ಸ್ಥಳ ಪುರಾಣದ ಪ್ರಕಾರ ಸುಮಾರು 365 ವರ್ಷ ಹಿಂದೆ ಪೊಸಟಿ ಕುಂಜದಿಂದ, ಬಾಣಲುವಿನಲ್ಲಿ ಇರುವ ಪಾದೆ ಕಲ್ಲಿನ ಮೇಲೆ ಜಿಗಿದು, ಕೋಟಿ ಚೆನ್ನಯರ ನೇರ ದೃಷ್ಟಿ ನಾಯರ್ ಬೆಟ್ಟುರವರ ಮನೆಗೆ (ಈಗಿನ ಬೀಡು ಮನೆ) ಬೀಳುತ್ತದೆ. ನಾಯರ್ ಬೆಟ್ಟು ಮನೆಯವರು ರಾತ್ತಿ ಮಲಗಿದಾಗ ಹಿರಿಯರಿಗೆ ಕನಸಿನ ರೂಪದಲ್ಲಿ ಬಂದು, ನಾವು ಈ ಮನೆಗೆ ನೇರ ದೃಷ್ಟಿ ಬೀರಿದ್ದೇವೆ. ನಮ್ಮನ್ನು ಇಲ್ಲಿಯೇ ನಂಬಿ ಎಂದು ಕೋಟಿ ಚೆನ್ನಯರು ಅಭಯ ಇತ್ತ್ಟರು. ಅದರಂತೆಯೇ ನಾಯರ್ ಬೆಟ್ಟು ಮನೆಯ ಎದುರುಗಡೆ ಶ್ರೀ ಬ್ರಹ್ಮ ಬೈದೆರ್ಕಳ ಸ್ಥಾನವನ್ನು ನಿಮರ್ಿಸಲಾಯಿತು. ಪೊಸಟಿ ಕುಂಜದಿಂದ, ಬಾಣಲುವಿನಲ್ಲಿ ಇರುವ ಪಾದೆ ಕಲ್ಲಿನ ಮೇಲೆ ಜಿಗಿದ, ಕೋಟಿ ಚೆನ್ನಯರ ಪಾದದ ಕುಹುರು ಇನ್ನೂ ಮಾಸದೆ ಹಾಗೆ ಇದೆ. ಇಲ್ಲಿ ಶ್ರೀ ಬ್ರಹ್ಮ ಬೈದೆರ್ಕಳ ಗರಡಿ ಇಲ್ಲ, ಶ್ರೀ ಬಹ್ಮ ಬೈದೆರ್ಕಳ ಸ್ಥಾನ ಮಾತ್ರ ಇದೆ. ಇಲ್ಲಿ ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಇಲ್ಲಿ ಗರಡಿ ಕಟ್ಟಬಾರದು, ನಾಯರ್ ಬೆಟ್ಟು ಸ್ಥಾನದಿಂದ ಭಂಡಾರ ಹೊರಡಿ, ಶೀ ಕೊಡಮಣಿತ್ತಾಯ ಸನ್ನಿದಿಯಲ್ಲಿ ಶ್ರೀ ಬಹ್ಮ ಬೈದೆರ್ಕಳ ನೇಮವು ನಡೆಯಬೇಕೆಂದು ಕಂಡುಬಂದಿತ್ತು. ಅದರಂತೆಯೇ ಸಮಾರು 365 ವರ್ಷ ದಿಂದ ನಾಯರ್ಬೆಟ್ಟು ಸ್ಥಾನದಿಂದ ಬಾಣಲುವಿನಲ್ಲಿರುವ ಶ್ರೀ ಕೊಡಮಣಿತ್ತಾಯ ಸನ್ನಿಧಿಯಲ್ಲಿ ಶ್ರೀ ಬ್ರಹ್ಮ ಬೈದೆರ್ಕಳ ನೇಮ ನಡೆಯುತ್ತಾ ಬಂದಿದೆ. ಇಲ್ಲಿ ವಿಶೇಷ ಅಂದರೆ ಶ್ರೀ ಬಹ್ಮ ಬೈದೆರ್ಕಳ ನೇಮವು ಚಪ್ಪರ ಇಲ್ಲದೆ ನಡೆಯುತ್ತದೆ.

