ಹನ್ನೆರಡನೆಯ ಶತಮಾನ ಹೊಯ್ಸಳರ ಆಧಿರಾಜರಕಾಲದಲ್ಲಿ ಆಳೂಪರಿಯಿಂದ ಬಂಗಾಡಿಯಲ್ಲಿ ಮಂಗಳೈರು ಸಂಸ್ಥಾನ ಸ್ಥಾಪನೆಯಾಗಿ ಬಂಗರು ಸಂಸ್ಥಾನಾಧಿಪತಿಗಳಾದರು. ಇದೇರೀತಿಉತ್ತರ ತುಳು ರಾಜ್ಯಕ್ಕೆಚೌದರು ಸಂಸ್ಥಾನಾಧಿಪತಿಗಳಾದರು. ಬಂಗರಿಗೆ 72 ಮಾಗಣೆಗಳು ಚೌದರಿಗೆ 74 ಮಾಗಣೆಗಳು ದೊರೆತವು. ಅಡೂರು, ಕಂಬಳ, ಮಜೇಶ್ವರ ಮಾಗಣೆಗಳ ಸೀಮೆಯರ ಸಾರಾಗಿಕುಂಬ್ಲೆಯರಸರು ಆಳೂಪರ ನೇರ ಆಡಳಿತಕ್ಕೆ ಬಂದಂತೆಕಂಡು ಬರುತ್ತದೆ. ಮುಂದೆ 14ನೇ ಶತಮಾನದಲ್ಲಿ ಪಂಜ ಮಾಗಣೆಜೈನರಸರ ವಂಶ ನಾಶವಾದಾಗಕುಂಬ್ಲೆಯರಸರ ಕೇಳಿಕೆತಂತೆ ಕುಬ್ಲೆರಾಜಕುಮಾರ ಪಂಜಮಾಗಣೆಯರಸನಾದನು. ಈತನು ಬಂಗರಕೃಪಕಟಾಕ್ಷಕ್ಕೆ ಒಳಗಾಗಿ ಬೆರ್ಳಳ್ಕರೆ, ಪಂಜ, ಏನೆಕಲ್ಲು ಮತ್ತು ಸುಬ್ರಹ್ಮಣ್ಯ ಮಾಗಣೆಗಳ ಅರಸರ ಮೋರಾಧಿಕಾರಿಯಾಗಿ ಸೀಮೆಯರಸರಾದರು. ಇದೇರೀತಿ ಸುಳ್ಯದ ಜ್ಯೆನರಸಅಮರ ಮತ್ತು ಸುಳ್ಯದ ಸೀಮೆಯರಸರ ಕಡಬ, ಮಾಧರ್ಾಳ, ನೇರೇಂಕಿ ಮಾಗಣೆಗಳನ್ನು ಕಡಬ ಸೀಮೆಯೆಂದು ಹೆಸರಿಸಿ ನೇರೇಂಕಿಜೈನರಸನನ್ನು ಸೀಮೆಯರಸನನ್ನಾಗಿ ಮಾಡಿದರು. ಈ ಮೂರು ಸೀಮೆಗಳ ಕೇಂದ್ರ ಪಂಜ ಪಂಚಲಿಗೇಶ್ವರ ಸ್ವಾಮಿಯದೇಗುಲವಿದ್ದು ಈ ಮೂರು ಸೀಮೆಗಳ ಆರಾಧ್ಯದೇವರಾಗಿ ಒಳಪಟ್ಟರು. ಈ ವೇಳೆ ಪಂಜದಅರಸು ಬಲ್ಲಾಳರು ಸೀಮೆ ವಿಸ್ತಾರದಲ್ಲಿ ಪ್ರಾರಂಭಸಿ ನೇರೇಂಕಿ ಮಾಗಣೆಯಎಡ ಮಂಗಲ, ಕಡಬ ಮಾಗಣೆಯಏನಡ್ಕ, ಮಾಧರ್ಾಳ ಮಾಗಣೆಯ ಸುಳ್ಯ ಜೈನರಸರಅಮರ ಸೇರಿದಂತೆ ಸುಳ್ಯದ ಅನೇಕ ಪ್ರದೇಶ ಪಂಜ ಬಲ್ಲಾಳರ ಕೈವಶವಾಯಿತು. ಮುಂದೆ ಪಂಜ ಬಲ್ಲಾಳರು ತನ್ನ ಸೀಮೆಯ ಬೆಳ್ಕೆರೆ, ಏನೆಕಲ್ಲು ಮತ್ತು ಸುಬ್ರಹ್ಮಣ್ಯಅರಸರ ಮೇಲೆ ಶಿಸ್ತಿನ ಆಡಳಿತ ಮಾಗಣೆಯರಸರಿಗೆಅರಯಾದ ಕಿರುಕುಳವಾಗಿ ಪರಿಣಮಿಸಿತು.
