ಸ್ಥಳ ಇತಿಹಾಸದ ಪ್ರಕಾರ ಕುದಿಗ್ರಾಮ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರ್ಕಳ ಗರಡಿ ಸುಮಾರು 200 ವರ್ಷಗಳ ಇತಿಹಾಸ ಇರಬಹುದೆಂದು ಸ್ಥಳೀಯರ ಅಭಿಪ್ರಾಯ. ಈ ಕ್ಷೇತ್ರದಲ್ಲಿ ಹಿಂದೆ ಗರಡಿಯ ಅವಶೇಷಗಳು ಮಾತ್ರ ಇದ್ದು ಯಾವುದೇ ಪೂಜೆ, ನೇಮಗಳು ನಡೆಯುತಿರಲಿಲ್ಲ. ಸುಮಾರು ನೂರು ವರ್ಷಗಳ ಹಿಂದೆ ಶ್ರೀ ಬ್ರಹ್ಮಬೈದೆರ್ಕಳ ಗರಡಿಯನ್ನು ಸ್ಥಪಿಸಲಾಯುತು. ಆ ದಿನಗಳಿಂದ ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಪೂಜೆ, ನೇಮಗಳು ವಿಜ್ರಂಭಣೆಯಿಂದ ನಡೆದುಕೊಂಡು ಬಂದಿದೆ. ಹಿಂದೆ ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಬಂಡಾರ ವವರ್ಾಡಿಯ ದೊಡ್ಡಮನೆಯಲ್ಲಿ ಇತ್ತು. ಪ್ರತೀ ವರ್ಷವೂ ಇಲ್ಲಿ ಶ್ರೀ ಕೊಡಮಣಿತ್ತಾಯ ಕಂಬಳ ನಡೆಯಿತ್ತದೆ.
ಪ್ರತೀ ಎರಡು ವರ್ಷಕ್ಕೊಮ್ಮೆ ರಾಮನವಮಿಯಂದು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಕಾಲಾವಧಿ ನೇಮ ನಡೆಯುತ್ತದೆ, ಅದೇ ರೀತಿ ಎರಡು ವರ್ಷಕ್ಕೊಮ್ಮೆ ಬೂಡುಮನೆಯವರು ನೇಮ ನಡೆಸುತ್ತಾರೆ ಹಾಗೂ ಹರಕೆಯ ನೇಮವೂ ಇಲ್ಲಿ ನಡೆಯುತ್ತದೆ.
ಹರಕೆಯ ರೂಪದಲ್ಲಿ ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಪಂಚಕಜ್ಜಾಯ, ಹಗಲು ಸೇವೆ, ನೈವೇದ್ಯ ದೇವರಿಗೆ ಅಪರ್ಿಸಲಾಗುತ್ತದೆ. ಪ್ರತೀ ಮಂಗಳವಾರ ಹಾಗೂ ತಿಂಗಳ ಸಂಕ್ರಮಣದಂದು ಪೂಜೆ ನಡೆಯುತ್ತದೆ.
ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ವಿಳಾಸ
ಕುದಿಗ್ರಾಮ ಶ್ರೀ ಕೊಡಮಣಿತ್ತಾಯ
ಶ್ರೀ ಬ್ರಹ್ಮಬೈದೆರ್ಕಳ ಗರಡಿ
ಕುದಿ-82 , ಹಿರಿಯಡಕ – 576113
ಉಡುಪಿ ತಾಲೂಕು ಮತ್ತು ಜಿಲ್ಲೆ
ಬಿ. ರಾಮದಾಸ್ ಹೆಗ್ಡೆ
ಆಡಳಿತ ಮುಖ್ಯಸ್ಥರು
ದೂರವಾಣಿ: 0820-2549325
ಮೊಬೈಲ್: +919845313655
Photo Gallery