ಮುಖ್ಯಸ್ಥರು |
ಗರೋಡಿ ಅರ್ಚಕರು |
ಸುತ್ತಾ ಮುತ್ತಲೂ ಹಸಿರು ಮರ ಗಿಡಗಳಿಂದ ಕಂಗೊಳಿಸುತ್ತಾ ಭಕ್ತ ಜನರನ್ನು ಕೈ ಬೀಸಿ ಕರೆಯುವ ಕಾರಣೀಕ ಕ್ಷೇತ್ರವಾದ ಶ್ರೀ ಬ್ರಹ್ಮ ಬೈದೆರ್ಕಳ ದೊಂಡೇರಂಗಡಿ ಗರೋಡಿ, ಶ್ರೀ ಕ್ಷೇತ್ರದ ವೈಶಿಷ್ಟ ಮತ್ತು ಪಾವಿತ್ರತೆಯನ್ನು ಹೆಚ್ಚಿಸಿದೆ. ಶ್ರೀ ಕ್ಷೇತ್ರಕ್ಕೆ ಏಳುವರೆ (71/2) ಗ್ರಾಮ ವಿದ್ದು, ಧನು ತಿಂಗಳಲ್ಲಿ ವಾರ್ಷಿಕ ನೇಮೋತ್ಸವವು ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಕ್ಷೇತ್ರದಿಂದ ಭಂಡಾರ ಇಳಿದು, ಇದಕ್ಕೆ ಸಂಬಂಧ ಪಟ್ಟ ಶೀರೂರು ಗ್ರಾಮದಲ್ಲಿ ನೇಮೋತ್ಸವವು ನಡೆಯುತ್ತದೆ.
ಸುಮಾರು ವರ್ಷಗಳ ಹಿಂದೆ ಭೂಮಿ ವ್ಯವಹಾರದ ಸಂದರ್ಭದಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಹರಕೆ ಹೇಳಿ ಅದನ್ನು ತೀರಿಸದೆ ಇದ್ದಾಗ, ಅವರಿಗೆ ನಾನಾ ರೀತಿಯ ತೊಂದರೆಗಳನ್ನು ಕಂಡು ಬಂದಾಗ, ಶ್ರೀ ಕ್ಷೇತ್ರದ ನೇಮೋತ್ಸವ ನಡೆಯುವ ಸಂದರ್ಭದಲ್ಲಿ ಕೋಟಿ ಚೆನ್ನಯರನ್ನು ಮೊರೆ ಹೋಗಲು, ಹರಕೆಯನ್ನು ತೀರಿಸಿ ಎಂಬ ನುಡಿ ಬರಲು, ಅದರಂತೆ ಹರಕೆಯನ್ನು ತೀರಿಸಿದ ನಂತರ ಒಳಿತನ್ನು ಕಂಡಿದ್ದಾರೆ.
ಹೀಗೆ ಬೇಯಿಸಿದ ಬತ್ತ ಮೋಳಕೆ ಬರುವುದು, ಬಾವಿಯಲ್ಲಿ ಹುಳ ಅಗುವುದು ಇತ್ಯಾದಿ ಅನೇಕ ಅನೇಕ ನಿದರ್ದೆಶನಗಳು ಶ್ರೀ ಕ್ಷೇತ್ರ ಬಹ್ಮ ಬೈದೆರ್ಕಳ ಗರಡಿ ದೊಂಡೇರಂಗಡಿ ಯಲ್ಲಿ ನಡೆದಿದೆ ಎಂದು ಸ್ಥಳಿಯರು ಹೇಳುತ್ತಾರೆ.
ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗೆ ಸಂಬಂಧ ಪಟ್ಟ ಎರಡು ಕಂಬಳ ಗದ್ದೆ (ಒಂದು ಕೋಟಿ ಚೆನ್ನಯರ ಕಂಬಳ ಗದ್ದೆ ಇನ್ನೊಂದು ಕೊಡಮಣಿತ್ತಾಯ ಕಂಬಳ ಗದ್ದೆ) ಇದ್ದು, ಶ್ರೀ ಕ್ಷೇತ್ರದ ನೇಮೋತ್ಸದ ದಿನದಂದು ಈ ಎರಡು ಕಂಬಳಗಳ ಗದ್ದೆಗೆ ಕೋಣಗಳನ್ನು ಕಟ್ಟಿ ಓಡಿಸುವ ಪದ್ದತಿ ಇದೆ.
ಕ್ಷೇತ್ರದಲ್ಲಿ ವಿಶೇಷ ದಿನಗಳಲ್ಲಿ ಮತ್ತು ಪ್ರತೀ ಮಂಗಳವಾರ ಹಾಗೂ ಸಂಕ್ರಮಣದಂದು ಸ್ವಾಮಿಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಶ್ರೀ ಕ್ಷೇತ್ರದಲ್ಲಿ ನಾಗ ಬ್ರಹ್ಮ, ಕೋಟಿ ಚೆನ್ನಯರು ಅಲ್ಲದೆ ಪರಿವಾರ ದೈವಗಳು ಕೂಡ ಇವೆ.
ಉದ್ಯೊಗ, ವ್ಯವಹಾರ, ಮದುವೆಯ ಭಾಗ್ಯ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ
ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿಯ ವಿಳಾಸ
ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿ,
ಕುಕ್ಕುಜೆ ಅಂಚೆ ದೊಂಡೇರಂಗಡಿ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ -574108
ವಿಜ್ಞಾಪನೆ
ಶ್ರೀ ಕ್ಷೇತ್ರಕ್ಕೆ ಕಾಣಿಕೆ ಸಲ್ಲಿಸುವವರು ವಿಜಯಾ ಬ್ಯಾಂಕ್ ದೊಂಡೇರಂಗಡಿ ಶಾಖೆ S.B. A/c No. 3645ಕ್ಕೆ ಅಥವಾ M.O. ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೇಳಿಕೊಳ್ಳುತೇವೆ.
ಅಧ್ಯಕ್ಷರು ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿ, ಕುಕ್ಕುಜೆ ಅಂಚೆ: ಕುಕ್ಕುಜೆ – 574108 ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
Photo Gallery