ಇತಿಹಾಸ ಪುಟಗಳತ್ತ ನೋಡಿದರೆ, ಸುಮಾರು 400ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಈ ಸಂದರ್ಭ ಮಾರನಾಡು ಎಂದಿದ್ದ ಗ್ರಾಮವೇ ಕಾಲಕ್ರಮೇಣ ಮಾನರ್ಾಡು ಎಂಬುದಾಗಿ ಬದಲಾವಣೆಯಾಯಿತು ಎನ್ನುತ್ತಾರೆ ಊರವರು. ಈ ಗ್ರಾಮದಲ್ಲಿ ಇದ್ದ ಉಂಞ ಕೊಟ್ಟಾರಿಯವರ ಮನೆ ದೈವವಾಗಿದ್ದ ಕೊಡಮಣಿತ್ತಾಯ ದೈವ ಊರ ಕಷ್ಟ ಕಾರ್ಪಣ್ಯ ನಿವಾರಣೆಗೋಸ್ಕರ ಊರವರಿಂದ ಪೂಜಿಸಲ್ಪಟ್ಟು ಗ್ರಾಮ ದೈವವಾಗಿ ಆರಾಧನೆಗೊಳಪಟ್ಟಿತು ಎನ್ನುವುದು ಪ್ರತೀತಿ. ಈ ಸಂದರ್ಭದಲ್ಲಿ ವಿಂಗಡಣೆಗೊಂಡ ಮುಡೋಡಿ, ಪಡೋಡಿ,ಬಡಕೋಡಿ ಕರೆಗಳು ಗುತ್ತು ಬಕರ್ೆಗಳಾಗಿ ಅಸ್ತಿತ್ವ ಪಡೆದು ಕೊಂಡಿತು. ನಂತರ ಕೊಟ್ಟಾರಿಯನ್ನು ಮುಂದಿಟ್ಟುಕೊಂಡು ಹೊಪಾಲಬೆಟ್ಟದಲ್ಲಿ ದೈವಸಾನಿಧ್ಯ ಸ್ಥಾಪಿಸಿ ಪೂಜಿಸಲಾಯಿತು ಎಂಬುದಾಗಿ ಹಿರಿಯರ ಅಂಬೋಣ. ಕೊಟ್ಟಾರಿ ಮನೆತನಕ್ಕೆ ಇಂದಿಗೂ ಉತ್ಸವ ಮತ್ತು ವಿಶೇಷ ದಿನಗಳಲ್ಲಿ ಗೌರವ ಸಲ್ಲುತ್ತದೆ.
ನಂತರದ ಕಾಲದಲ್ಲಿ ವೀರ ಪುರುಷರಾದ ಬ್ರಹ್ಮ ಶ್ರೀ ಕೋಟಿ ಚೆನ್ನಯರು ಊರ ಸಂಚಾರದ ಸಂದರ್ಭ ಬೈದರ್ಲೆ ಗುಡ್ಡೆಯಲ್ಲಿ ವಿರಮಿಸಿ ಹೊಪಾಲಬೆಟ್ಟಕ್ಕೆ ನೇರ ದೃಷ್ಟಿಯಿಟ್ಟರು. ಆ ಭಾಗದಲ್ಲಿ ಬ್ರಹ್ಮ ಶ್ರೀ ಬೈದರ್ಕಳ ಸಾನಿಧ್ಯವನ್ನು ಸೃಷ್ಟಿಸಲಾಯಿತು. ಎನ್ನುವುದು ಪೌರನಿಕ ಇತಿಹಾಸ.
ಉಂಞ ಕೊಟ್ಟಾರಿಯವರ ಮರಣಾ ನಂತರ ಸಾಂತು ಕೊಟ್ಟಾರಿಯವರು ಜಾತ್ರೋತ್ಸವನ್ನು ನಡೆಸುತ್ತಾ ಬಂದರು ನಂತರದ ದಿನಗಳಲ್ಲಿ ಶ್ರೀ ದೈವಗಳ ಸ್ಥಾನ ಗರಡಿಗಳನ್ನು ನಿಮರ್ಿಸಲಾಗಿ ಜೀಣೋದ್ಧಾರ ನಡೆಸಲಾಯಿತು.
1936ರಲ್ಲಿ ಬ್ರಹ್ಮ ಕಲಶ ನಡೆದ ಬಗ್ಗೆಯೂ ದಾಖಲೆಗಳಲ್ಲಿ ಉಲ್ಲೇಖವಿದೆ ಎಂದು ಎನ್ನುತ್ತಾರೆ ಊರವರು.
ಇದೀಗ ಅನುವಂಶೀಯ ಮೊಕ್ತೇಸರಾಗಿ ಎಂ. ಯುವರಾಜ ಬಲ್ಲಾಳ್ರವರು ಪೂರ್ವಕಟ್ಟಳೆಯಂತೆ ದೈವಗಳ ಉತ್ಸವಾದಿ ಕಾರ್ಯಗಳನ್ನು ನಡೆಸಿಕೊಂಡು ಬರಿತ್ತಿದ್ದಾರೆ.
ಅಭಿವೃದ್ಧಿ :
ಹೊಪಾಲಬೆಟ್ಟ ಕ್ಷೇತ್ರ ಮತ್ತೆ ಜೀಣೋದ್ಧಾರಗೊಂಡಿದೆ ಶ್ರೀ ಧರ್ಮರಸು, ಕುಂಭಕಂಠಿಣಿ ಮತ್ತು ಬ್ರಹ್ಮಬೈದರ್ಕಳ ದೈವಗಳ ಸಾನಿದ್ಯ ಕಟ್ಟಡ ನೂತನ ಶೈಲಿಯಲ್ಲಿ ನಿಮರ್ಾಣಗೊಂಡಿದೆ. ಕುವೈಟ್ ಉದ್ಯಮಿ ಮಾನರ್ಾಡು ಗುಮಡ ಬೆಟ್ಟು ರಾಘು ಸಿ ಪೂಜಾರಿಯವರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಸಂಪೂರ್ಣ ವೆಚ್ಚವನ್ನು ಭರಿಸುವುದಲ್ಲದೆ ಹೆಚ್ಚುವರಿಯಾಗಿ 50 ಸಾವಿರ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾರೆ
ಶ್ರೀ ಬ್ರಹ್ಮ ಬೈದೆರ್ಕಳ ಸ್ಥಾನದ ವಿಳಾಸ
ಮಾರ್ನಾಡು ಶ್ರೀ ಕ್ಷೇತ್ರ ಹೊಪಾಲಬೆಟ್ಟ
ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯಿ,
ಶ್ರೀ ಬಹ್ಮ ಬೈದೆರ್ಕಳ ಕ್ಷೇತ್ರ
ಮಾನರ್ಾಡು ಅಂಚೆ, ಪಡುಮಾನರ್ಾಡು
ವಯಾ ಮೂಡುಬಿದಿರೆ,
ಮಂಗಳೂರು ತಾಲೂಕು ದ.ಕ 574213
ಆಡಳಿತ ಮುಖ್ಯಸ್ಥರು
ಶ್ರೀ ಬಹ್ಮ ಬೈದೆರ್ಕಳ ಗರಡಿ, ಹೊಪಾಲಬೆಟ್ಟ, ಮಾರ್ನಾಡು