ಬೆಳ್ಳರೆ ಬಲ್ಲಾಳರು ವಿಶಾಲ ಮಾಗನೆಯರಸರು ಬಂಗರಸರಕುಟುಂಬದ ವೈವಾಹಿಕ ಸಂಬಂಧ ಬೆಳೆಸಿಕೊಂಡಿದ್ದರೆಂದು ಹೇಳಲಾಗುತ್ತಿತ್ತು. ಅಂತು ಬಂಗರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇದರಿಂದ ಪಂಜದ ಬಲ್ಲಾಳರ ಸೀಮೆ ವಿಸ್ತಾರದ ಬಗೆಗೆ ನಿಜ ಸತ್ಯವನ್ನುಅರುಹಿ ಎಚ್ಚರಿಸಿದರು. ಬಂಗರುಗೂಢಾಚಾರರ ಮೂಲಕ ಪಂಜದ ಬಲ್ಲಾಳರ ಸೀಮೆ ವಿಸ್ತಾರಕ್ಕೆ ಭಯ ಪಟ್ಟವರು, ತನ್ನ ಸಂಸ್ಥಾನಾದಿಕಾರದ ಬಲದಿಂದ ಪಂಜ ಬಲ್ಲಾಳರ ಸೀಮೆಯಧಿಕಾರದ ಗದ್ದುಗೆಯಿಂದ ಇಳಿಸಿದರು. ಇದು ಆಡಳಿತದ ರಿಪೇರಿಎಂದುಕಡಬ ಮತ್ತು ಸುಳ್ಯದ ಸೀಮೆಯರಸರ ಸೀಮೆ ಪದವಿಯನ್ನುಕಿತ್ತು ಹಾಕಿದರುಇದರಿಂದ ಬಾರಕೂರು ಸೀಮಾ ಪ್ರದೇಶದ ಪಂಜ, ಕಡಬ ಮತ್ತು ಸುಳ್ಯ ಸೀಮೆಯರಸರು ಕೂಡ ಉಳಿದ 8 ಬಲ್ಲಾಳರು ಬೀಡಿನಅರಸರು ಬಂಗರ ನೇರಾಡಳಿತಕ್ಕೆ ಒಳಪಟ್ಟರು ಬೀಡು 2 ನೇ ಸಂದರ್ಭದಲ್ಲಿ ಮಾಗಣೆಯರಸರಿಗೆ ಬಂದ ಹೊಸ ಪದವಿಯಾಗಿರಬಹುದಾಗಿತಕರ್ಿಸಲಾಗುತ್ತದೆ. ಬೆಳ್ಳರೆ ಮಾಗಣೆಯಜೈನ ಬಲ್ಲಾಳ ತನ್ನ ಮಾಗಣೆಯ ಹತ್ತುಕಡೆತನ್ನಕುಟುಂಬದ ಆಸಕ್ತ ರಾಜಆಶ್ರಯಕ್ಕಾಗಿ ಹೊಸ ಬೀಡುಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಪಂಜಕ್ಕೆತಾಗಿಕೊಂಡಿದ್ದ ಪಿಜಾವು, ಮತ್ತುಉದೇರಿ ಗ್ರಾಮಗಳನ್ನು ನೋಡಿಕೊಳ್ಳುವುದಕ್ಕಾಗಿ ಪಿಜಾವನ್ನುಕೇಂದ್ರವಾಗಿ ಮಾಡಿಕೊಂಡು ಪಿಜಾವುಉಪಬೀಡಿಗೆಯುವರಾಜನನ್ನೇಅಧಿಕಾರಿಯನ್ನೇ ಮಾಡಿದನು. ಈತನು ಪಿಜಾವು ಬೀಡಿನ ಬಲ್ಲಾಳನೆಂದೇ ಪ್ರಖ್ಯಾತನಾಗಿದ್ದನು. ಈ ವೇಳೆ ಪಂಜ ಬಲ್ಲಾಳನ ಬಲ ಕಡಿಮೆ ಮಾಡುವುದಕ್ಕಾಗಿ ಪಂಜ ಮಾಗಣೆಯ ಆ ಕಾಲದ ಗ್ರಾಮಗಳಿಗೆ ಮತ್ತುಉದೇರಿ ಗ್ರಾಮಗಳಿಗೆ ಸೇರಿಸಿ ಹೊಸ ಬೀಡು ನಿಮರ್ಾಣಮಾಡಲಾಯಿತು. ಅದುಎಲ್ಲಿ.? ಎಣ್ಮೂರಿನಲ್ಲಿ. ಇಲ್ಲಿಗೆಅರಸನಾಗಿದ್ದು ಬೀಡಿನಯುವರಾಜಕುಮಾರ.
