇಳಿದು ಯಾರೆಂದು ಕೇಳಿದ. ಕೋಟಿ ಚೆನ್ನಯರು ಅಂಗಳ ಹತ್ತಿ ನಾವು ಊರು ಸಾಗಿ ಬಂದ ಬಿಲ್ಲವರ ಮಕ್ಕಳು ಎಂದಾಗ ಬಿಲ್ಲವ ಹತ್ತಿರ ಹೋಗಿ ನೋಡಿ ಆಶ್ವರ್ಯ ಪಟ್ಟರೂ, ಮನೆಯ ಒಳಗೆ ಕರೆದು ಕುಳ್ಳರಿಸಿದ.

ಪಿಜಾವು ಬೀಡಿನ ಈಗಿನ ಮನೆ

ಸೂರ್ಯಚಂದ್ರನಂತೆ ಕಾಣುವ ಬಂಟರನ್ನು ಕಂಡ ಬಿಲ್ಲವ ಬಹಳ ಸಂತೋಷ ಪಟ್ಟ. ಅತ್ತೆಯನ್ನು ಕರೆದು ಬಂಟರಿಗೆ ಆಸರು ತಂದು ಕೊಡುವಂತೆ ಹೇಳಿದ. ಬೆಲ್ಲ ತಿಂದು ನೀರು ಕುಡಿದರು. ಮುಂದೆ ದೀಪದ ಬೆಳಕಿನಲ್ಲಿ ಕುಳಿತವರು ತಮ್ಮ ತಮ್ಮ ಪರಿಚಯದ ಕಡೆಗೆ ಬಂದರು. ಕೋಟಿ ಚೆನ್ನಯರು ಪಡುಮಲೆಯ ತಮ್ಮ ಹುಟ್ಟು ಬೆಳವಣಿಗೆಯ ಕತೆ ವಿವರಿಸಿ, ಪಡುಮಲೆ ಬಲ್ಲಾಳನಿಂದ ವಿರಸಗೊಂಡು ಇಲ್ಲಿಯ ತನಕ ಬಂದ ವಿವರವನ್ನು ತಿಳಿಸಿದರು. ಈ ವೇಳೆ ಮನೆಯ ಹಿಂಬದಿಯ ಅಂಗಳದಲ್ಲಿ ಒಂದೆರಡು ಗೂಟದ ಕೋಳಿಗಳು ಸತ್ತು ಉರುಳಿದ್ದವು. ಕೋಟಿ ಚೆನ್ನಯರು ಎಣ್ಣೆ ಹಚ್ಚಿ ಬಿಸಿ ನೀರು ಸ್ನಾನ ಮಾಡಿದರು. ಈ ಹೊತ್ತಿಗೆ ಬಂಟರು ಬಂದ ಸುದ್ದಿ ನೆರೆಮನೆಗಳಿಗೆ ಮುಟ್ಟಿತ್ತು. ಹಲವಾರು ಮಂದಿ ಬಂದು ಸೇರಿದರು. ಇವರ ಅಕರ್ಷಕ ಸೌಂದರ್ಯ ಕಂಡು ಕದಲಲಾರದೆ ಅಲ್ಲೇ ಉಳಿದರು. ಅಡುಗೆ ಸಿದ್ಧವಾಯಿತು. ಎಲ್ಲಾರು ಒಟ್ಟಿಗೆ ಕುಳಿತು ಸಹಭೋಜನ ಮಾಡಿದರು.

ಪಿಜಾವಿನಲ್ಲಿ ದೊರೆತಿರುವ ನಾಗಬ್ರಹ್ಮ ಮತ್ತು ಇತರ ನಾಗಗಳ ಶಿಲಾಕೃತಿ

ಮರುದಿನ ಬೆಳಿಗ್ಗೆ ಎದ್ದವರು ಕಲ್ಲೆಂಬಿ ದೋಳದ ದಾರಿ ತಿಳಿದುಕೊಂಡು ಹೊರಟರು. ಮುಂದೆ ಹೋದಾಗ ಕೇರ್ಪಟ ದುಗರ್ಾಪರಮೇಶ್ವರಿ ದೇವಸ್ಥಾನ ಎದುರಾಯಿತು. ದೇಗುಲಕ್ಕೆ ಪ್ರದರ್ಶನ ಬಂದು ಅಡ್ಡಬಿದ್ದು ಮುಂದುವರಿಸಿದರು. ಮುಂದೆ ನಡೆದಾಗ ವಿಶಾಲವಾದ ಮೈದಾನ. ಮೈದಾನ ತುಂಬಾ ಜಾನುವಾರುಗಳು ಮೇಯುತ್ತಿದ್ದವು. ಮೈದಾನದ ಮಧ್ಯ ಗೋವಳರು. `ಕುಟ್ಟಿದೊನ್ನೆ` ಆಟ ಆಡುತ್ತಿದ್ದರು ಇವರೂ ಅವರೊಂದಿಗೆ ಸೇರಿಕೊಂಡು ಆಟವಾಡಿದರು. ಬಿಸಿಲು ಜೋರಾಯಿತು. ಆಟ ನಿಲ್ಲಿಸಿದರು. ಹುಡುಗರೊಂದಿಗೆ ಮೋಜಿನ ಮಾತನಾಡಿದ ಚೆನ್ನಯ. ಕೋಟಿ ಹುಡುಗರಿಂದಲೆ ಕಲ್ಲೆಂಬಿ ಮನೆಯ ದಾರಿ ತಿಳಿದುಕೊಂಡನು. ಅಲ್ಲಿಯ ಗುಡ್ಡೆಯನ್ನು ಏರಿ ಇಳಿಯುವುದೆ ಕೂಟಾಜೆಗೆ. ಗುಡ್ಡ ಏರಿದ ಬಂಟರು ಕೂಟಾಜೆಗೆ ಇಳಿದರು.

