ಅರ್ಚಕರು 
ನಿತ್ಯಾನಂದ ಪೂಜಾರಿ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮವು ಪಚ್ಚೆ ಪೈರು ಗುಡ್ಡ ಬೆಟ್ಟಗಳಿಂದ ಕೂಡಿದ ಊರು. ಸನಾತನ ಹಿಂದೂ ಧರ್ಮ ಹಾಗೂ ಭಾರತೀಯ ಸಂಸ್ಕ್ರತಿಯ ಪ್ರತಿರೂಪವಾಗಿ ಮೈವೆತ್ತಿ ನಿಂತ ಕುಕ್ಕುಜೆ ಕಾರಣಿಕ ಕ್ಷೇತ್ರವಾಗಿದೆ. ಸುಮಾರು 200 ವರ್ಷಗಳ ಹಿಂದೆ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರೋಡಿ ಕುಕ್ಕುಜೆ, ದೊಂಡೇರಂಗಡಿಯಲ್ಲಿ ಕಿಟ್ಟು ಬೈದ್ಯ ಎನ್ನುವವರು ಇಲ್ಲಿ ಕೋಟಿ ದರ್ಶನದ ಪಾತ್ರಿಯಾಗಿದ್ದು, ಸುಮಾರು 200 ವರ್ಷಗಳ ಹಿಂದೆ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರೋಡಿಯಲ್ಲಿ ದರ್ಶನ ಮುಗಿಯುವ ಸಂದರ್ಭದಲ್ಲಿ ಇರುವತ್ತೂರು ಬೀಡಿನ ಬಲ್ಲಾಳರಿಗೂ, ಕಿಟ್ಟು ಬೈದ್ಯನಿಗೂ ಗರೋಡಿಯ ವಿಷಯದಲ್ಲಿ ಇವರಿಬ್ಬರಲ್ಲೂ ವಾದ ವಿವಾದವಾಗಿ ಕಿಟ್ಟು ಬೈದ್ಯನು ದರ್ಶನ ಮುಗಿದ ಮೇಲೆ ಚಲ್ಲಾಣಾ ಗೆಜ್ಜೆಯನ್ನು ಇಳಿಸದೆ ಸುರಿಯಕ್ಕೆ ಚವಾಲ ಸಿಕ್ಕಿಸಿಕೊಂಡು ತನ್ನ ಕುಕ್ಕುಜೆ ಮನೆಗೆ ಬಂದರು ಎಂದು ಸ್ಥಳಿಯರ ಅಂಬೊಣ. ಹೀಗೆ ಚಲ್ಲಣ ಗೆಜ್ಜೆಯನ್ನು ಇರ್ವತ್ತೂರು ಗರಡಿಯಲ್ಲಿ ಇಳಿಸದೆ ನೇರವಾಗಿ ಮನೆಗೆ ಬಂದ ಕಾರಣ ಕೋಟಿ ಚೆನ್ನಯರು ಕಿಟ್ಟು ಬೈದ್ಯರ ಹಿಂದೇಯೇ ಬಂದು ಮನೆಯಲ್ಲಿ ನೆಲೆ ನಿಂತರು ಎಂದು ಜನರ ನಂಬಿಕೆಯಾಗಿದೆ.

ಅಜಾನು ಬಾಹು ಮತ್ತು ಬಲಾಡ್ಯನಾದ ಕುಕ್ಕುಜೆ ಕಿಟ್ಟು ಬೈದ್ಯನು ಗರೋಡಿಯಲ್ಲಿ ಚಲ್ಲಾಣಾ ಗೆಜ್ಜೆಯನ್ನು ಇಳಿಸದೆ ಮನೆಗೆ ಬರುವಾಗ ಅಂದಿನ ಇರುವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿ ಬಲ್ಲಾಳರಿಗೂ ಹಾಗೂ ಜನರಿಗೂ ಇವರನ್ನು ತಡೆಯಲು ಆಗಲಿಲ್ಲ. (ಹೀಗೆ ಕೋಟಿ ಚೆನ್ನಯರು ಕಿಟ್ಟು ಬೈದ್ಯನ ಹಿಂದೆ ಬರುವಂತಾಯಿತು.)

ಪಡುಮಲೆಯಲ್ಲಿ ಕೋಟಿ ಚೆನ್ನಯರು ಅರಮನೆಯನ್ನು ಬಿಟ್ಟು ಹೋಗುವಾಗ ಯಾರು ತಡೆಯಲಾಗಲಿಲ್ಲ. ಅದೇ ರೀತಿ ಇರವತ್ತೂರು ಗರಡಿಯಲ್ಲಿ ಕಿಟ್ಟು ಬೈದ ಗರಡಿ ಬಿಟ್ಟು ಹೊರಡುವಾಗ ಯಾರಿಂದಲೂ ತಡೆಯಲಾಗಲಿಲ್ಲ.