ಎಣ್ಮೂರಿನಲ್ಲಿ ಬೀಡಿನಅರಮನೆ ನಿಮರ್ಾಣ ಸಮಯದಲ್ಲಿಯೇ ಬೇಳ್ಕರೆ ಯುವರಾಜನಿಗೆಎಂಟು ಗ್ರಾಮಗಳ ಪಟ್ಟವಾಯಿತು. ಎಣ್ಮೂರಿನಲ್ಲಿಅರಮನೆ ಸಿದ್ದವಾದ ಮೇಲೆ ಬೀಡಿನಅರಸರುಎಣ್ಮೂರಿಗೆ ಬಂದು ನೆಲೆಸಿದರು. ಆದರೆರಾಜಕುಟುಂದದೈವದೇವರಆರಧನೆಗೆ ಬಲ್ಲಾಳರು ಪಿಜಾವಿಗೆ ಬರುತ್ತಿದ್ದರು. ಬಲ್ಲಾರ ಹಿರಿಯರರು, ರಾಜಕುಮಾರರು, ಯುವರಾಜರುಅರಮನೆಯಲ್ಲಿಯೇ ಉಳಿಯುವ ಸಂಪ್ರದಾಯವಿತ್ತು.ಹೊಸತು ಹಬ್ಬಗಳಿಗೆ ಪಿಜಾವಿ ಮೂಲವಾಯಿತು. ಕ್ರಿ. ಶ ಸುಮಾರು 1585ನೇ ದಶಂಬರ ತಿಂಗಳ 23 ರ ನಂತರ ನಡೆದಯುದ್ದದಲ್ಲಿಏಣ್ಮೂರಿಆಮಾತ್ಯ/ ಯುವರಾಜ/ ದಂಡನಾಯಕ/ ಎಲ್ಲವೂಆಗಿದ್ದಏಣ್ಮೂರಿನದೇವ ಬಲ್ಲಾಳರ ಅಳಿಯ ಮಂಜು ಪೆರ್ಗಡೆ ವೀರ ಸ್ವರ್ಗ ಪಡೆದುಅಮರನಾದ ಮೇಲೆ ಪ್ರತಾಪಿಗಳಾದ ಕೋಟಿಚೆನ್ನಯರುಯುದ್ದ ಮುಂದುವರೆಸಿ ದೇವ ಬಲ್ಲಾಳರಿಗೆ ವಿಜಯ ಮಾಲೆ ಧರಿಸಿ ಅಮರರಾದರು. ಮುಂದೆ ಮಂಜು ಪೇರ್ಗಡೆಯಅನುಜರುಕ್ಮ ಬಲ್ಲಾಳ ಯುವರಾಜನಾಗಿ ಉಳಿದನು. ದೇವ ಬಲ್ಲಾಳರ ಬೀಡಿನ ಪಕ್ಕದಲ್ಲಿಯೇಅರಮನೆ ಕಟ್ಟಿಸಿಕೊಂಡು ಕ್ರಿ. ಶ ಸುಮಾರು 1590 ರಿಂದ 1764 ರತನಕ ಆಳಿದರೆಂದು ಜಾನಪದೀಯಇತಿಹಾಸದಕಥೆಯಾಗಿದೆ.
ಕ್ರಿ. ಶ 1764 ಮೈಸೂರು ಸುಲ್ತಾನ ಹೈದರಾಲಿ ತುಳುನಾಡಿನ ಸುಲ್ತಾನನಾದಾಗಎಣ್ಮೂರು ಬೀಡಿನಅಧಿಕಾರ ಕೊನೆ ಹೊಂದಿದೆಎಂದುಜಾನಪದೀಯ ಘಟಕಗಳಿಂದಲೂ ತಿಳಿಯಬಹುದು.
ರುಕ್ಮ ಬಲ್ಲಾಳನ ಯುವರಾಜನ ಬೀಡುಕದ್ಮಬಂಚರಿಗೆದೊರೆತ ಮೇಲೆ ಪ್ರಕಾಶಕ್ಕೆ
ಬಂದಿದೆ.