ಪಿಜಾವುನಲ್ಲಿ ಬಲ್ಲಾಳ ವಂಶಜರು ಅಂತ್ಯಗೊಂಡಾಗ ಉತ್ತರಕ್ರಿಯೆಗಾಗಿ ನಿಮರ್ಿಸಿದ್ದೆನ್ನಲಾದ ಮೂತರ್ಿಗಳು

ಆಟವಾಡಿ ದಣಿದ ಬಂಟರಿಗೆ ಕುಡಿಯಲು ನೀರು ಬೇಕಿತ್ತು. ದೂರದಿಂದಲೇ ಬರುವುದನ್ನು ಕಂಡ ಕೂಟಾಜೆ ಮನೆಯವರು ಹೆದರಿ ಬಾಗಿಲು ಹಾಕಿ ಪರಾರಿಯಾದರು. ಬಾಗಿಲಿಗೆ ಬಂದ ಬಂಟರು ಮನೆಯವರನ್ನು ಕರೆದಾಗ ಸುದ್ದಿಯೇ ಇಲ್ಲ, ಅತ್ತ ಇತ್ತ ನೋಡಿದವರ ಕಣ್ಣಿಗೆ ಗದ್ದೆಯ ಬದಿಯ ಪಾದೆ ಸಂದುಗಳಿಂದ ನೀರು ಜಿಣುಗುವುದು ಕಂಡು ಬಂತು. ನೀರಿನ ಒರತೆ ಚಿಮ್ಮಿ ಹರಿಯಿತು. ಬಂಟರು ಬೇಕಾದಷ್ಟು ತಿಳಿನೀರನ್ನು ಕುಡಿದು, ಅಲ್ಲಿಯ ಕಲ್ಲುಗಳನ್ನು ಮತ್ತಷ್ಟು ತೆಗೆದು ಒಂದು ಕೊಳವನ್ನೇ ಮಾಡಿದರು. ಮುಂದೆ ಅಲ್ಲಿಯೇ ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದಾಗ ಕರೆದರೆ ಕೇಳುವಷ್ಟು ದೂರದಿಂದ ದನ ಕೂಗುವ ಶಬ್ದ ಕೇಳಿಸಿತು. ಗೋವಳರು ಹೇಳಿದ ಪ್ರಕಾರ ಅಕ್ಕ ಕಿನ್ನಿದಾರು ಮನೆ ಅದೇ ಆಗಿರಬಹುದೆಂದು ಊಹಿಸಿದ ಬಂಟರು ಆ ಕಡೆಗೆ ಹೋದರು.

ಟಿಪ್ಪಣಿ : ಪಿಜಾವಿನಿಂದ ಹೊರಟು ಬಂದು ಪ್ರಾಥರ್ಿಸಿದ ಕೇರ್ಪಟ ದುಗರ್ಾಪರಮೇಶ್ವರಿ ದೇವಾಸ್ಥಾನ ಈಗಲೂ ಇದೆ. ಕಲ್ಲೆಂಬಿಯ ಹತ್ತಿರ ಅಂದಿನ ಬೀಡಿನ ಸ್ಥಳಕ್ಕೆ ಮದರ್ೂರು ಬೀಡೆಂದು ಹೆಸರು. ಈ ಬೀಡಿನ ದನಗಳು ಹೆಚ್ಚಾಗಿ ಈ ಅಡ್ಯಕ್ಕೆ ಮೇಯಲು ಹೋಗುದರಿಂದ ಮದರ್ೂರಡ್ಕವೆಂಬ ಹೆಸರಾದುದು ಈಗಲೂ ಉಳಿದು ಕೊಂಡಿದೆ. ಮದೂರು ಬೀಡಿನ ಪಕ್ಕದಲ್ಲಿಯೆ ಚೆಂದುಗಿಡಿಯ ಉಸ್ತುವಾರಿಯಲ್ಲಿ ನಡೆಯುವ ಗರಡಿ ಶಾಲೆ ಇತ್ತೆಂದು ಕಂಡು ಬಂದಿದೆ. ಈ ಬೀಡಿನಲ್ಲಿ ವಾಸಿಸುವ ಕುಟುಂಬಕ್ಕೆ ಬ್ರಹ್ಮರಾಕ್ಷಸನ ಉಪದ್ರವಿತ್ತೆಂದೂ, ಈ ಮನೆಯರು ಬ್ರಹ್ಮರಾಕ್ಷಸನಿಗೆ ಗುಡಿ ಕಟ್ಟಿಸಿ, ನಿತ್ಯ ದೀಪಾರಾಧನೆ ಮಾಡಿದ ಮೇಲೆ ಬ್ರಹ್ಮರಾಕ್ಷಸನ ಭಾದೆ ಕಡಿಮೆಯಾಯಿತೆಂದು ಪರಿಸರದ ಜನರು ಹೇಳುತ್ತಿರುವುದು ಕೇಳಿಬರುತ್ತದೆ.