ಉಡುಪಿಯಿಂದ 3 km ಸಾಗಿದರೆ ಉದ್ಯಾವರ, ಉದ್ಯಾವರದಿಂದ 1 km ಸಾಗಿದರೆ ಕಾಣಸಿಗುವುದೇ ಸುಂದರವಾದ ಕಾರಣಿಕದ ಬೊಳ್ಜೆ ಶ್ರೀ ಬಹ್ಮ ಬೈದೆರ್ಕಳ ಗರಡಿ. ಸ್ಥಳ ಪುರಾಣದ ಪ್ರಕಾರ ಸುಮಾರು 400 ರಿಂದ 450 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಕುರ್ಕಾಲುವಿನಿಂದ ಯಾನೆಗುಡ್ಡೆಗೆ, ಯಾನೆಗುಡ್ಡೆಯಿಂದ ಉದ್ಯಾವರದ ಶ್ರೀ ಕ್ಷೇತ್ರ ಬೊಳ್ಜೆದಲ್ಲಿ ಶ್ರೀ ಕೋಟಿ ಚೆನ್ನಯರು ಬಂದು ನೆಲೆಯಾಗಿದ್ದಾರೆ ಎಂದು ಸ್ಥಳಿಯರ ನಂಬಿಕೆ. ಸುಮಾರು 450 ವರ್ಷಗಳ ಹಿಂದೆ ಸ್ಥಳಿಯರು ದನ ಮೇಯಿಸಲು ಹೋಗುವಾಗ (ಈಗ ಗರಡಿ ಇದ್ದ ಪ್ರದೇಶ ಅವಾಗ ಪೊದೆಗಳಿಂದ ಕೂಡಿತ್ತು) ಪೊದೆಗಳ ನಡುವೆ ಒಂದು ನಿದರ್ೇಶನ ಎದರಾಗುತ್ತದೆ. ಇದನ್ನು ಅರಿತ ಜನರು ಕೂಡಲೆ ದೊಡ್ಡಮನೆತನಕ್ಕೆ ವಿಷಯವನ್ನು ತಿಳಿಸಲು, ಅದರಂತೆ ಮನೆತನದವರು ಜೋತಿಷ್ಯರಲ್ಲಿ ಪ್ರಶ್ನೆ ಇಟ್ಟಾಗ ಶ್ರೀ ಕೋಟಿ ಚೆನ್ನಯರು ಇಲ್ಲಿ ನೆಲೆ ನಿಂತಿದ್ದಾರೆ ಅವರಿಗೆ ಗರಡಿ ಕಟ್ಟಬೇಕೆಂದು ಪ್ರಶ್ನೆಯಲ್ಲಿ ತಿಳಿದುಬರುತ್ತದೆ. ಅದರಂತೆ ಶ್ರೀ ಬಹ್ಮ ಬೈದೆರ್ಕಳ ಗರಡಿಯನ್ನು ಕಟ್ಟಿ, ವರ್ಷದಲ್ಲಿ 2 ಸಲ ನೇಮೋತ್ಸವ ನಡೆಯುತಿತ್ತು. ಕಾಲ ಕ್ರಮೇಣ ವರ್ಷಕ್ಕೊಮ್ಮೆ ನೇಮೊತ್ಸವ ನಡೆಯಲಾರಂಬಿಸಿದೆ.
ಶ್ರೀ ಬಹ್ಮ ಬೈದೆರ್ಕಳ ಗರಡಿ ರಾಜ ಮನೆತೆನೆದ ಜೈನರಿಂದ ಸ್ಥಾಪನೆಗೊಂಡು ತದನಂತರ ಶೆಟ್ಟಿ ಮನೆತನಕ್ಕೆ ಬರುತ್ತದೆ. ಕಾಲಕ್ರಮೇಣ ಬ್ರ್ರಾಹ್ಮಣ ಮನೆತನಕ್ಕೆ ಗರಡಿಯ ಆಡಳಿತ ಬಂದು ಇದೀಗ ಈ ಶ್ರೀ ಕ್ಷೇತ್ರದ ಆಡಳಿತವು ಬಿಲ್ಲವ ಮನೆತನಕ್ಕೆ ಬಂದಿರುತ್ತದೆ.
