ಈ ಗರಡಿಗೆ ಸುಮಾರು 300 ರಿಂದ 350 ವರ್ಷದ ಇತಿಹಾಸವಿದೆ ಎಂಬುದು ಸ್ಥಳಿಯರ ಅಭಿಪ್ರಾಯ. ಇಲ್ಲಿ ಮೊದಲ ವಾರದ ಪ್ರತೀ ಮಂಗಳವಾರದಂದು ಗರೋಡಿಯ ಬಾಗಿಲು ತೆರೆದು ಪೂಜೆ ನಡೆಯುತ್ತಿತ್ತು. ಕಾಲ ಕ್ರಮೇಣ ಪ್ರತೀ ಮಂಗಳವಾರದ ಬದಲಾಗಿ ಪ್ರತೀ ತಿಂಗಳು ಸಂಕ್ರಮಣದಂದು ಪೂಜೆ ನಡೆಯುತ್ತದೆ. ದೇವರಿಗೆ ಭಕ್ತರು ತಂಬಿಲ, ಹೂ, ನೀರನ್ನು ಸಂಕ್ರಮಣದಂದು ಸಮಪರ್ಿಸುತ್ತಾರೆ. ಇಲ್ಲಿ ಕೋಟಿ ಚೆನ್ನಯರ ಗರಡಿ ಅಲ್ಲದೆ, ಶ್ರೀ ಕೊಡಮಣಿತ್ತಾಯ ಹಾಗೂ ಮಾಣಿ ಬಾಲೆ ಸ್ಥಾನಗಳು ಇವೆ. ಪ್ರತೀ ವರ್ಷ ಮಾಚರ್್ ತಿಂಗಳಲ್ಲಿ ಕೋಟಿ ಚೆನ್ನಯರ ನೇಮ ನಡೆಯುತ್ತದೆ. ಕೋಟಿ ಚೆನ್ನಯರ ದರ್ಶನಕ್ಕೆ ಇಲ್ಲಿ ಅವಳಿ ಮಕ್ಕಳು ಹೆಚ್ಚಾಗಿ ನಿಲ್ಲುತ್ತಾರೆ.