ಎಣ್ಮೂರು ಆದಿ ಬೀಡು ಪಿಜಾವು ಮಾತ್ರ ಪರಿಚಯಯವಿಲ್ಲದೆ ಹಿಂದೆ ಬಿಟ್ಟಿದೆ. ಎಣ್ಮೂರಿನಕೊನೆಯಯುವರಾಜ/ ಆಮಾತ್ಯ /ದಂಡನಾಯಕಎಣ್ಮೂರುಯುದ್ದದ ಪ್ರಾರಂಬದಲ್ಲಿಅಮರನಾಗಿಎಣ್ಮೂರು ಬೀಡಿನ ಸಿರಿಯು ಚಿಪುಟಿ ಹಾಕಿದಂತೆಆಗಿದೆ. ಮಂಜುಪೇರ್ಗಡೆ ಬಂಟರಕುಲದ ಸೌಭಾಗ್ಯತೀಯ ಕೈ ಹಿಡಿದು ಸಂತಾನ ಪ್ರಾಪ್ತಿ ಪಡೆದಿದ್ದರು ಈ ಅಪ್ರಾಯಸ್ತ ಮಕ್ಕಳನ್ನು ಕೇಳುವವರಿಲ್ಲದೆ ಪಿಜಾವಿನ ಗಂಜಿಊಟಕ್ಕೆ ಸಾಕಾಗುವಷ್ಟು ಭೂಮಿಯನ್ನು ಪಡೆದರು. ಅದು ಅಂದಿನ ಚಿಕ್ಕಗ್ರಾಮದ 1/8 ನೇ ಸರದೂಗದು. ಎಣ್ಮೂರು ಬೀಡುಗಳಿಗೆ ಎಂದು ಗ್ರಾಮಗಳ ಸಿಂಹ ಪಾಲು ದೊರಕಿತು. ಆದರೆ ಈ ಮೂರು ಬೀಡಿನ ವಂಶಜರು ಈಗಲೂ ಇದ್ದಾರೆ. ದೇವ ಬಲ್ಲಾಳ ಜೈನವಂಶ ನಾಶವಾದರೂದೇವ ಬಲ್ಲಾಳರ ಬಂಟ ವಂಶಕ್ಕೆ ಸೇರಿದ ಪಿಜಾವುಜಗನ್ನಾಥಕೈಯವರು ಮತ್ತುಕುಟುಂಬದವರು ಪಿಜಾವಿನಲ್ಲಿಇದ್ದಾರೆ.
ಎಣ್ಮೂರುಕಟ್ಟದ ಬೀಡಿನಲ್ಲಿರಾಮ ಕೃಷ್ಣ ರೈ ಮತ್ತುಕುಟುಂಬದವರಿದ್ದು, ಈಗಿನ ಐವತೊಕ್ಲುಗ್ರಾಮದಲ್ಲಿರುವಎಣ್ಮೂರು ಬೀಡಿನಲ್ಲಿ ಮಮ್ಮೂಲಿ/ ಮಮೆದಅಬ್ದುಲ್ ಶ್ರಹಿಮಾನ್ ಬೀಡಿನ ಈಗಿನ ಮನೆಯಲ್ಲಿದ್ದವರುಅನೇಕರು ಬೇರೆ ಬೇರೆಕಡೆಇದ್ದಾರೆ.
ಕೋಟಿಚೆನ್ನಯರಜಾನಪದೀಯಇತಿಹಾಸಕ್ಕೆಎಣ್ಮೂರು ಬೀಡಿಗೆ ಸೇರಿದಇತರ ಬೀಡುಗಳು ಪೂರಕವಾಗಿರುವುದರಿಂದ ಬೀಡುಗಳ ಇತಿಹಾಸ ತಿಳಿಯಬೇಕಾದ್ದು ಅತೀ ಮುಖ್ಯವೆಂಬುದರಲ್ಲಿ ಸಂಶಯವೇಇಲ್ಲ.
ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ವಿಳಾಸ
ಎಣ್ಮೂರುಗ್ರಾಮ
ಎಣ್ಮೂರು ಅಂಚೆ
ಸುಳ್ಯ ತಾಲೂಕು
ಕನರ್ಾಟಕ.
ಕಟ್ಟಬೀಡುರಾಮಕೃಷ್ಣ ಶೆಟ್ಟಿ
ಅನುವಂಶಿಕ ಆಡಳಿತದಾರರು
Photo Gallery