ನಾವು ಅನೇಕ ಪುಣ್ಯ ಕ್ಷೇತ್ರಗಳನ್ನು ನೋಡಿದ್ದೇವೆ ಆದರೆ ಇಲ್ಲಿ ಒಂದು ಮಹಿಮೆಯ ಕ್ಷೇತ್ರ ಇದೆ. ಅದೇ ಮೂಲೆ ಮಜಲಿನ ದೋಳ ಗರಡಿ, ಪಂಜ ಸೀಮೆಯ ಒಂದು ಅತೀ ಚಿಕ್ಕ ಪ್ರದೇಶ. ಪೂರ್ವದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಇನ್ನೊಂದು ದಿಕ್ಕಿನಲ್ಲಿ ಕಾಂಚೋಡು ಶ್ರೀ ಮಂಜಿನಾಥ ದೇವಸ್ಥಾನ ಮತ್ತೋಂದೆಡೆ ಸೀಮೆಯ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದಕ್ಷೀಣ ದಿಕ್ಕಿನಲ್ಲಿ ಎಣ್ಮೂರು ಆದಿ ಬೈದೇರುಗಳ ಗರಡಿ, ಹೀಗೆ ಪುಣ್ಯ ಕ್ಷೇತ್ರಗಳ ನಡುವೆ ಇದೊಂದು ಕ್ಷೇತ್ರ. ಪೂರ್ವದಲ್ಲಿ ಕುಮಾರ ಪರ್ವತ, ದಕ್ಷೀಣದಲ್ಲಿ ಕಾಯರ್ಮತಿ, ವಿಶೇಷವಾಗಿ ಬಂಟಮತಿ ಸುತ್ತಾಲೂ ಕಾಡು ಪ್ರದೇಶ, ಮಧ್ಯದಲ್ಲಿ ಬಯಲು ಸೀಮೆ. ಪೂರ್ವದಲ್ಲಿ ಓಟೆಚಾರೆ ಹುಟ್ಟಿ ಗಂಗೆಯಾಗಿ ನೆಗೆದು ಪಶ್ಚಿಮಕ್ಕೆ ಗೌರಿ ನದಿಯಾಗಿ ಹರಿಯುವಳು. ಬೈಲುಗದ್ದೆಯ ಮೇಲೆ ಪೂರ್ವ ದಿಕ್ಕಿನಲ್ಲಿ ನೆಲ್ಲಿಕಾಡ್ ಪ್ರದೇಶದ ಹತ್ತಿರ ಅಡ್ಕನೇ ಧರ್ಮಡ್ಕ ಪುರಾತನ ಕಾಲದಿಂದಲೂ ದಾನಧರ್ಮ ಮಾಡಿದ ಅಡ್ಕವೇ ಈ ಧರ್ಮಡ್ಕ. ಈ ರೀತಿ ಕಾಡು ನಾಡು ತುಂಬಿದ ಚಿಕ್ಕ ಪ್ರದೇಶದ ಒಂದು ಮೂಲೆಯಲ್ಲಿ ದೈವದೇವರುಗಳು ನೆಲೆನಿಂತು ಪವಾಡಗಳನ್ನು ತೋರಿಸಿ ನಂಬಿದವರಿಗೆ ಫಲಕೊಡುವ ಈ ಪುಣ್ಯ ಕ್ಷೇತ್ರವೇ ಮೂಲೆ ಮಜಲು ದೋಳ ಗರಡಿ. ಈ ಜಾಗ ಇಲ್ಲಿ ಹೇಗೆ ಸೃಷ್ಠಿಯಾಗಿ ಬಿಲ್ಲವ ಸಮುದಾಯದವರು ಇಲ್ಲಿ ಹೇಗೆ ಬಂದರು, ದೈವದೇವರುಗಳ ಸೇವೆ ಹೇಗೆ ಮಾಡಿದರು ಎಂದು ಈ ದೋಳ ಗರಡಿಯ ಪರಿಚಯ ಮಾಡಲು ಹೋದಾಗ ಈ ರೀತಿ ಹೇಳಬಹುದಾಗಿದೆ.