ಅವಳಿ ವೀರರು!
ಇವೆರಡು ಪದಗಳೆ ಸಾಕು ತುಳುನಾಡಿನ ಕಥನವನ್ನು ಜನರ ಮುಂದೆ ಸದ್ಯಾಂತವಾಗಿ ತೆರೆದಿಡಲು.
ಇತಿಹಾಸ
ತುಳುನಾಡಿನ ಚರಿತ್ರೆಯಲ್ಲಿ ನ್ಯಾಯಕ್ಕೆ ಎದೆಯ ಜಾಗ ಅನ್ಯಾಯಕ್ಕೆ ಕತ್ತಿಯ ಜಾಗ (ನ್ಯಾಯೊಗ ತಿಗಲೆದ ಸಾದಿ ಅನ್ಯಾಯೊಗು ಸುರಿಯದ ಸಾದಿ.) ತೋರಿದ ಕೋಟಿ ಚೆನ್ನಯರ ಆರಾಧನೆಯ ಪ್ರವಾಹ ಸುಳ್ಯ ತಾಲೂಕಿನಲ್ಲೂ ಮೇಲೆ ಮೀರಿ ಹರಿಯುತ್ತಿರುವುದು ವರ್ತಮಾನದ ಸತ್ಯ ಮತ್ತು ನಂಬಿಕೆಯ ಸತ್ವ.
ಕೋಟಿ ಚೆನ್ನಯರ ಕಥೆಯ ಪ್ರತಿಯೊಂದು ವಿವರವೂ ಚಿತ್ತಾರವಾಗಿ ನಮ್ಮ ಕಣ್ಣ ಮುಂದೆ ಕುಣಿಯುತ್ತದೆ. ತುಳು ನಾಡಿನ ಮಣ್ಣಿನ ಕಣ ಕಣದ ಕಂಪು ಮೂಗನ್ನರಳಿಸುತ್ತದೆ. ಕೋಟಿ ಚೆನ್ನಯರ ಕಥೆ ಹೇಳುವ ಮೊದಲು ತುಳು ನಾಡಿನ ಆರಾಧನಾ ಸ್ವರೂಪವಾದ ಭೂತರಾಧನೆಯ ಕಥೆ ಕೇಳ ಬೇಕು.