ಸ್ಥಳ ಇತಿಹಾಸದ ಪ್ರಕಾರ ಸುಮಾರು 370 ರಿಂದ 400 ವರ್ಷದ ಹಿಂದೆ ಪಡುಕುಡೂರಿನ ದೊಡ್ಡ ಮನೆಗೆ ಮೂರು ಜನ ಬಂದು ಹಸಿವೆ ಆಗುತ್ತದೆ ಊಟ ಕೊಡಿ ಎಂದು ಕೇಳಿಕೊಂಡರು. ಆಗ ಪಡುಕುಡೂರಿನ ದೊಡ್ಡ ಮನೆಯಲ್ಲಿ ಒಬ್ಬರು ವೃದ್ದೆ ಇದ್ದರು. ಆ ಮೂರು ಜನಕ್ಕೆ ಬಾಲೆ ಎಲೆಯಲ್ಲಿ ಗಂಜಿ ಮತ್ತು ಹರಿವೆಯ ಪದಾರ್ಥ ಹಾಕಿ ಊಟ ಹಾಕಿದರು. ಊಟ ಮಾಡಿದ ಮೇಲೆ ಬಾಲೆ ಎಲೆಯನ್ನು ಆ ಮೂರು ಜನರು ಪಡುಕುಡೂರಿನ ದೊಡ್ಡ ಮನೆಯ ಹಿಂಬದಿಯ ಒಂದು ಸ್ಥಳದಲ್ಲಿ ಹಾಕಿ, ನಾವು ಬಾಲೆ ಎಲೆ ಹಾಕಿದ ಸ್ಥಳದಲ್ಲಿ ನಾಲ್ಕು ಪಾಲು ಮಾಡಿದರೆ ಅದರಲ್ಲಿ ಹರಿವೆ ಗಿಡ ಬರುತ್ತೆ ಅಂತ ವೃದ್ಧೆಗೆ ಹೇಳಿದರು. ಅಲ್ಲಿಂದ ಮುಂದೆ ಸಾಗಿದ ಅವರು ಮಂಜಿತ್ತಾರ್ ಬೆಟ್ಟು ಶ್ರೀ ಭದ್ರಕಾಳಿ ಅಮ್ಮನವರ ಸನ್ನಿಧಿಯಲ್ಲಿ ಅಪ್ಪಣೆ ಪಡೆದು ಅಲ್ಲಿಯೇ ನೆಲೆಯಾಗುತ್ತಾರೆ. ಈ ಮೂರು ಜನ ಬೇರೆ ಯಾರು ಅಲ್ಲ ಶ್ರೀ ಬೃಹ್ಮ ಬೈದೆರ್ಕಳರು. ಒಂದು ದಿನ ಗರಡಿ ಕಟ್ಟಲು ಶ್ರೀ ಭದ್ರಕಾಳಿ ಅಮ್ಮನವರ ಎದುರುಗಡೆ ಇದ್ದ ದೊಡ್ಡ ಹಲಸಿನಮರವನ್ನು ಕಡಿದು, ಮದ್ಯಾಹ್ನ ಊಟಮಾಡಿ ಬಂದು ನೋಡುವಾಗ ಕಡಿದ ಮರವು ನೇರವಾಗಿ ನಿಂತಿತ್ತು ಮತ್ತು ಅದರಲ್ಲಿ ಹಲಸಿನ ಹಣ್ಣು ಕೂಡ ನೇತಾಡುತ್ತಾ ಇತ್ತು. ಇದನ್ನು ನೋಡಿದ ಗ್ರಾಮಸ್ಥರು, ಶ್ರೀ ಬಹ್ಮ ಬೈದೆರ್ಕಳವರ ಹತ್ತಿರ ಮೊರೆ ಇಟ್ಟಾಗ, ಗರಡಿಯನ್ನು ಕಟುವ್ಟುದಾದರೆ ಒಂದು ದಿನದಲ್ಲಿ ಕಟ್ಟಿ ಎಂದು ದೇವರ ನುಡಿ ಆಯಿತು. ಒಂದು ದಿನದಲ್ಲಿ ಗರಡಿ ಕಟ್ಟಲು ಅಸಾಧ್ಯದ ಮಾತು ಆದುದರಿಂದ ಇಂದಿಗೂ ಶ್ರೀ ಬ್ರಹ್ಮ ಬೈದೆರ್ಕಳವರಿಗೆ ಗರಡಿ ಇಲ್ಲ.
ಪ್ರತೀ ವರ್ಷ ಮಾಚರ್್ ತಿಂಗಳಲ್ಲಿ ಶ್ರೀ ಬಹ್ಮ ಬೈದೆರ್ಕಳ ನೇಮೋತ್ಸವು ಜರಗುತ್ತಿವೆ. ಹಾಗೂ ಹರಕೆಯ ನೇಮೋತ್ಸವು ಜರಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಕೋಣಗಳಿಗೆ ಗಗ್ಗರ ಕಟ್ಟಿ ಕಂಬಳ ನಡೆಯುತ್ತದೆ. ಇಲ್ಲಿ ಶ್ರೀ ಕೊಡಮಣಿತ್ತಾಯ ಸ್ಥಾನವು ಪಡುಕುಡೂರಿನ ದೊಡ್ಡ ಮನೆಯಲ್ಲಿ ಇದೆ. ಪ್ರತೀ ಮಂಗಳವಾರ ಶ್ರೀ ಕೊಡಮಣಿತ್ತಾಯ ಸ್ಥಾನದಲ್ಲಿ ಹೂ ನೀರು, ಪೂಜೆ, ನಾಯರ್ ಬೆಟ್ಟುವಿನಲ್ಲಿ ಶ್ರೀ ಬಹ್ಮ ಬೈದೆರ್ಕಳ ಸ್ಥಾನದಲ್ಲಿ ಸಂಕ್ರಮಣದಂದು ಹೂ ನೀರು, ಪೂಜೆ ಅಪರ್ಿಸಲಾಗುತ್ತದೆ.
ಶ್ರೀ ಬ್ರಹ್ಮ ಬೈದೆರ್ಕಳ ಸ್ಥಾನದ ವಿಳಾಸ
ಶ್ರೀ ಬಹ್ಮ ಬೈದೆರ್ಕಳ ಸ್ಥಾನ
ಮಂಜಿತ್ತಾರ್ ಬೆಟ್ಟು ಪಡುಕೂಡೂರು, ಅಂಚೆ ಎಲ್ಲಾರೆ,
ಮುನಿಯಾಲು
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ – 574108
ಪ್ರಶಾಂತ ಶೆಟ್ಟಿ
ಆಡಳಿತ ಮುಖ್ಯಸ್ಥರು
ಶ್ರೀ ಬ್ರಹ್ಮ ಬೈದೆರ್ಕಳ ಕೋಟೆ ಮಂಜಿತ್ತಾರ್ಬೆಟ್ಟು, ಪಡುಕುಡೂರು
Photo Gallery