ನಾಯರ್ಬೆಟ್ಟು ಮನೆ ಧರ್ಮಚಾವಡಿ ಎಂದು ಹೇಳಲ್ಪಟ್ಟಿದೆ. ಈ ಜಾಗವನ್ನು ಅನಧಿಕೃತವಾಗಿ ಪ್ರಶ್ನಿಸುವಂತಿಲ್ಲ ಮತ್ತು ಆಸಾಧ್ಯ. ಈ ಧರ್ಮಚಾವಡಿಯಲ್ಲಿ ದಿನಾಲೂ ನಂದಾದೀಪವನ್ನು ಬೆಳಗಿಸುತ್ತಾರೆ. ನಾಯರ್ ಬೆಟ್ಟು ಶ್ರೀ ಬಹ್ಮ ಬೈದೆರ್ಕಳ ಸ್ಥಾನದಲ್ಲಿ ಕುದುರೆಯ ಮೇಲೆ ಅಸೀನರಾದ ನಾಗಬ್ರಹ್ಮರ ಮೂತರ್ಿ, ಕೋಟಿ ಚೆನ್ನಯರ ಭಂಡಾರ ಇದೆ. ಬಾಣಿನಲ್ಲಿ ಶ್ರೀ ಕೊಡಮಣಿತ್ತಾಯ, ಧರ್ಮರಸು, ಕುಕ್ಕಿನಂತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳೂ ಇವೆ. ಪ್ರತೀ ವರ್ಷ ಮಾಚರ್್ ತಿಂಗಳಲ್ಲಿ ನೇಮೋತ್ಸವು ಜರಗುತ್ತಿವೆ. ಹಾಗೂ ಹರಕೆಯ ನೇಮೋತ್ಸವವು ಜರಗುತ್ತದೆ. ಪ್ರತೀ ಮಂಗಳವಾರ ಶ್ರೀ ಕೊಡಮಣಿತ್ತಾಯ ಸ್ಥಾನದಲ್ಲಿ ಹೂ ನೀರು, ಪೂಜೆ, ನಾಯರ್ ಬೆಟ್ಟುವಿನಲ್ಲಿ ಶ್ರೀ ಬ್ರಹ್ಮ ಬೈದೆರ್ಕಳ ಸ್ಥಾನದಲ್ಲಿ ಸಂಕ್ರಮಣದಂದು ಹೂ ನೀರು, ಪೂಜೆ ಅಪರ್ಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ನಾಯರ್ ಬೆಟ್ಟು ಮನೆಯ ಎದುರುಗಡೆ ಇರುವ ಗದ್ದೆಯಲ್ಲಿ ಕಂಬಳ ನಡೆಯುತ್ತದೆ. ಶ್ರೀ ಕೊಡಮಣಿತ್ತಾಯ ಸ್ಥಾನದ ಎದುರುಗಡೆ ಪುರಾತನವಾದ ಒಂದು ಅಲದ ಮರ ಇದೆ ಇದಕ್ಕೆ ಸುಮಾರು 400 ವರ್ಷವಾಗಿರಬಹುದು ಎಂದು ಸ್ಥಳಿಯರ ಅಭಿಪ್ರಾಯ. ಮೊದಲು ಏರಡು ವರ್ಷಗಳಿಗೊಮ್ಮೆ ನಡೆಯುತಿದ್ದ ಶ್ರೀ ಬ್ರಹ್ಮ ಬೈದೆರ್ಕಳ ನೇಮವು ಸುಮಾರು 60 ರಿಂದ 75 ವರ್ಷ ದಿಂದ ಪ್ರತೀ ವರ್ಷ ಜರಗುತ್ತದೆ.

ಶ್ರೀ ಬ್ರಹ್ಮ ಬೈದೆರ್ಕಳ ಸ್ಥಾನದ ವಿಳಾಸ

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದೆರ್ಕಳ ಸ್ಥಾನ
ನಾಯರ್ ಬೆಟ್ಟು, ಬಾಣಲು ಕೌಡೂರು, ಅಂಚೆ ಬೈಲೂರು,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ

 

 

 

 

 

ಆಶೋಕ್ ಹೆಗ್ಡೆ
ಮುಖ್ಯಸ್ಥರು
ಶ್ರೀ ಬ್ರಹ್ಮ ಬೈದರ್ಕಳ ಸ್ಥಾನ, ಬಾಣಲು ಕೌಡೂರು

 

 

 

Photo Gallery