ಸುಮಾರು ಒಂದು ವರ್ಷದ ಇಂದೆ ಬೊಳ್ಜೆ ಗ್ರಾಮದ ಮಹಿಳೆಯ ಚಿನ್ನದ ಸರ ಬಿಸಾಡಿ ಹೊಗಿರಲು ಎಷ್ಟೇ ಹುಡುಕಾಡಿದರು ಸಿಗದಿದ್ದಾಗ ಶ್ರೀ ಕ್ಷೇತ್ರದ ಕೋಟಿ ಚೆನ್ನಯರಿಗೆ ಮೊರೆ ಹೋಗಲು, ಅದರಂತೆ ಆರು ದಿನದ ಒಳಗೆ ಸಮೀಪದ ರೈಲು ಪಟ್ಟಿಯಲ್ಲಿ ಚಿನ್ನದ ಸರ ಸಿಕ್ಕಿರುತ್ತದೆ. ಹೀಗೆ ಇನ್ನೂ ಅನೇಕ ಕಾರಣಿಕಗಳು ಶ್ರೀ ಕ್ಷೇತ್ರದಲ್ಲಿ ನಡೆದ ಪುರಾವೆಗಳು ಇವೆ.
ಶ್ರೀ ಕಾರಣಿಕ ಬಹ್ಮ ಬೈದೆರ್ಕಳ ಗರಡಿಯಲ್ಲಿ ಹೂವಿನ ಪೂಜೆ, ಸೋಣದ ಆರತಿ, ಅಗೆಲು ಸೇವೆ, ವಾರ್ಷಿಕ ನೇಮೋತ್ಸವ ಹಾಗೂ ಹರೆಕೆ ನೇಮವೂ ನಡೆಯುತ್ತದೆ.
ವಾಯು ದೇವರು, ನಾಗ ಬ್ರಹ್ಮ, ಗುರು ಕಂಬ, ವ್ಯಾಘ್ರ ಚಾಮುಂಡಿ, ಮಾಣಿಬಾಲೆ, ದೂಮಾವತಿ, ಜೋಗಿಪುರುಷ, ಚಿಕ್ಕಮ, ಹಾಗೂ ಅನೇಕ ಪರಿವಾರ ದೈವಗಳು ಕೂಡ ಶ್ರೀ ಕ್ಷೇತ್ರ ಬ್ರಹ್ಮ ಬೈದೆರ್ಕಳ ಗರೋಡಿಯಲ್ಲಿ ಇದೆ.
ಹೀಗೆ ಉದ್ಯೊಗ, ವ್ಯವಹಾರ, ಮದುವೆಯ ಭಾಗ್ಯ ಕೂಡಿ ಬರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ, ಕಾಣುತ್ತಿದ್ದಾರೆ.
ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿ ಯ ವಿಳಾಸ
ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿ ಬೊಳ್ಜೆ
ಅಂಚೆ ಉದ್ಯಾವರ
ಉಡುಪಿ ತಾಲೂಕು
ಉಡುಪಿ ಜಿಲ್ಲೆ – 574118
ಪೋನ್ – 9901954629
(ಶ್ರೀ ಕ್ಷೇತ್ರದ ಒಳಗಡೆ ವೀಡಿಯೊ ಮತ್ತು ಪೊಟೋ ಚಿತ್ರೀಕರಣಕ್ಕೆ ಅವಕಾಶ ಇಲ್ಲದ ಕಾರಣ ಪೊಟೋ ಗ್ಯಾಲರಿಯನ್ನು ರಚಿಸಲಾಗಿಲ್ಲ.)
**************************************************************************************************************************************************************
[ವಿ. ಸೂ. ಭಕ್ತಾಭಿಮಾನಿಗಳಿಂದ ಕಾರಣಿಕ ಕ್ಷೇತ್ರವಾದ ಶ್ರೀ ಬಹ್ಮ ಬೈದೆರ್ಕಳ ಗರಡಿಗೆ ತನು-ಮನ-ಧನಗಳ ಸಹಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.
ಚೆಕ್ ಅಥವಾ ಡಿ.ಡಿ. ಮೂಲಕ ಧನ ಸಹಾಯ ಮಾಡಲಿಚ್ಛಿಸುವವರು ಸಿಂಡಿಕೇಟ್ ಬ್ಯಾಕ್, ಉದ್ಯಾವಾರ ಶಾಖೆ S.B. A/c NO. 01602200001699 ಕ್ಕೆ ಕಳುಹಿಸಬೇಕಾಗಿ ವಿನಂತಿ.]