ಹೀಗೆ ಕೋಟಿ ಚೆನ್ನಯರನ್ನು ಕಿಟ್ಟು ಬೈದನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಪುರಸ್ಕಾರಗಳನ್ನು ನೀಡುತ್ತಾ ಬಂದರು. ಅನಂತರ ಕುಕ್ಕುಜೆ ಮನೆಯಲ್ಲಿ ಪ್ರತೀ ವರ್ಷ ಕಿಟ್ಟು ಬ್ಯೆದ್ಯನು ಕೋಟಿ ಚೆನ್ನಯರ ನೇಮೋತ್ಸವವನ್ನು ನಡೆಸುತಿದ್ದರು.

ಸುಮಾರು 150 ವರ್ಷಗಳ ಹಿಂದೆ 10-12 ಸಲ ನೇಮೋತ್ಸವವು ನಡೆದರಬಹುದು. ನೇಮೋತ್ಸವವು ನಿಂತ ನಂತರ ಪ್ರತಿ ದಿನವೂ ಇಲ್ಲಿ ಹೂ, ಪೂಜೆ ನಡೆಯುತ್ತಿತ್ತು.

ಕಿಟ್ಟು ಬ್ಯೆದ್ಯನು ತೀರಿಕೊಂಡ ನಂತರ ಕುಕ್ಕುಜೆ ಮನೆಯಲ್ಲಿ ಕೋಟಿ ಚೆನ್ನಯರಿಗೆ ಯಾರು ಪೂಜೆ ನಡೆಸುವವರಿರಲಿಲ್ಲ. ಆದ್ದರಿಂದ ಊರಿನವರೆಲ್ಲಾ ಸೇರಿ ಮುಕರ್ನಾಡಿನಲ್ಲಿ (ಮುಮ್ಮಾಯಿ ಸ್ಥಳದಲ್ಲಿ) ನೇಮೋತ್ಸವವನ್ನು ನಡೆಸುತ್ತಾ ಬಂದರು.

ಸುಮಾರು 80 ವರ್ಷಗಳ ಹಿಂದೆ ಮೆನ್ಪ ಪೂಜಾರಿಯವರು (ಕಿಟ್ಟ ಪೂಜಾರಿಯವರ ಮೊಮ್ಮಗ) ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರೋಡಿಯ ನೇಮೋತ್ಸಕ್ಕೆ ಹೊದ ಸಂಧರ್ಭದಲ್ಲಿ ಅವರ ಮನೆಮಂದಿ ಕುಕ್ಕುಜೆ ಮನೆಯಲ್ಲಿ ಬಾಗಿಲು ಹಾಕಿ ಮಲಗಿದ್ದರು. ಮೆನ್ಪ ಪೂಜಾರಿಯವರು ದರ್ಶನ ನಡೆಯುತ್ತಿರುವ ಸಂದರ್ಭದಲ್ಲಿ ಗಂಧ ಪ್ರಸಾದ ತೆಗೆದುಕೊಳ್ಳಲು ಹೋದಾಗ ಆ ಸಮಯದಲ್ಲಿ ಮೆನ್ಪ ಪೂಜಾರಿಯವರಿಗೆ ಬ್ರಹ್ಮ ಬ್ಯೆದರ್ಕಳರು ನಾವು ನಿಮ್ಮ ಮನೆಗೆ ಹೋದ ಸಂಧರ್ಭ ಅಲ್ಲಿ ಎಲ್ಲರೂ ಬಾಗಿಲು ಹಾಕಿ ಮಲಗಿದ್ದರು. ಇನ್ನು ಮುಂದೆ ನಾವು ಕಂಬಳಗದ್ದೆಗೆ ಹೋಗಿ ಬರುವವರೆಗೆ ಬಾಗಿಲು ಹಾಕಬಾರದು. ಮನೆಯಲ್ಲಿ ಎರಡು ನಂದಾ ದೀಪ ಉರಿಯುತ್ತಿರಬೇಕು ಎಂದು ಕೋಟಿ ಚೆನ್ನಯರ ನುಡಿಯಾಯಿತು. ಆ ನಂತರ ಅದೇ ಪ್ರಕಾರ ಕುಕ್ಕುಜೆ ಗರೋಡಿಯಲ್ಲಿ ನೇಮೋತ್ಸವ ನಡೆಯುವಾಗ ಕುಕ್ಕುಜೆ ಮನೆಗೆ ಬಾಗಿಲು ಹಾಕದೆ ಎರಡು ನಂದಾ ದೀಪ ಉರಿಸುತ್ತಾರೆ. ಪ್ರತೀ ದಿನ ಬೆಳಗ್ಗೆ ಬ್ರಹ್ಮ ಬ್ಯೆದರ್ಕಳರಿಗೆ ಹೂ, ನೀರು ಇಟ್ಟು ಪೂಜೆ ಸಲ್ಲಿಸುತ್ತಾರೆ.

ವರ್ಷಗಳ ಹಿಂದೆ ಅರೂಢ ಪ್ರಶ್ನೆಯಲ್ಲಿ ಬ್ರಹ್ಮ ಬ್ಯೆದರ್ಕಳರನ್ನು ಜೀರ್ಣೋದ್ದಾರ ಮಾಡಬೇಕೆಂದು ತೋರಿ ಬಂತು. 2006ರಲ್ಲಿ ಇದಕ್ಕೆ ಸಂಬಂಧಪಟ್ಟ ನಾಗ ದೇವರ ಜೀರ್ಣೋದ್ದಾರ ನಡೆಸಿ ನಂತರ 2013 ರ ಮೇ 22ರಂದು ಶ್ರೀ ಬ್ರಹ್ಮ ಬ್ಯೆದರ್ಕಳ ಮನೆ ಗರೋಡಿಯನ್ನು ಜೀರ್ಣೋದ್ದಾರ ನಡೆಸಿದ್ದರು.

ಕಿಟ್ಟು ಬೈದ್ಯನ ಕಾಲದಲ್ಲಿ ಪ್ರತೀ ವರ್ಷ ನಡೆಯುತ್ತಿರುವ ಕೋಟಿ ಚೆನ್ನಯರ ನೇಮೋತ್ಸವ, ಕಂಬಳ, ಬಾಕಿಮಾರು ಗದ್ದೆ ನಾಟಿ, ಬಾಳೆಗಿಡ ನೆಡುವ ಕಾರ್ಯಕ್ರಮಕ್ಕೆ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರೋಡಿಯ ಬಲ್ಲಾಳರು ಬರುತ್ತಿದ್ದರು. ಇಷ್ಷು ಮಾತ್ರವಲ್ಲದೆ ಊರಿನ ವಾದ ವಿವಾದಗಳ ಸತ್ಯ ಪ್ರಮಾಣವನ್ನು ಕಿಟ್ಟು ಬೈದ್ಯನ ಕಾಲದಲ್ಲಿ ಕುಕ್ಕುಜೆ ಮನೆ ಗರೋಡಿಯಲ್ಲಿ ನಡೆಯುತ್ತಿತ್ತು. ಹಾಗೂ ಇಲ್ಲಿ ಅನೇಕ ಕಾರಣಿಕಗಳು ಕೂಡ ನಡೆದಿದೆಯಂತೆ.

ಕುಕ್ಕುಜೆ ಮನೆ ಗರೋಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು, ಹಿರಿಯಡಕ ಇಲ್ಲಿನ ಅರ್ಚಕರಾದ ಸುಂದರ ಪೂಜಾರಿಯವರ ಮಗನಾದ ನಿತ್ಯಾನಂದ ಪೂಜಾರಿಯವರು ಶ್ರೀ ಕೋಟಿ ಚೆನ್ನಯರಿಗೆ ಪ್ರತಿ ದಿನ ಹೂ. ನೀರು ಇಟ್ಟು ಹಾಗೂ ಪ್ರತಿ ಸಂಕ್ರಮಣದಂದು ವಿಶೇಷ ಪೂಜೆಗಳನ್ನು ನಡೆಸುತ್ತಾರೆ.

ಹಾಗೇ ಇಲ್ಲಿ ನಡೆಯುವ ನೇಮೋತ್ಸವವನ್ನು ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರೋಡಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದೆ. ಈಗ ನಡೆಸುತ್ತಿರುವವರು ಕುಕ್ಕುಜೆ ಮನೆಯ ಪದ್ದು ಪೂಜಾರ್ತಿಯವರು.

ಶ್ರೀ ಬ್ರಹ್ಮ ಬೈದೆರ್ಕಳ ಕುಕ್ಕುಜೆ ಮನೆ ಗರೋಡಿ ವಿಳಾಸ

ಪದ್ದು ಪೂಜಾರ್ತಿ
ಕುಕ್ಕುಜೆ ಮನೆ,ಕುಕ್ಕುಜೆ ಗ್ರಾಮ
ಅಂಚೆ ಕುಕ್ಕುಜೆ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಪೋನ್: 9449470205

 

Photo Gallery